AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 5 ಶತಕ ಬಾರಿಸಿಯೂ ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ

India's England Tour Starts with a Loss: ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನೊಂದಿಗೆ ಆರಂಭವಾಗಿದೆ. 371 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 5 ವಿಕೆಟ್‌ಗಳನ್ನು ಕಳೆದುಕೊಂಡು ಜಯ ಸಾಧಿಸಿತು. ಭಾರತದ ಕಳಪೆ ಫೀಲ್ಡಿಂಗ್ ಮತ್ತು ಬುಮ್ರಾ ಹೊರತುಪಡಿಸಿ ಉಳಿದ ಬೌಲರ್‌ಗಳ ಕಳಪೆ ಪ್ರದರ್ಶನ ಸೋಲಿಗೆ ಕಾರಣವೆನ್ನಬಹುದು.

IND vs ENG: 5 ಶತಕ ಬಾರಿಸಿಯೂ ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ
Team India
ಪೃಥ್ವಿಶಂಕರ
|

Updated on:Jun 24, 2025 | 11:11 PM

Share

ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ ಪ್ರವಾಸ ಮಾಡಿರುವ ಟೀಂ ಇಂಡಿಯಾ (Team India) ಸೋಲಿನೊಂದಿಗೆ ಸರಣಿ ಆರಂಭಿಸಿದೆ. ಲೀಡ್ಸ್‌ನಲ್ಲಿ ನಡೆದ ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 371 ರನ್​ಗಳ ಗುರಿ ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್‌ ತಂಡ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದರೊಂದಿಗೆ ಇಂಗ್ಲೆಂಡ್‌ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ವಾಸ್ತವವಾಗಿ ಟೀಂ ಇಂಡಿಯಾದ ಈ ಸೋಲಿಗೆ ಅದರ ಕಳಪೆ ಫೀಲ್ಡಿಂಗ್ ಹಾಗೂ ಜಸ್ಪ್ರೀತ್ ಬುಮ್ರಾರನ್ನು (Jasprit Bumrah) ಹೊರತುಪಡಿಸಿ ತಂಡದ ಉಳಿದ ಬೌಲರ್​ಗಳ ಕಳಪೆ ಬೌಲಿಂಗ್ ಪ್ರಮುಖ ಕಾರಣವಾಗಿತ್ತು. ಇಲ್ಲೊಂದು ನಾಚಿಕೆಗೇಡಿನ ಸಂಗತಿಯೆಂದರೆ ಟೆಸ್ಟ್ ಪಂದ್ಯವೊಂದರಲ್ಲಿ ಐದು ಶತಕಗಳನ್ನು ಬಾರಿಸಿಯೂ ಸೋಲಿಗೆ ಕೊರಳ್ಳೊಡಿದ ತಂಡವೆಂಬ ಹೀನಾಯ ದಾಖಲೆಗೆ ಟೀಂ ಇಂಡಿಯಾ ಕೊರಳೊಡ್ಡಿದೆ.

ಇತಿಹಾಸ ಸೃಷ್ಟಿಸಿದ ಇಂಗ್ಲೆಂಡ್

ಮತ್ತೊಂದೆಡೆ 371 ರನ್​ಗಳ ಗುರಿ ಬೆನ್ನಟ್ಟಿ ಗೆದ್ದ ಇಂಗ್ಲೆಂಡ್ ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿತು. ವಾಸ್ತವವಾಗಿ ಲೀಡ್ಸ್ ಮೈದಾನದಲ್ಲಿ ಅತಿ ಹೆಚ್ಚು ರನ್‌ ಬೆನ್ನಟ್ಟಿದ ದಾಖಲೆಯನ್ನು ಇಂಗ್ಲೆಂಡ್‌ ನಿರ್ಮಿಸಿದೆ. ಇಂಗ್ಲೆಂಡ್‌ ತಂಡದ ಗೆಲುವಿನ ಶ್ರೇಯ ಆರಂಭಿಕ ಬೆನ್ ಡಕೆಟ್​ಗೆ ಸಲ್ಲುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ 62 ರನ್‌ಗಳ ಇನ್ನಿಂಗ್ಸ್ ಆಡಿದ್ದ ಡಕೆಟ್, ಎರಡನೇ ಇನ್ನಿಂಗ್ಸ್‌ನಲ್ಲಿ 137 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿದರು.

ಲೀಡ್ಸ್ ಟೆಸ್ಟ್‌ನಲ್ಲಿ ಭಾರತ ಸೋತಿದ್ದೇಗೆ?

ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್​ಗೆ 371 ರನ್ ಗಳ ಬೃಹತ್ ಗುರಿ ನೀಡಿತ್ತು. ಪಂದ್ಯದ ಐದನೇ ದಿನದಂದು ಇಂಗ್ಲೆಂಡ್ ಗೆಲುವಿಗೆ 350 ರನ್​ಗಳು ಬೇಕಾಗಿದ್ದವು. ಇಂಗ್ಲೆಂಡ್ ತಂಡದ ಗೆಲುವಿನ ಚಿತ್ರಕಥೆಯನ್ನು ತಂಡದ ಆರಂಭಿಕರು ಬರೆದರು. ಆರಂಭಿಕರಾಗಿ ಬಂದ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ 188 ಹೆಚ್ಚು ರನ್​ಗಳ ಅದ್ಭುತ ಜೊತೆಯಾಟವನ್ನಾಡಿ ತಂಡದ ಗೆಲುವನ್ನು ಖಚಿತಪಡಿಸಿದರು. ಬೆನ್ ಡಕೆಟ್ ಶತಕ ಗಳಿಸಿದರೆ, ಕ್ರೌಲಿ 65 ರನ್ ಗಳಿಸಿ ಔಟಾದರು. ಕ್ರೌಲಿ ಔಟಾದ ನಂತರ ಬಂದ ಓಲಿ ಪೋಪ್ ಮತ್ತು ಹ್ಯಾರಿ ಬ್ರೂಕ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಆದರೆ ಇದಾದ ನಂತರ ನಾಯಕ ಬೆನ್ ಸ್ಟೋಕ್ಸ್, ಜೋ ರೂಟ್ ಜೊತೆ ಅರ್ಧಶತಕದ ಪಾಲುದಾರಿಕೆ ಮಾಡಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಉಳಿದಂತೆ ಮಾಜಿ ನಾಯಕ ಜೋ ರೂಟ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

IND vs ENG: ಇಂಗ್ಲೆಂಡ್‌ ತಂಡದ ಆಪತ್ಭಾಂದವ ಜೈಸ್ವಾಲ್; ಡಕೆಟ್ ಕ್ಯಾಚ್ ಬಿಟ್ಟು ಶತಕ ಸಿಡಿಸಲು ನೆರವಾದ ಯಶಸ್ವಿ

2ನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್, ಫೀಲ್ಡಿಂಗ್ ವೈಫಲ್ಯ

ಲೀಡ್ಸ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಅದ್ಭುತ ಬ್ಯಾಟಿಂಗ್ ಮಾಡಿತು ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್ ತುಂಬಾ ಕಳಪೆಯಾಗಿತ್ತು. ಎರಡನೇ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ, ಸ್ಟ್ರೈಕ್ ಬೌಲರ್‌ಗಳಾದ ಬುಮ್ರಾ ಮತ್ತು ಸಿರಾಜ್ ಇಬ್ಬರೂ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಪಡೆದರಾದರೂ ರನ್​ಗಳಿಗೆ ಕಡಿವಾಣ ಹಾಕಲಿಲ್ಲ. ಫೀಲ್ಡರ್‌ಗಳ ಬೆಂಬಲ ಸಿಗದಿದ್ದರೆ ಬೌಲರ್‌ಗಳಾದರೂ ಏನು ಮಾಡಲು ಸಾಧ್ಯ ಹೇಳಿ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು 6 ಕ್ಯಾಚ್‌ಗಳನ್ನು ಕೈಬಿಟ್ಟಿತು. ಅದರಲ್ಲೂ ಯಶಸ್ವಿ ಜೈಸ್ವಾಲ್ ಒಬ್ಬರೇ ಪಂದ್ಯದಲ್ಲಿ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟರು. ಇದರ ಪರಿಣಾಮವಾಗಿ ಟೀಂ ಇಂಡಿಯಾಕ್ಕೆ ಹೀನಾಯ ಸೋಲು ಎದುರಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 pm, Tue, 24 June 25

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ