Big news: ರಾಹುಲ್ ದ್ರಾವಿಡ್ ಆರೋಗ್ಯದಲ್ಲಿ ಏರುಪೇರು! ತಂಡ ತೊರೆದು ಬೆಂಗಳೂರಿಗೆ ವಾಪಸ್

| Updated By: ಪೃಥ್ವಿಶಂಕರ

Updated on: Jan 13, 2023 | 11:13 AM

Rahul Dravid Unwell: ಮಾಧ್ಯಮ ವರದಿಗಳ ಪ್ರಕಾರ, ದ್ರಾವಿಡ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆದ್ದರಿಂದ ಅವರು ಕೋಲ್ಕತ್ತಾದಿಂದ ತಮ್ಮ ಮನೆಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

Big news: ರಾಹುಲ್ ದ್ರಾವಿಡ್ ಆರೋಗ್ಯದಲ್ಲಿ ಏರುಪೇರು! ತಂಡ ತೊರೆದು ಬೆಂಗಳೂರಿಗೆ ವಾಪಸ್
ರಾಹುಲ್ ದ್ರಾವಿಡ್
Follow us on

ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು (India Vs Sri Lanka) ಸೋಲಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ. ಆದರೆ ಈ ನಡುವೆ ಟೀಂ ಇಂಡಿಯಾಗೆ ಆತಂಕದ ವಿಚಾರ ಎದುರಾಗಿದೆ. ತಿರುವನಂತಪುರದಲ್ಲಿ ನಡೆಯುವ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ತಂಡವನ್ನು ತೋರಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ದ್ರಾವಿಡ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆದ್ದರಿಂದ ಅವರು ಕೋಲ್ಕತ್ತಾದಿಂದ ತಮ್ಮ ಮನೆಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಪ್ರಯಾಣ

ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ರಾಹುಲ್ ಅವರಿಗೆ ಎರಡನೇ ಪಂದ್ಯಕ್ಕೂ ಮುನ್ನ ಹೋಟೆಲ್‌ನಲ್ಲಿ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರಿಗೆ ವೈದ್ಯರ ವ್ಯವಸ್ಥೆಯನ್ನು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಒದಗಿಸಿತ್ತು. ಹೀಗಾಗಿ ರಾಹುಲ್ ಕೊಂಚ ಚೇತರಿಸಿಕೊಂಡರು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಲಿದ್ದು, ವೈದ್ಯರು ಗ್ರೀನ್ ಸಿಗ್ನಲ್ ನೀಡಿದರೆ ಜನವರಿ 15ರಂದು ನಡೆಯಲಿರುವ ಪಂದ್ಯಕ್ಕೆ ಅವರು ತಿರುವನಂತಪುರಕ್ಕೆ ತೆರಳಲಿದ್ದಾರೆ.

Rahul Dravid: 30 ಸಾವಿರ ಎಸೆತಗಳು, 735 ಗಂಟೆಗಳ ಬ್ಯಾಟಿಂಗ್! ರಾಹುಲ್ ದ್ರಾವಿಡ್ ಹೆಸರಿನಲ್ಲಿವೆ ವಿಶಿಷ್ಟ ದಾಖಲೆಗಳು

ಕೋಲ್ಕತ್ತಾದಲ್ಲಿ ಜನ್ಮದಿನ ಆಚರಿಸಿಕೊಂಡಿದ್ದ ರಾಹುಲ್

ಎರಡು ದಿನಗಳ ಹಿಂದೆ ರಾಹುಲ್ ದ್ರಾವಿಡ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಜನವರಿ 11ರಂದು ಕೋಲ್ಕತ್ತಾ ತಲುಪಿದಾಗ ತಂಡದ ಹೋಟೆಲ್‌ನಲ್ಲಿ ಕೇಕ್ ಕತ್ತರಿಸಿ, ದ್ರಾವಿಡ್ ಜನ್ಮದಿನವನ್ನು ಆಚರಿಸಲಾಗಿತ್ತು. ತಂಡದ ಹೊರತಾಗಿ ಕ್ರಿಕೆಟ್ ಜಗತ್ತಿನ ಎಲ್ಲ ದೊಡ್ಡ ವ್ಯಕ್ತಿಗಳು ಅವರಿಗೆ ಶುಭ ಕೋರಿದ್ದರು. ಬಳಿಕ ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿಯನ್ನೂ ಗೆದ್ದ ಟೀಂ ಇಂಡಿಯಾ, ದ್ರಾವಿಡ್​ಗೆ ಗೆಲುವನ್ನು ಉಡುಗೊರೆಯಾಗಿ ನೀಡಿದೆ.

2ನೇ ಏಕದಿನ ಪಂದ್ಯದ ಪಕ್ಷಿ ನೋಟ

ಈ ಪಂದ್ಯದಲ್ಲಿ ಶ್ರೀಲಂಕಾ ಮೊದಲು ಬ್ಯಾಟ್ ಮಾಡಿದರೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಕುಲ್ದೀಪ್ ಸ್ಪಿನ್ ಮ್ಯಾಜಿಕ್​ ಜೊತೆಗೆ ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ 215 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಭಾರತ 43.2 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಸಾಧಿಸಿತು. ಬೌಲಿಂಗ್​ನಲ್ಲಿ ಕುಲ್ದೀಪ್ ಮೂರು ವಿಕೆಟ್ ಪಡೆದು ಮಿಂಚಿದರೆ, ಕೆಎಲ್ ರಾಹುಲ್ ಬ್ಯಾಟ್ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 103 ಎಸೆತಗಳನ್ನು ಎದುರಿಸಿದ ರಾಹುಲ್ ಅಜೇಯ 64 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಕೂಡ 36 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ಅಕ್ಷರ್ ಪಟೇಲ್ 21 ರನ್​ಗಳ ಕೊಡುಗೆ ನೀಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:48 am, Fri, 13 January 23