Rahul Dravid: 30 ಸಾವಿರ ಎಸೆತಗಳು, 735 ಗಂಟೆಗಳ ಬ್ಯಾಟಿಂಗ್! ರಾಹುಲ್ ದ್ರಾವಿಡ್ ಹೆಸರಿನಲ್ಲಿವೆ ವಿಶಿಷ್ಟ ದಾಖಲೆಗಳು

Happy Birthday Rahul Dravid: 1973 ರ ಜನವರಿ 11 ರಂದು ಇಂದೋರ್‌ನಲ್ಲಿ ಜನಿಸಿದ ದ್ರಾವಿಡ್ 1996 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

Rahul Dravid: 30 ಸಾವಿರ ಎಸೆತಗಳು, 735 ಗಂಟೆಗಳ ಬ್ಯಾಟಿಂಗ್! ರಾಹುಲ್ ದ್ರಾವಿಡ್ ಹೆಸರಿನಲ್ಲಿವೆ ವಿಶಿಷ್ಟ ದಾಖಲೆಗಳು
ರಾಹುಲ್ ದ್ರಾವಿಡ್​ಗೆ 50ರ ಸಂಭ್ರಮ
Follow us
TV9 Web
| Updated By: ಪೃಥ್ವಿಶಂಕರ

Updated on:Jan 11, 2023 | 10:59 AM

Happy Birthday Rahul Dravid: ರಾಹುಲ್ ದ್ರಾವಿಡ್ (Rahul Dravid)… ವಿಶ್ವ ಕ್ರಿಕೆಟ್​ನ ಸವ್ಯಸಾಚಿ. ದಿ ವಾಲ್ ಖ್ಯಾತಿಯ ದ್ರಾವಿಡ್ ಅವರ ದಾಖಲೆ ಇಲ್ಲದೆ ಅವರ ಬಗ್ಗೆ ಮಾತನಾಡುವುದು ಅಸಾಧ್ಯ. ದಾಖಲೆಗಳಿಲ್ಲದೆ ರಾಹುಲ್ ದ್ರಾವಿಡ್ ಹೆಸರೂ ಕೂಡ ಅಪೂರ್ಣ ಎನಿಸುತ್ತದೆ. ತಮ್ಮ 16 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದಲ್ಲದೆ, ಹಲವು ದಾಖಲೆಗಳನ್ನು ಮಾಡುವುದರೊಂದಿಗೆ ದೊಡ್ಡ ದೊಡ್ಡ ದಾಖಲೆಗಳೂ ಮುರಿದಿದ್ದಾರೆ. ಆದರೆ ಅವರ ಹೆಸರಿನಲ್ಲಿ ದಾಖಲಾಗಿರುವ ಕೆಲವು ದಾಖಲೆಗಳನ್ನು ಮುರಿಯುವುದು ಅಸಾಧ್ಯದ ಮಾತು ಎಂತಲೇ ಹೇಳಲಾಗುತ್ತದೆ. ಅಂತಹ ಕಠಿಣ ದಾಖಲೆಗಳನ್ನು ಮಾಡಿದ ದ್ರಾವಿಡ್ ಇಂದು 50 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

1973 ರ ಜನವರಿ 11 ರಂದು ಇಂದೋರ್‌ನಲ್ಲಿ ಜನಿಸಿದ ದ್ರಾವಿಡ್ 1996 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಬಳಿಕ ತಮ್ಮ 16 ವರ್ಷಗಳ ಕ್ರಿಕೆಟ್​ ಜೀವನಕ್ಕೆ 2012 ರಲ್ಲಿ ವಿದಾಯ ಹೇಳಿದ ದ್ರಾವಿಡ್ ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಪ್ರಾಬಲ್ಯ

ದ್ರಾವಿಡ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, 164 ಟೆಸ್ಟ್ ಪಂದ್ಯಗಳನ್ನಾಡಿರುವ ದಿ ವಾಲ್, 52.31 ಸರಾಸರಿಯಲ್ಲಿ 13 ಸಾವಿರದ 288 ರನ್ ಗಳಿಸಿದ್ದಾರೆ. ಇದರಲ್ಲಿ 36 ಶತಕಗಳು ಮತ್ತು 63 ಅರ್ಧ ಶತಕಗಳು ಸೇರಿವೆ. ಅದೇ ಸಮಯದಲ್ಲಿ, 344 ಏಕದಿನ ಪಂದ್ಯಗಳಲ್ಲಿ 12 ಶತಕಗಳು ಮತ್ತು 83 ಅರ್ಧ ಶತಕಗಳನ್ನು ಒಳಗೊಂಡಂತೆ 39.16 ರ ಸರಾಸರಿಯಲ್ಲಿ 10 ಸಾವಿರದ 889 ರನ್ಗಳನ್ನು ದ್ರಾವಿಡ್ ಬಾರಿಸಿದ್ದಾರೆ. ಇದರೊಂದಿಗೆ ವಿಕೆಟ್ ಕೀಪಿಂಗ್​ನಲ್ಲಿ ತನ್ನ ಸಾಮಥ್ರ್ಯ ತೋರಿರುವ ದ್ರಾವಿಡ್ ಒಟ್ಟು 406 ಕ್ಯಾಚ್‌ಗಳನ್ನು ಪಡೆದಿದ್ದು, ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ 14 ಸ್ಟಂಪಿಂಗ್ ಕೂಡ ಮಾಡಿದ್ದಾರೆ.

ಕ್ರಿಕೆಟ್ ಲೋಕದಲ್ಲಿ ದ್ರಾವಿಡ್ ಬರೆದ ದಾಖಲೆಗಳಿವು

  1. ದ್ರಾವಿಡ್ ತಮ್ಮ ಇಡೀ ಟೆಸ್ಟ್ ವೃತ್ತಿಜೀವನದಲ್ಲಿ 44 ಸಾವಿರದ 152 ನಿಮಿಷಗಳು ಅಂದರೆ 735 ಗಂಟೆ 52 ನಿಮಿಷಗಳನ್ನು ಕ್ರೀಸ್‌ನಲ್ಲಿ ಕಳೆದಿದ್ದಾರೆ. ಅಂದರೆ, ಅವರು ಸುಮಾರು 735 ಗಂಟೆಗಳ ಕಾಲ ಬ್ಯಾಟ್ ಮಾಡಿದ ದಾಖಲೆ ಬರೆದಿದ್ದಾರೆ.
  2. ಟೆಸ್ಟ್ ಕ್ರಿಕೆಟ್‌ನಲ್ಲಿ 30,000ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ದ್ರಾವಿಡ್. ಅವರು ತಮ್ಮ ವೃತ್ತಿಜೀವನದಲ್ಲಿ 31 ಸಾವಿರದ 258 ಎಸೆತಗಳನ್ನು ಆಡಿದ್ದಾರೆ.
  3. ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ 286 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಗೋಲ್ಡನ್ ಡಕ್ ಆಗದ ದಾಖಲೆಯನ್ನು ದ್ರಾವಿಡ್ ಬರೆದಿದ್ದಾರೆ.
  4. 2004 ರಿಂದ ಮೊದಲ ಬಾರಿಗೆ ಐಸಿಸಿ ಪ್ರಶಸ್ತಿಗಳನ್ನು ನೀಡಲು ಆರಂಭಿಸಲಾಯಿತು. ಇದರಲ್ಲಿ ರಾಹುಲ್ ದ್ರಾವಿಡ್​ಗೆ ವರ್ಷದ ಟೆಸ್ಟ್ ಕ್ರಿಕೆಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  5. ಅಲ್ಲದೆ ದ್ರಾವಿಡ್ ಎಲ್ಲಾ ಟೆಸ್ಟ್ ಆಡುವ ತಂಡಗಳ ವಿರುದ್ಧ ಶತಕಗಳನ್ನು ಗಳಿಸಿದ ದಾಖಲೆಯನ್ನು ಬರೆದಿದ್ದಾರೆ.
  6. ಅತಿ ಹೆಚ್ಚು ರನ್ ಗಳಿಸಿದ, ಕ್ರೀಸ್​ನಲ್ಲಿ ಹೆಚ್ಚು ಕಾಲ ಕಳೆದ ಆಟಗಾರನಾಗಿ ಮಾತ್ರ ರಾಹುಲ್ ದ್ರಾವಿಡ್ ದಾಖಲೆ ಬರೆದಿಲ್ಲ. ಬದಲಿಗೆ ಮತ್ತೊಂದು ವಿಶಿಷ್ಟ ದಾಖಲೆ ಅವರ ಹೆಸರಿನಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಮೊದಲ ವಿಕೆಟ್‌ಕೀಪರ್ ಅಲ್ಲದ ಆಟಗಾರ ದ್ರಾವಿಡ್. ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 210 ಕ್ಯಾಚ್‌ಗಳನ್ನು ಪಡೆದಿದ್ದಾರೆ.
  7. ಭಾರತ ತಂಡದ ಪ್ರಸ್ತುತ ಕೋಚ್ ಆಗಿರುವ ದ್ರಾವಿಡ್ ತಮ್ಮ ಏಕದಿನ ವೃತ್ತಿಜೀವನದಲ್ಲಿ ಎರಡು ಬಾರಿ 300 ಕ್ಕೂ ಹೆಚ್ಚು ಪಾಲುದಾರಿಕೆಗಳನ್ನು ಹಂಚಿಕೊಂಡಿದ್ದಾರೆ.
  8. ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಎರಡು ಬಾರಿ 300ಕ್ಕೂ ಹೆಚ್ಚು ಜೊತೆಯಾಟ ನೀಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Published On - 10:57 am, Wed, 11 January 23

ಮೋಕ್ಷಿತಾ ಪೈ ಹಳೇ ಕೇಸ್​ ಬಗ್ಗೆ ಗೋಲ್ಡ್ ಸುರೇಶ್ ಹೇಳಿದ್ದೇನು?
ಮೋಕ್ಷಿತಾ ಪೈ ಹಳೇ ಕೇಸ್​ ಬಗ್ಗೆ ಗೋಲ್ಡ್ ಸುರೇಶ್ ಹೇಳಿದ್ದೇನು?
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ಈ ಬಾರಿ ಬಿಗ್​ಬಾಸ್​ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್
ಈ ಬಾರಿ ಬಿಗ್​ಬಾಸ್​ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ