Rahul Dravid: ಬೇಡವಾದ್ರಾ ರಾಹುಲ್ ದ್ರಾವಿಡ್? ವಿದೇಶಿ ಕೋಚ್ ಹುಡುಕಾಟ ಆರಂಭಿಸಿದ ಬಿಸಿಸಿಐ..!
Rahul Dravid: ಇನ್ನೂ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ. ನಾವು ವಿವಿಧ ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ. ರಾಹುಲ್ ದ್ರಾವಿಡ್ ನಮ್ಮ ಯೋಜನೆಯ ಭಾಗವಾಗಿದ್ದಾರೆ. ಆದರೆ ಅವರಿಗೂ ಕೆಲಸದ ಹೊರೆ ಹೆಚ್ಚಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಟೀಂ ಇಂಡಿಯಾವನ್ನು (India vs Sri Lanka) ಪ್ರಕಟಿಸಿರುವ ಬಿಸಿಸಿಐ (BCCI) ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ವಾಸ್ತವವಾಗಿ ಟಿ20 ವಿಶ್ವಕಪ್ ಸೋತ ಬಳಿಕ 2023ರಿಂದ ಟೀಂ ಇಂಡಿಯಾದಲ್ಲಿ ಕೆಲವು ಮಹತ್ವದ ಬದಲಾವಣೆಗಳು ಕಂಡುಬರಲಿವೆ ಎಂಬ ಟಾಕ್ ಶುರುವಾಗಿತ್ತು. ಅದಕ್ಕೆ ತಕ್ಕಂತೆ ಲಂಕಾ ವಿರುದ್ಧ ಟಿ20 ತಂಡ ಪ್ರಕಟಿಸಿರುವ ಬಿಸಿಸಿಐ, ತಂಡದ ಹಿರಿಯ ಆಟಗಾರರು ಮತ್ತು ಅನುಭವಿಗಳಿಗೆ ಚುಟುಕು ಮಾದರಿಯಿಂದ ಗೇಟ್ಪಾಸ್ ನೀಡಿದ್ದಾರೆ. ಅಲ್ಲದೆ ಯುವ ಆಟಗಾರರೊಂದಿಗೆ ಹೊಸ ವಿಧಾನದಲ್ಲಿ ಟಿ20 ತಂಡವನ್ನು ಕಟ್ಟಲು ಬಿಸಿಸಿಐ ಮುಂದಾಗಿದೆ. ಈ ಬದಲಾವಣೆಯೊಂದಿಗೆ ಟೀಂ ಇಂಡಿಯಾದ ಟಿ20 ತಂಡದ ಕೋಚ್ ಕೂಡ ಬದಲಾಗಲಿದ್ದಾರೆ ಎಂಬ ಮಾತು ಕೇಳಲಾರಂಭಿಸಿದೆ. ಈಗಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರನ್ನು ಟಿ20 ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ವಿದೇಶಿ ಕೋಚ್ ಅನ್ನು ತಂದು ಕೂರಿಸಲು ಬಿಸಿಸಿಐ ಚಿಂತಿಸುತ್ತಿದೆ ಎಂದು ವರದಿಯಾಗಿದೆ.
ನಂತರವೇ ಅಂತಿಮ ನಿರ್ಧಾರ
ಟಿ20 ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಇದೀಗ ಕೋಚಿಂಗ್‌ನಲ್ಲೂ ಬದಲಾವಣೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಟಿ20ಯಲ್ಲಿ ರಾಹುಲ್ ದ್ರಾವಿಡ್ ಸ್ಥಾನಕ್ಕೆ ಬಿಸಿಸಿಐ ಹುಡುಕಾಟ ಆರಂಭಿಸಿದೆ. ದ್ರಾವಿಡ್ ಸ್ಥಾನಕ್ಕೆ ವಿದೇಶಿ ಕೋಚ್ ಅನ್ನು ಸಹ ಪರಿಗಣಿಸಬಹುದು ಎಂದು ಇನ್ಸೈಡ್ ಸ್ಪೋರ್ಟ್ ವರದಿ ಮಾಡಿದೆ. ಆದರೆ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಜತೆ ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂಬ ಮಾಹಿತಿಯೂ ಹೊರಬಿದ್ದಿದೆ.
KL Rahul: ಕಳಪೆ ಫಾರ್ಮ್ನಲ್ಲಿರುವ ಕನ್ನಡಿಗ ರಾಹುಲ್ ಸ್ಥಾನಕ್ಕೆ ಈ ಐದು ಯುವ ಆಟಗಾರರ ನಡುವೆ ಫೈಪೋಟಿ..!
ಬಿಸಿಸಿಐ ಅಧಿಕಾರಿ ಹೇಳಿದ್ದೇನು?
“ಇನ್ನೂ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ. ನಾವು ವಿವಿಧ ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ. ರಾಹುಲ್ ದ್ರಾವಿಡ್ ನಮ್ಮ ಯೋಜನೆಯ ಭಾಗವಾಗಿದ್ದಾರೆ. ಆದರೆ ಅವರಿಗೂ ಕೆಲಸದ ಹೊರೆ ಹೆಚ್ಚಾಗಿದೆ. ಈಗ ನಮ್ಮ ಗಮನವೆಲ್ಲ ತವರಿನಲ್ಲಿ ನಡೆಯಲಿರುವ ವಿಶ್ವಕಪ್ ಮೇಲೆ ಇದೆ. ಆದ್ದರಿಂದ ನಿಸ್ಸಂಶಯವಾಗಿ ನಮ್ಮ ಗಮನ ಈಗ ಟಿ20 ತಂಡದ ಮೇಲೆ ಇಲ್ಲ. ಸದ್ಯ ಟಿ20 ತಂಡದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಿಎಸಿ ಮತ್ತು ಆಯ್ಕೆಗಾರರ ನಡುವಿನ ಚರ್ಚೆಯ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇನ್ಸೈಡ್ ಸ್ಪೋರ್ಟ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ದ್ರಾವಿಡ್ ಕೋಚಿಂಗ್ ಮೇಲೆ ಪ್ರಶ್ನೆ
ಟಿ20 ವಿಶ್ವಕಪ್ ಸೋಲಿನ ನಂತರ ನಾಯಕ ರೋಹಿತ್ ಶರ್ಮಾ ಅವರಂತೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಶೈಲಿಯನ್ನು ಪ್ರಶ್ನಿಸಲಾಗಿತ್ತು. ಅಲ್ಲದೆ ಟಿ20 ಮಾದರಿಯಲ್ಲಿ ಅವರು ಬಳಸುತ್ತಿರುವ ತಂತ್ರಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಟಿ20 ಯುವ ಆಟಗಾರರ ಕ್ರಿಕೆಟ್ ಆಗಿದೆ. ಆದರೆ ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿ ಅನುಭವಿ ಆಟಗಾರರಿಗೆ ಆದ್ಯತೆ ನೀಡಿದೆ ಎಂಬುದು ಕ್ರಿಕೆಟ್ ಪಂಡಿತರ ವಾದವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ