AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್ ಮುಕ್ತಾಯದ ಬೆನ್ನಲ್ಲೇ ಟೆಸ್ಟ್ ಸರಣಿ ಆಡಲಿದೆ ಟೀಮ್ ಇಂಡಿಯಾ

Team India's Full Schedule 2025: ಭಾರತ ತಂಡವು ಏಷ್ಯಾಕಪ್ ಮುಕ್ತಾಯದ ಬೆನ್ನಲ್ಲೇ 2 ಪ್ರಮುಖ ಸರಣಿಗಳನ್ನು ಆಡಲಿದೆ. ಈ ಸರಣಿಯಲ್ಲಿ 2 ಟೆಸ್ಟ್, 3 ಏಕದಿನ ಹಾಗೂ ಟಿ20 ಪಂದ್ಯಗಳರಲಿವೆ. ಈ ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ವಿರುದ್ಧದ ಸರಣಿಗಳಿಗಾಗಿ ಸಜ್ಜಾಗಲಿದೆ.

ಏಷ್ಯಾಕಪ್ ಮುಕ್ತಾಯದ ಬೆನ್ನಲ್ಲೇ ಟೆಸ್ಟ್ ಸರಣಿ ಆಡಲಿದೆ ಟೀಮ್ ಇಂಡಿಯಾ
Team India
ಝಾಹಿರ್ ಯೂಸುಫ್
|

Updated on: Aug 24, 2025 | 7:38 AM

Share

ಏಷ್ಯಾಕಪ್ ಟಿ20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಸೆಪ್ಟೆಂಬರ್ 28 ರವರೆಗೆ ನಡೆಯಲಿರುವ ಈ ಟೂರ್ನಿಯ ಬೆನ್ನಲ್ಲೇ ಟೀಮ್ ಇಂಡಿಯಾ ಟೆಸ್ಟ್ ಸರಣಿಗೆ ಸಜ್ಜಾಗಲಿದೆ. ಅದು ಕೂಡ ತವರಿನಲ್ಲಿ ಎಂಬುದು ವಿಶೇಷ.

ಏಷ್ಯಾಕಪ್ ಫೈನಲ್ ಪಂದ್ಯವು ಸೆಪ್ಟೆಂಬರ್ 28 ರಂದು ನಡೆಯಲಿದ್ದು, ಇದರ ಬೆನ್ನಲ್ಲೇ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯು ಅಕ್ಟೋಬರ್ 2 ರಿಂದ ಶುರುವಾಗಲಿದೆ.

ಅಕ್ಟೋಬರ್ 2 ರಂದು ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು 2ನೇ ಟೆಸ್ಟ್ ಪಂದ್ಯ ಶುರುವಾಗಲಿರುವುದು ಅಕ್ಟೋಬರ್ 10 ರಿಂದ. ಈ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇನ್ನು ಈ ಎರಡು ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಮತ್ತೆ ಸೀಮಿತ ಓವರ್​​​ಗಳ ಸರಣಿಗೆ ಸಜ್ಜಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಈ ವೈಟ್ ಬಾಲ್​​ನಲ್ಲಿ ಸರಣಿಯಲ್ಲಿ ಭಾರತ ತಂಡವು ಮೂರು ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತದ ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ:

  • ಭಾರತ vs ಯುಎಇ ಸೆಪ್ಟೆಂಬರ್ 10 | ಬುಧವಾರ
  • ಭಾರತ vs ಪಾಕಿಸ್ತಾನ್ ಸೆಪ್ಟೆಂಬರ್ 14 | ಭಾನುವಾರ
  • ಭಾರತ vs ಒಮಾನ್ ಸೆಪ್ಟೆಂಬರ್ 19 | ಶುಕ್ರವಾರ

ಏಷ್ಯಾಕಪ್ ಸೂಪರ್-4 ಹಂತದ ವೇಳಾಪಟ್ಟಿ:

  • ಬಿ1 vs ಬಿ2 – 20 ಸೆಪ್ಟೆಂಬರ್ | ಶನಿವಾರ
  • A1 vs A2 – 21 ಸೆಪ್ಟೆಂಬರ್ | ಭಾನುವಾರ
  • A2 vs B1 – 23 ಸೆಪ್ಟೆಂಬರ್ | ಮಂಗಳವಾರ
  • A1 vs B2 – 24 ಸೆಪ್ಟೆಂಬರ್ | ಬುಧವಾರ
  • A2 vs B2 – 25 ಸೆಪ್ಟೆಂಬರ್ | ಗುರುವಾರ
  • A1 vs B1 – 26 ಸೆಪ್ಟೆಂಬರ್ | ಶುಕ್ರವಾರ
  • (ಭಾರತವು A1 ಅಥವಾ A2 ಆಗಿರುತ್ತದೆ)

ಭಾರತ vs ವೆಸ್ಟ್ ಇಂಡೀಸ್ ಸರಣಿ ವೇಳಾಪಟ್ಟಿ:

  • ಅಕ್ಟೋಬರ್ 2: ಮೊದಲ ಟೆಸ್ಟ್ ಪಂದ್ಯ ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
  • ಅಕ್ಟೋಬರ್ 10: ಎರಡನೇ ಟೆಸ್ಟ್ ಪಂದ್ಯ ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

ಇದನ್ನೂ ಓದಿ: ವಿಶ್ವ ದಾಖಲೆಯಾಟ… 378 ರನ್​​ಗಳೊಂದಿಗೆ ಇತಿಹಾಸ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್​ಕೆ

ಭಾರತ vs ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ:

  • ಅಕ್ಟೋಬರ್ 19: ಮೊದಲ ಏಕದಿನ ಪಂದ್ಯ ಪರ್ತ್ ಕ್ರೀಡಾಂಗಣ, ಪರ್ತ್
  • ಅಕ್ಟೋಬರ್ 23: ಎರಡನೇ ಏಕದಿನ ಪಂದ್ಯ ಅಡಿಲೇಡ್ ಓವಲ್
  • ಅಕ್ಟೋಬರ್ 25: ಮೂರನೇ ಏಕದಿನ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ
  • ಅಕ್ಟೋಬರ್ 29: ಮೊದಲ ಟಿ20 ಪಂದ್ಯ ಮನುಕಾ ಓವಲ್, ಕ್ಯಾನ್‌ಬೆರಾ
  • ಅಕ್ಟೋಬರ್ 31: ಎರಡನೇ ಟಿ20 ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನ
  • ನವೆಂಬರ್ 2,: ಮೂರನೇ ಟಿ20 ಪಂದ್ಯ ಬೆಲ್ಲೆರಿವ್ ಓವಲ್, ಹೋಬಾರ್ಟ್
  • ನವೆಂಬರ್ 6: ನಾಲ್ಕನೇ ಟಿ20 ಪಂದ್ಯ ಗೋಲ್ಡ್ ಕೋಸ್ಟ್ ಕ್ರೀಡಾಂಗಣ, ಕ್ಯಾರಾರಾ
  • ನವೆಂಬರ್ 8: ಐದನೇ ಟಿ20 ಪಂದ್ಯ ದಿ ಗಬ್ಬಾ, ಬ್ರಿಸ್ಬೇನ್

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!