IND vs ENG 1st Test: ಇಂದಿನಿಂದ ಹೈದರಾಬಾದ್​ನಲ್ಲಿ ಭಾರತದ ತರಬೇತಿ ಶಿಬಿರ: ಪ್ರ್ಯಾಕ್ಟೀಸ್ ನಡುವೆ ಅಯೋಧ್ಯೆ ದರ್ಶನ?

|

Updated on: Jan 21, 2024 | 7:12 AM

India vs England 1st Test: ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದಕ್ಕಾಗಿ ಜನವರಿ 20 ರ ಶನಿವಾರದಿಂದ ಭಾರತೀಯ ಆಟಗಾರರು ಹೈದರಾಬಾದ್ ತಲುಪಿದ್ದಾರೆ. ಇಂದಿನಿಂದ ರೋಹಿತ್ ಪಡೆ ಅಭ್ಯಾಸ ಶುರುಮಾಡಲಿದೆ.

IND vs ENG 1st Test: ಇಂದಿನಿಂದ ಹೈದರಾಬಾದ್​ನಲ್ಲಿ ಭಾರತದ ತರಬೇತಿ ಶಿಬಿರ: ಪ್ರ್ಯಾಕ್ಟೀಸ್ ನಡುವೆ ಅಯೋಧ್ಯೆ ದರ್ಶನ?
Team India
Follow us on

ಹೊಸ ವರ್ಷ 2024ರ ಮೊದಲ 20 ದಿನಗಳಲ್ಲಿ ಭಾರತ ಕ್ರಿಕೆಟ್ ತಂಡ (Indian Cricket Team) ಭರ್ಜರಿ ಪ್ರದರ್ಶನ ತೋರಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ, ಆದರೆ ಸಮಬಲ ಸಾಧಿಸಿತು. 2024 ರ ಟಿ20 ವಿಶ್ವಕಪ್‌ಗೆ ಮೊದಲು ಅಫ್ಘಾನ್ ವಿರುದ್ಧ ಕೊನೆಯ ಟಿ20 ಸರಣಿ ಆಡಿ ಯಶಸ್ಸು ಸಾಧಿಸಿತು. ಇದೀಗ ಮತ್ತೊಂದು ಕಠಿಣ ಸವಾಲಿಗೆ ಟೀಮ್ ಇಂಡಿಯಾ ಸಜ್ಜಾಗಬೇಕಿದೆ. 4 ದಿನಗಳ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳು 5 ಟೆಸ್ಟ್ ಪಂದ್ಯಗಳ ಸುದೀರ್ಘ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಜನವರಿ 25 ರಿಂದ ಪ್ರಾರಂಭವಾಗುವ ಈ ಸರಣಿಗಾಗಿ, ಟೀಮ್ ಇಂಡಿಯಾ ಇಂದಿನಿಂದ ತರಬೇತಿ ಶುರುಮಾಡಲಿದೆ.

ಸರಣಿಯ ಮೊದಲ ಟೆಸ್ಟ್ ಪಂದ್ಯ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದಕ್ಕಾಗಿ ಜನವರಿ 20 ರ ಶನಿವಾರದಿಂದ ಭಾರತೀಯ ಆಟಗಾರರು ಹೈದರಾಬಾದ್ ತಲುಪಿದ್ದಾರೆ. ಜನವರಿ 17 ರಂದು ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ 20 ನಲ್ಲಿ ಜಯಗಳಿಸಿದ ನಂತರ, ಬಿಸಿಸಿಐ ಟೆಸ್ಟ್ ತಂಡದ ಆಟಗಾರರಿಗೆ 2 ದಿನಗಳ ವಿರಾಮವನ್ನು ನೀಡಿತ್ತು ಮತ್ತು ಜನವರಿ 20 ರಿಂದ ಹೈದರಾಬಾದ್‌ನಲ್ಲಿ ಸಭೆ ಸೇರುವಂತೆ ಆದೇಶಿಸಿತ್ತು. ಇಂದಿನಿಂದ ಟೀಮ್ ಇಂಡಿಯಾ ಹೈದರಾಬಾದ್‌ನಲ್ಲಿಯೇ 4 ದಿನಗಳ ತರಬೇತಿ ಶಿಬಿರವನ್ನು ಪ್ರಾರಂಭಿಸಲಿದೆ.

ಅಭ್ಯಾಸ ನಡುವೆ ಅಯೋಧ್ಯೆ ದರ್ಶನ

ಈ ತರಬೇತಿ ಶಿಬಿರದ ಎರಡನೇ ದಿನ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ನಾಯಕ ರೋಹಿತ್ ಶರ್ಮಾ ಅಯೋಧ್ಯೆಗೆ ತೆರಳುವ ಸಾಧ್ಯತೆಯಿದೆ. ಅಲ್ಲಿ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಾದ ನಂತರ ಮತ್ತೆ ಸಿದ್ಧತೆಗಳು ಆರಂಭವಾಗಲಿವೆ. ಸುಮಾರು 2 ವಾರಗಳ ಹಿಂದೆಯಷ್ಟೇ ಭಾರತ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರೂ, ತಂಡದ ಆಟಗಾರರು ಕೆಂಪು ಚೆಂಡು ಕ್ರಿಕೆಟ್‌ನೊಂದಿಗೆ ದೂರವಾಗಿಲ್ಲ. ಆದರೆ, ಆ ಪಂದ್ಯವನ್ನು ರೋಹಿತ್ ಪಡೆ ವಿದೇಶದಲ್ಲಿ ಆಡಿದ್ದರೆ, ಇದು ತವರಿನಲ್ಲಿ ನಡೆಯುತ್ತಿರುವ ಪಂದ್ಯವಾಗಿದೆ.

ಇದನ್ನೂ ಓದಿ
ಟಿ20 ಯಲ್ಲಿ ಈ ಸಾಧನೆ ಮಾಡಿದ ವಿಶ್ವದ 2ನೇ, ಏಷ್ಯಾದ ಮೊದಲ ಬ್ಯಾಟರ್ ಮಲಿಕ್..!
ಬಾಂಗ್ಲಾ ತಂಡವನ್ನು ಮಣಿಸಿ ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದ ಭಾರತ..!
ಟೀಂ ಇಂಡಿಯಾ ನಾಯಕನ ಜೊತೆ ಕಾಲ್ಕೆರೆದು ಜಗಳಕ್ಕೆ ಬಂದ ಬಾಂಗ್ಲಾ ಆಟಗಾರರು
ಗೋವಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ ಮಯಾಂಕ್- ಪಡಿಕ್ಕಲ್..!

IPL 2024: 5 ವರ್ಷಕ್ಕೆ 2500 ಕೋಟಿ! ಮತ್ತೆ ಐಪಿಎಲ್ ಟೈಟಲ್ ರೈಟ್ಸ್ ಖರೀದಿಸಿದ ಟಾಟಾ ಗ್ರೂಪ್

ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ಮುಖ್ಯವಾಗಿ ವಿಕೆಟ್ ಕೀಪರ್ ಯಾರು ಎಂಬುದು. ಕೆಎಲ್ ರಾಹುಲ್ ಸಂಪೂರ್ಣವಾಗಿ ಬ್ಯಾಟಿಂಗ್ ಕಡೆ ಗಮನ ನೀಡುವ ಸಾಧ್ಯತೆ ಇದೆ. ಹೀಗಿರುವಾಗ ಈ ಜವಾಬ್ದಾರಿ ಶ್ರೀಕರ್ ಭರತ್ ವಹಿಸಿಕೊಳ್ಳುತ್ತಾರ ನೋಡಬೇಕು. ಹಾಗೆಯೆ ತಂಡದಲ್ಲಿ ಬ್ಯಾಟಿಂಗ್ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಒಂದು ಸ್ಥಾನಕ್ಕಾಗಿ ಶುಭ್​ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಹಣಾಹಣಿ ನಡೆಯಲಿದೆ. ಭಾರತದಲ್ಲಿ ಗಿಲ್ ಅವರ ಟೆಸ್ಟ್ ದಾಖಲೆ ಉತ್ತಮವಾಗಿಲ್ಲ, ಆದರೆ ಶ್ರೇಯಸ್ ಅಯ್ಯರ್ ಸ್ಪಿನ್ನರ್‌ಗಳ ವಿರುದ್ಧ ಅತ್ಯಂತ ಪರಿಣಾಮಕಾರಿ ಎಂದು ಸಾಬೀತುಪಡಿಸಿದ್ದಾರೆ. ಹೀಗಿರುವಾಗ ಗಿಲ್ ಮೊದಲ ಟೆಸ್ಟ್‌ ಆಡುವುದು ಅನುಮಾನ.

ಇನ್ನು ಸ್ಪಿನ್ ಸಂಯೋಜನೆ ಹೇಗಿರುತ್ತದೆ ಎಂಬುದು ನೋಡಬೇಕಿದೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಆಟದ ಬಗ್ಗೆ ಯಾವುದೇ ಅನುಮಾನವಿಲ್ಲ. ಪ್ರಶ್ನೆ ಮೂರನೇ ಸ್ಪಿನ್ನರ್ ಬಗ್ಗೆ. ಇದಕ್ಕೆ ಅಕ್ಷರ್ ಪಟೇಲ್ -ಕುಲ್ದೀಪ್ ಯಾದವ್ ಎರಡು ಆಯ್ಕೆಗಳಿವೆ. ಅಕ್ಷರ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು ಮತ್ತು 29 ವಿಕೆಟ್‌ಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಹೀಗಿರುವಾಗ ಅವರ ಭಯ ಆಂಗ್ಲ ಬ್ಯಾಟರ್​ಗಳಲ್ಲಿ ಇದ್ದೇ ಇದೆ. ಬ್ಯಾಟಿಂಗ್ ವಿಭಾಗದಲ್ಲೂ ಕೊಡುಗೆ ನೀಡಬಲ್ಲರು. ಆದರೆ ಜಡೇಜಾ ಅವರ ಬೌಲಿಂಗ್ ಶೈಲಿಗೂ ಇವರ ಶೈಲಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಹೀಗಾಗಿ 2022ರ ಬಾಂಗ್ಲಾದೇಶ ಪ್ರವಾಸದ ಬಳಿಕ ಒಂದೇ ಒಂದು ಟೆಸ್ಟ್ ಆಡದ ಕುಲ್ದೀಪ್​ಗೆ ಅವಕಾಶ ಸಿಗಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ