ಕಳಪೆ ಫಾರ್ಮ್​, ತಂಡದಿಂದ ಕೋಕ್.. ಐಪಿಎಲ್‌ನಲ್ಲೂ ಸೈಲೆಂಟ್, ಈಗ ಗಾಯದ ಸಮಸ್ಯೆ; ರಹಾನೆ ತಂಡಕ್ಕೆ ಮರಳುವುದು ಯಾವಾಗ?

| Updated By: ಪೃಥ್ವಿಶಂಕರ

Updated on: Jun 02, 2022 | 10:32 PM

Ajinkya Rahane: ಸದ್ಯ ನನ್ನ ಸಂಪೂರ್ಣ ಗಮನವು ಚೇತರಿಸಿಗೊಳ್ಳುವುದರ ಮೇಲೆ ಮಾತ್ರ ಎಂದು ರಹಾನೆ ಹೇಳಿದ್ದಾರೆ. ಫಿಟ್ ಆಗಿ ಮತ್ತು ಆದಷ್ಟು ಬೇಗ ಮೈದಾನಕ್ಕೆ ಇಳಿಯುತ್ತೇನೆ.

ಕಳಪೆ ಫಾರ್ಮ್​, ತಂಡದಿಂದ ಕೋಕ್.. ಐಪಿಎಲ್‌ನಲ್ಲೂ ಸೈಲೆಂಟ್, ಈಗ ಗಾಯದ ಸಮಸ್ಯೆ; ರಹಾನೆ ತಂಡಕ್ಕೆ ಮರಳುವುದು ಯಾವಾಗ?
ಅಜಿಂಕ್ಯ ರಹಾನೆ
Follow us on

ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಮತ್ತು ಮಾಜಿ ಟೆಸ್ಟ್ ಉಪನಾಯಕ (Test vice-captain) ಅಜಿಂಕ್ಯ ರಹಾನೆ (Ajinkya Rahane)ಗೆ ಈ ವರ್ಷ ಉತ್ತಮವಾಗಿಲ್ಲ. ಕಳಪೆ ಫಾರ್ಮ್‌ನಿಂದಾಗಿ ಅವರನ್ನು ಈಗಾಗಲೇ ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ನಂತರ ಐಪಿಎಲ್ 2022 (IPL 2022) ರಲ್ಲಿ ಅವಕಾಶ ಸಿಕ್ಕಿತು, ಆದರೆ ಅಲ್ಲಿಯೂ ಬ್ಯಾಟ್ ಹೆಚ್ಚು ಸಹಾಯ ಮಾಡಲಿಲ್ಲ. ಇದೆಲ್ಲವೂ ಸಾಕಾಗಲಿಲ್ಲವೆಂಬಂತೆ ಗಾಯವು ಅವರನ್ನು ಕಾಡಿತು. ಇದರಿಂದಾಗಿ ಅವರು ಹಲವಾರು ವಾರಗಳವರೆಗೆ ಕ್ರಿಕೆಟ್​ನಿಂದ ಹೊರಗುಳಿಯಬೇಕಿದೆ. ಆದರೆ, ಈಗ ರಹಾನೆ ಮತ್ತೆ ಮೈದಾನಕ್ಕೆ ಮರಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಸ್ನಾಯು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಆರರಿಂದ ಎಂಟು ವಾರಗಳು ಬೇಕು ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ರಹಾನೆ ಆಡುತ್ತಿದ್ದರು. ಲೀಗ್ ಹಂತದಲ್ಲಿ ಕೆಕೆಆರ್‌ನ 13ನೇ ಪಂದ್ಯದ ವೇಳೆ ರಹಾನೆ ಕಾಲಿನ ಸ್ನಾಯು ನೋವಿಗೆ ಒಳಗಾಗಿದ್ದರು, ನಂತರ ಅವರು ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಆದಾಗ್ಯೂ, KKR ಸಹ ಪ್ಲೇಆಫ್ ತಲುಪುವ ಅವಕಾಶವನ್ನು ಕಳೆದುಕೊಂಡಿತು.

ಇದನ್ನೂ ಓದಿ:Ranji Trophy 2022: ಶೂನ್ಯಕ್ಕೆ ಔಟ್! ರಣಜಿಯಲ್ಲೂ ಕಳಪೆ ಫಾರ್ಮ್​ ಮುಂದುವರೆಸಿದ ರಹಾನೆ

ಇದನ್ನೂ ಓದಿ
ಉಮ್ರಾನ್ ಭಾರತೀಯ ಕ್ರಿಕೆಟ್‌ನ ಅದ್ಭುತ ಆವಿಷ್ಕಾರ! ಮುಂದೊಂದು ದಿನ ಅಖ್ತರ್ ದಾಖಲೆ ಮುರಿಯುತ್ತಾನೆ; ಬ್ರೆಟ್ ಲೀ
ENG vs NZ: 7 ರನ್​ಗಳಿಗೆ ಆರಂಭಿಕ 4 ವಿಕೆಟ್ ಪತನ! ವಿಶ್ವ ಚಾಂಪಿಯನ್ ಕಿವೀಸ್​ಗೆ ಆಂಗ್ಲರೆದುರು ಭಾರೀ ಮುಖಭಂಗ

ಎನ್‌ಸಿಎಯಲ್ಲಿ ಪುನರ್ವಸತಿ

ಮುಂಬೈನ ಅನುಭವಿ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಈ ದಿನಗಳಲ್ಲಿ ಪುನರ್ವಸತಿ ಪ್ರಕ್ರಿಯೆಯಲ್ಲಿ ತೊಡಗಿದ್ದು, ಶೀಘ್ರದಲ್ಲೇ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗಲಿದ್ದಾರೆ. ಇದು (ಗಾಯ) ದುರದೃಷ್ಟಕರ ಎಂದು ಗುರುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದ ನಂತರ ರಹಾನೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. ಆದರೆ ನನ್ನ ಪುನರ್ವಸತಿ ಚೆನ್ನಾಗಿ ನಡೆಯುತ್ತಿದೆ. ನಾನು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಸುಮಾರು 10 ದಿನಗಳ ಕಾಲ ಬೆಂಗಳೂರಿನಲ್ಲಿ (ಎನ್‌ಸಿಎ) ಉಳಿದುಕೊಂಡಿದ್ದೇನೆ. ಈಗ ಪುನರ್ವಸತಿ ಮತ್ತು ಗಾಯದಿಂದ ಚೇತರಿಸಿಕೊಳ್ಳಲು ಮತ್ತೆ ಅಲ್ಲಿಗೆ ಹೋಗುತ್ತಿದ್ದೇನೆ ಎಂದಿದ್ದಾರೆ.

7-8 ವಾರಗಳ ಮೊದಲು ಚೇತರಿಸಿಕೊಳ್ಳುವುದು ಕಷ್ಟ

ಸದ್ಯ ನನ್ನ ಸಂಪೂರ್ಣ ಗಮನವು ಚೇತರಿಸಿಗೊಳ್ಳುವುದರ ಮೇಲೆ ಮಾತ್ರ ಎಂದು ರಹಾನೆ ಹೇಳಿದ್ದಾರೆ. ಫಿಟ್ ಆಗಿ ಮತ್ತು ಆದಷ್ಟು ಬೇಗ ಮೈದಾನಕ್ಕೆ ಇಳಿಯುತ್ತೇನೆ. ನಾನು ಯಾವಾಗ ಸಂಪೂರ್ಣವಾಗಿ ಫಿಟ್ ಆಗುತ್ತೇನೆ ಎಂದು ನನಗೆ ತಿಳಿದಿಲ್ಲ, ಇದು ಆರರಿಂದ ಎಂಟು ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದಿದ್ದಾರೆ.

ಅನುಭವಿ ಬಲಗೈ ಬ್ಯಾಟ್ಸ್‌ಮನ್ ಭಾರತದ ಪರ 82 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.ತ್ತು ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯವರೆಗೂ ತಂಡದ ಉಪನಾಯಕರಾಗಿದ್ದರು. ಆದರೆ, ಆ ನಂತರ ಈ ಜವಾಬ್ದಾರಿಯನ್ನು ಮೊದಲು ಅವರಿಂದ ಹಿಂತೆಗೆದುಕೊಳ್ಳಲಾಯಿತು. ಬಳಿಕ ದಕ್ಷಿಣ ಆಫ್ರಿಕಾದಲ್ಲಿ ವಿಫಲವಾದ ನಂತರ ತಂಡದಿಂದ ಕೈಬಿಡಲಾಯಿತು. ಇದಾದ ನಂತರ ರಣಜಿ ಟ್ರೋಫಿ ಋತುವೂ ಅವರಿಗೆ ಚೆನ್ನಾಗಿರಲಿಲ್ಲ. ಅದೇ ಸಮಯದಲ್ಲಿ, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ, ರಹಾನೆ ಕೆಕೆಆರ್‌ ಪರ ಏಳು ಪಂದ್ಯಗಳಲ್ಲಿ ಕೇವಲ 133 ರನ್ ಗಳಿಸಿದರು. ಆದರೆ ಐಪಿಎಲ್​ಗೆ ನನಗೆ ಸಿಕ್ಕ ಅನುಭವ ಹಾಗೂ ನೀಡಿದ ಪ್ರದರ್ಶನ ನನಗೆ ಉತ್ತಮ ಅನುಭವವಾಗಿದೆ ಎಂದಿದ್ದಾರೆ.

Published On - 10:32 pm, Thu, 2 June 22