IND vs ENG: ಸೋಲಿನ ಆಘಾತದಲ್ಲಿರುವ ಭಾರತಕ್ಕಿದೆ ಮತ್ತೊಂದು ಇತಿಹಾಸ ಸೃಷ್ಟಿಸುವ ಅವಕಾಶ
Team India's Old Trafford Challenge: ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಏರಿಳಿತಗಳನ್ನು ಎದುರಿಸುತ್ತಿದೆ. ಲೀಡ್ಸ್‌ನಲ್ಲಿ ಸೋಲು, ಎಡ್ಜ್‌ಬಾಸ್ಟನ್‌ನಲ್ಲಿ ಗೆಲುವು, ಲಾರ್ಡ್ಸ್‌ನಲ್ಲಿ ಮತ್ತೊಂದು ಸೋಲು. ಈಗ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುವ ಪಂದ್ಯ ಮಹತ್ವದ್ದಾಗಿದೆ. ಭಾರತ ಈ ಮೈದಾನದಲ್ಲಿ ಇದುವರೆಗೆ ಗೆದ್ದಿಲ್ಲ. ಲಾರ್ಡ್ಸ್‌ನಲ್ಲಿನ ಸೋಲಿನ ನಂತರ, ಓಲ್ಡ್ ಟ್ರಾಫರ್ಡ್‌ನಲ್ಲಿ ಗೆಲುವು ಅತ್ಯಗತ್ಯ.

ಟೀಂ ಇಂಡಯಾದ (Team India) ಇಂಗ್ಲೆಂಡ್ ಪ್ರವಾಸ ಪ್ರಸ್ತುತ ಏರಿಳಿತಗಳಿಂದ ಕೂಡಿದೆ. ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಸೋತಿದ್ದ ಟೀಂ ಇಂಡಿಯಾ, ಎಡ್ಜ್‌ಬಾಸ್ಟನ್ ಟೆಸ್ಟ್ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ತನ್ನ ಕೈಯಾರೆ ಕಳೆದುಕೊಂಡಿತ್ತು. ಇದೀಗ ಆ ಆಘಾತದಲ್ಲೇ ನಾಲ್ಕನೇ ಟೆಸ್ಟ್ಗೆ ತಯಾರಿ ನಡೆಸಿರುವ ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಉಭಯ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಓಲ್ಡ್ ಟ್ರಾಫರ್ಡ್‌ನಲ್ಲಿ (Old Trafford Test) ನಡೆಯಲಿದೆ. ಬೇಸರದ ಸಂಗತಿಯೆಂದರೆ ಈ ಮೈದಾನದಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಆದಾಗ್ಯೂ ಸಮಾಧಾನಕರ ಸಂಗತಿಯೆಂದರೆ, ಈ ಮೈದಾನದಂತೆ, ಎಡ್ಜ್ಬಾಸ್ಟನ್ನಲ್ಲೂ ಭಾರತ ಗೆದ್ದಿರಲಿಲ್ಲ. ಆದರೆ ಈ ಬಾರಿ ಆ ಸೋಲಿನ ಸರಣಿಯನ್ನು ಮುರಿಯುವಲ್ಲಿ ಭಾರತ ಯಶಸ್ವಿಯಾಗಿತ್ತು.
ಓಲ್ಡ್ ಟ್ರಾಫರ್ಡ್‌ನಲ್ಲಿ ಭಾರತದ ದಾಖಲೆ ಹೇಗಿದೆ?
ಟೀಂ ಇಂಡಿಯಾ ಇದುವರೆಗೆ ಒಟ್ಟು 9 ಬಾರಿ ಬಿಳಿ ಜೆರ್ಸಿ ಧರಿಸಿ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಆಡಿದೆ. ಈ 9 ಪಂದ್ಯಗಳಲ್ಲಿ, ಭಾರತ ತಂಡವು ನಾಲ್ಕರಲ್ಲಿ ಸೋಲನ್ನು ಎದುರಿಸಿದ್ದು 5 ಪಂದ್ಯಗಳು ಡ್ರಾ ಆಗಿವೆ. ಇದರರ್ಥ ಟೀಂ ಇಂಡಿಯಾ ಈ ಮೈದಾನದಲ್ಲಿ ಒಂದೇ ಒಂದು ಪಂದ್ಯವನ್ನು ಗೆದಿಲ್ಲ. ಅಂದರೆ, ಭಾರತ ಯುವ ಬ್ರಿಗೇಡ್ ಈ ಸರಣಿಯನ್ನು 2-2 ರಿಂದ ಸಮಬಲಗೊಳಿಸಬೇಕಾದರೆ ಓಲ್ಡ್ ಟ್ರಾಫರ್ಡ್‌ನಲ್ಲಿ ಸಾಂಘಿಕ ಪ್ರದರ್ಶನ ನೀಡಬೇಕಾಗಿದೆ.
IND vs ENG: ಭಾರತವನ್ನು ಬಿಟ್ಟು ಇಂಗ್ಲೆಂಡ್ ತಂಡಕ್ಕೆ ಮಾತ್ರ ದಂಡ; ಐಸಿಸಿ ವಿರುದ್ಧ ಮಾಜಿ ನಾಯಕ ಗರಂ
ಲಾರ್ಡ್ಸ್‌ನಲ್ಲಿ ಹೀನಾಯ ಸೋಲು
ಲಾರ್ಡ್ಸ್ ಮೈದಾನದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 22 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರೊಂದಿಗೆ ಜೊತೆಯಾಟವನ್ನಾಡುವ ಮೂಲಕ ರವೀಂದ್ರ ಜಡೇಜಾ ತಂಡದ ಸೋಲನ್ನು ತಪ್ಪಿಸಲು ಪ್ರಯತ್ನಿಸಿದರಾದರೂ ಅದರಲ್ಲಿ ವಿಫಲರಾದರು. ತಮ್ಮ ಇನ್ನಿಂಗ್ಸ್ನಲ್ಲಿ 181 ಎಸೆತಗಳನ್ನು ಎದುರಿಸಿದ ಜಡೇಜಾ 61 ರನ್ ಗಳಿಸಿ ಅಜೇಯರಾಗಿ ಉಳಿದರು. ಇತ್ತ ಬುಮ್ರಾ 54 ಮತ್ತು ಸಿರಾಜ್ 30 ಎಸೆತಗಳನ್ನು ದಿಟ್ಟವಾಗಿ ಜಡೇಜಾಗೆ ಸಾಥ್ ನೀಡುವ ಕೆಲಸ ಮಾಡಿದರಾದರೂ ಕೊನೆಯಲ್ಲಿ ಗೆಲುವಿನ ಮಾಲೆ ಆಂಗ್ಲರ ಕೊರಳಿಗೆ ಬಿದ್ದಿತ್ತು. ಹೀಗಾಗಿ ಕಳೆದ ಪಂದ್ಯದ ಸೋಲನ್ನು ಮರೆತು ಟೀಂ ಇಂಡಿಯಾ ಮುಂದಿನ ಪಂದ್ಯಕ್ಕೆ ಅಣಿಯಾಗಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
