AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಇಲ್ಲಿದೆ

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿಯು ನವೆಂಬರ್ 19 ರಿಂದ ಶುರುವಾಗಲಿದೆ. ಎರಡು ಪಂದ್ಯಗಳ ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಟೀಮ್ ಇಂಡಿಯಾಗೆ ನಿರ್ಣಾಯಕವಾಗಿದ್ದು, ಈ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದರೆ ಫೈನಲ್ ಹಾದಿ ಸುಗಮವಾಗಲಿದೆ.

ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಇಲ್ಲಿದೆ
Team IndiaImage Credit source: BCCI
ಝಾಹಿರ್ ಯೂಸುಫ್
|

Updated on: Nov 16, 2026 | 7:39 AM

Share

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ವೈಟ್-ಬಾಲ್ ಸರಣಿ ಮುಕ್ತಾಯಗೊಂಡಿದೆ. ಟಿ20 ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ, ಏಕದಿನ ಸರಣಿಯಲ್ಲೂ 3-1 ಅಂತರದ ಭರ್ಜರಿ ಜಯ ಸಾಧಿಸಿದೆ. ಇದೀಗ ಉಭಯ ತಂಡಗಳು ಪ್ರತಿಷ್ಠಿತ ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿವೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ದೃಷ್ಟಿಯಿಂದ ಈ ಟೆಸ್ಟ್​ ಸರಣಿಯು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. 2 ಪಂದ್ಯಗಳ ಈ ಸರಣಿಯ ನಂತರ ಭಾರತ ತಂಡವು ತವರಿನಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದ್ದು, ಇದಾದ ಬಳಿಕ 2027ರ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆತಿಥ್ಯ ವಹಿಸಲಿದೆ. ಈ ಸರಣಿಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ vs ನ್ಯೂಝಿಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಕ್ರೀಡಾಂಗಣ / ಸ್ಥಳ ಸಮಯ 
1ನೇ ಟೆಸ್ಟ್ ನವೆಂಬರ್ 19 – 23, 2026 ಬೇಸಿನ್ ರಿಸರ್ವ್, ವೆಲ್ಲಿಂಗ್ಟನ್ ಬೆಳಗ್ಗೆ 3:30 IST 
2ನೇ ಟೆಸ್ಟ್ ನವೆಂಬರ್ 27 – ಡಿಸೆಂಬರ್ 1, 2026 ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್ ಬೆಳಗ್ಗೆ 3:30 IST 

ಭಾರತ vs ಶ್ರೀಲಂಕಾ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಕ್ರೀಡಾಂಗಣ / ಸ್ಥಳ ಸಮಯ 
1ನೇ ಏಕದಿನ ಡಿಸೆಂಬರ್ 13, 2026 ಎಸಿಎ-ವಿಡಿಸಿಎ ಕ್ರೀಡಾಂಗಣ, ವಿಶಾಖಪಟ್ಟಣಂ ಮಧ್ಯಾಹ್ನ 2:00 IST
2ನೇ ಏಕದಿನ  ಡಿಸೆಂಬರ್ 16, 2026 ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ಮಧ್ಯಾಹ್ನ 2:00 IST
3ನೇ ಏಕದಿನ ಡಿಸೆಂಬರ್ 19, 2026 ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್ ಮಧ್ಯಾಹ್ನ 2:00 IST
1ನೇ ಟಿ20 ಡಿಸೆಂಬರ್ 22, 2026 ನಿರಂಜನ್ ಶಾ ಕ್ರೀಡಾಂಗಣ, ರಾಜ್‌ಕೋಟ್ ಸಂಜೆ 7:00 IST
2ನೇ ಟಿ20 ಡಿಸೆಂಬರ್ 24, 2026 ಬಾರಾಬತಿ ಕ್ರೀಡಾಂಗಣ, ಕಟಕ್ ಸಂಜೆ 7:00 IST
3ನೇ ಟಿ20 ಡಿಸೆಂಬರ್ 27, 2026 ಎಂಸಿಎ ಕ್ರೀಡಾಂಗಣ, ಪುಣೆ ಸಂಜೆ 7:00 IST

ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ: 

ಪಂದ್ಯ ದಿನಾಂಕ ಕ್ರೀಡಾಂಗಣ / ಸ್ಥಳ ಸಮಯ 
1ನೇ ಟೆಸ್ಟ್ ಜನವರಿ 21 – 25, 2027 ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (VCA) ಕ್ರೀಡಾಂಗಣ, ನಾಗ್ಪುರ ಬೆಳಗ್ಗೆ 9:30 IST
2ನೇ ಟೆಸ್ಟ್ ಜನವರಿ 29 – ಫೆಬ್ರವರಿ 2, 2027 ಎಂ.ಎ. ಚಿದಂಬರಂ ಕ್ರೀಡಾಂಗಣ, ಚೆನ್ನೈ ಬೆಳಗ್ಗೆ 9:30 IST
3ನೇ ಟೆಸ್ಟ್ ಫೆಬ್ರವರಿ 11 – 15, 2027 ಎಸಿಎ (ಬರ್ಸಾಪರಾ) ಕ್ರೀಡಾಂಗಣ, ಗುವಾಹಟಿ ಬೆಳಗ್ಗೆ 9:00 IST
4ನೇ ಟೆಸ್ಟ್ ಫೆಬ್ರವರಿ 19 – 23, 2027 ಜೆಎಸ್‌ಸಿಎ (JSCA) ಅಂತಾರಾಷ್ಟ್ರೀಯ ಕ್ರೀಡಾಂಗಣ, ರಾಂಚಿ ಬೆಳಗ್ಗೆ 9:30 IST
5ನೇ ಟೆಸ್ಟ್ ಫೆಬ್ರವರಿ 27 – ಮಾರ್ಚ್ 3, 2027 ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್ ಬೆಳಗ್ಗೆ 9:30 IST

ಇದನ್ನೂ ಓದಿ: ಟೀಮ್ ಇಂಡಿಯಾಗೆ ಬಿಗ್ ಶಾಕ್: ಕಪ್ ಗೆದ್ದಿದ್ದಕ್ಕೆ ಸಿಕ್ಕಿದ್ದು ಇಷ್ಟೇನಾ?

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ (ಮಾರ್ಚ್ 3, 2027) ಮುಕ್ತಾಯಗೊಂಡ ಕೇವಲ ಒಂದು ವಾರದ ನಂತರ, ಟೀಮ್ ಇಂಡಿಯಾ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ನಲ್ಲಿ ಪಾಲ್ಗೊಳ್ಳಲಿದ್ದಾರೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More