ಟೆಸ್ಟ್ ಕ್ರಿಕೆಟ್…ಗೆಲ್ಲುವ ತನಕ ಆಡು, ಗೆಲ್ಲಲು ಸಾಧ್ಯವಿಲ್ಲದಿದ್ದರೆ ಡ್ರಾ ಮಾಡು. ಇದು ಟೆಸ್ಟ್ ಕ್ರಿಕೆಟ್ ಅಲಿಖಿತ ನಿಯಮ. ಸದ್ಯಕ್ಕಂತು ಈ ನಿಯಮವನ್ನು ಇಂಗ್ಲೆಂಡ್ ತಂಡ ಪಾಲಿಸುತ್ತಿಲ್ಲ. ಬದಲಾಗಿ ತನ್ನದೇ ಬಾಝ್ಬಾಲ್ ನಿಯಮವನ್ನು ರೂಪಿಸಿಕೊಂಡಿದೆ. ಈ ನಿಯಮದಂತೆ ಇಂಗ್ಲೆಂಡ್ ಗೆಲ್ಲುವ ತನಕ ಆಡು…ಸೋಲದಂತೆ ಹೋರಾಡು ತಂತ್ರವನ್ನು ಪಾಲಿಸುತ್ತಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.
ಕೋಚ್ ಬ್ರೆಂಡನ್ ಮೆಕಲಂ ಹಾಗೂ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಇದುವರೆಗೆ 20 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ 14 ಪಂದ್ಯಗಳಲ್ಲಿ ಆಂಗ್ಲರು ಜಯ ಸಾಧಿಸಿದ್ದಾರೆ. ಇನ್ನು 5 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ. ಇದಾಗ್ಯೂ ಡ್ರಾ ಮಾಡಿಕೊಂಡಿದ್ದು ಕೇವಲ 1 ಪಂದ್ಯವನ್ನು ಮಾತ್ರ. ಅಂದರೆ ಇಂಗ್ಲೆಂಡ್ ಮಾಡು ಇಲ್ಲವೇ ಮಡಿ ಸಿದ್ಧಾಂತದೊಂದಿಗೆ ಕಣಕ್ಕಿಳಿಯುತ್ತಿರುವುದು ಸ್ಪಷ್ಟ.
ಇಂಗ್ಲೆಂಡ್ ತಂಡದ ಈ ಹೊಸ ರಣತಂತ್ರದಿಂದಾಗಿ ಟೆಸ್ಟ್ ಕ್ರಿಕೆಟ್ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬರುತ್ತಿದ್ದಾರೆ. ಹೀಗೆ ಬರುವ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಇಂಗ್ಲೆಂಡ್ ತಂಡದ ಅಭಿಮಾನಿಗಳ ಬಳಗ ಬಾರ್ಮಿ ಆರ್ಮಿ ಅವರ ಕೊಡುಗೆ ಕೂಡ ಇದೆ. ಇದಕ್ಕೆ ಸಾಕ್ಷಿ ಹೈದರಾಬಾದ್ ಸ್ಟೇಡಿಯಂನಲ್ಲಿ ಕೇಳಿ ಬಂದ ಒಲೀ ಪೋಪ್ ಗೀತೆ. ಈ ಗೀತೆಗೆ ಧ್ವನಿಗೂಡಿಸಿದವರಲ್ಲಿ ಭಾರತೀಯ ಪ್ರೇಕ್ಷಕರೂ ಕೂಡ ಇದ್ದರು ಎಂಬುದು ವಿಶೇಷ.
ಇಂಗ್ಲೆಂಡ್ ಕ್ರಿಕೆಟ್ ಪ್ರೇಮಿಗಳು ತಮ್ಮ ತಂಡವನ್ನು ಹುರಿದುಂಬಿಸಲು ಬಾರ್ಮಿ ಆರ್ಮಿಯನ್ನು ಸೃಷ್ಟಿಸಿಕೊಂಡಿದ್ದರೆ, ಇತ್ತ ಭಾರತೀಯ ಕ್ರಿಕೆಟ್ ಪ್ರೇಮಿಗಳು ಭಾರತ್ ಆರ್ಮಿಯನ್ನು ರೂಪಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಕ್ರೀಯವಾಗಿರುವ ಈ ಎರಡು ಕ್ರಿಕೆಟ್ ಪ್ರೇಮಿಗಳ ಬಳಗ ಇದೀಗ ಭಾರತದಲ್ಲಿ ಮುಖಾಮುಖಿಯಾಗುತ್ತಿದೆ.
ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು 246 ರನ್ಗಳಿಗೆ ಆಲೌಟ್ ಆಗುತ್ತಿದ್ದಂತೆ ಭಾರತ್ ಆರ್ಮಿ ಸ್ಟೇಡಿಯಂನಲ್ಲೇ ಆಂಗ್ಲರನ್ನು ಟ್ರೋಲ್ ಮಾಡಿದ್ದರು. ಅದು ಕೂಡ ಬಾಝ್ಬಾಲ್ ಅನ್ನು ಹುಡುಕಾಡುವ ಮೂಲಕ…ಹೀಗೆ ಇಂಗ್ಲೆಂಡ್ ತಂಡವನ್ನು ಕಾಲೆಳೆದು ಭಾರತೀಯ ಪ್ರೇಕ್ಷಕರಿಗೆ ಭಾರತ್ ಆರ್ಮಿ ಮನರಂಜನೆಯ ರಸದೌತಣ ನೀಡಿದ್ದರು.
🕵️ Finding Bazball – Hyderabad edition! Comment & let us know if you want us to ask @TheBarmyArmy where Bazball is! 😂#Bazball #INDvENG #INDvsENG #TeamIndia #BharatArmy #COTI🇮🇳 pic.twitter.com/gYbZxn8T19
— The Bharat Army (@thebharatarmy) January 25, 2024
ಇತ್ತ ಬಾರ್ಮಿ ಆರ್ಮಿ ಕೂಡ ಹಿಂದೆ ಬಿದ್ದಿರಲಿಲ್ಲ. ಒಂದೆಡೆ ಕಾಲೆಳೆದರೆ, ಮತ್ತೊಂದೆಡೆ ಇಂಗ್ಲೆಂಡ್ ತಂಡವನ್ನು ಹಾಡುಗಳ ಮೂಲಕ ಹುರಿದುಂಬಿಸುತ್ತಿದ್ದರು.
ಅದರಲ್ಲೂ ಇಂಗ್ಲೆಂಡ್ ಪರ ದ್ವಿತೀಯ ಇನಿಂಗ್ಸ್ನಲ್ಲಿ ಶತಕ ಬಾರಿಸಿ ಮಿಂಚಿದ್ದ ಒಲೀ ಪೋಪ್ ಹೆಸರಿನೊಂದಿಗೆ ಹಾಡೊಂದನ್ನು ಸೃಷ್ಟಿಸಿ ಎಲ್ಲರ ಗಮನ ಸೆಳೆದರು. ಈ ಹಾಡಿಗೆ ಭಾರತೀಯ ಪ್ರೇಕ್ಷಕರೂ ಕೂಡ ಧ್ವನಿಗೂಡಿಸಿ ಒಲೀ ಪೋಪ್ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದರು ಎಂಬುದು ವಿಶೇಷ.
What a moment, Oliver Pope 😍💯#INDvENG pic.twitter.com/x8AiAn80TU
— England’s Barmy Army 🏴🎺 (@TheBarmyArmy) January 27, 2024
HARTLEY AND ENGLAND HAVE FOUR!!!!!#INDvENG pic.twitter.com/alSwKGHyiP
— England’s Barmy Army 🏴🎺 (@TheBarmyArmy) January 28, 2024
ಸ್ಟೇಡಿಯಂನಲ್ಲೇ ಟ್ರೋಲ್, ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಬಾರ್ಮಿ ಆರ್ಮಿ ಹಾಗೂ ಭಾರತ್ ಆರ್ಮಿ ಟೆಸ್ಟ್ ಕ್ರಿಕೆಟ್ನ ಕಳೆ ಹೆಚ್ಚಿಸುತ್ತಿರುವುದು ಸುಳ್ಳಲ್ಲ. ಇದಕ್ಕೆ ಸಾಕ್ಷಿ ಹೈದರಾಬಾದ್ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಆಗಮಿಸಿರುವ ಪ್ರೇಕ್ಷಕರ ಸಂಖ್ಯೆ.
ಇದನ್ನೂ ಓದಿ: Babar Azam: ಮೂರು ಶ್ರೇಯಾಂಕ ಪಟ್ಟಿಯಲ್ಲೂ ಬಾಬರ್ ಆಝಂ ಮಿಂಚಿಂಗ್
ಟೆಸ್ಟ್ ಕ್ರಿಕೆಟ್ಗೆ ಪ್ರೇಕ್ಷಕರು ಆಗಮಿಸಲ್ಲ ಎಂಬ ಅಪವಾದದ ನಡುವೆಯೇ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟವನ್ನು ವೀಕ್ಷಿಸಲು 23 ಸಾವಿರಕ್ಕೂ ಅಧಿಕ ಮಂದಿ ಸ್ಟೇಡಿಯಂಗೆ ಆಗಮಿಸಿದ್ದರು. ಇನ್ನು ದ್ವಿತೀಯ ದಿನದಾಟದಲ್ಲಿ ಪ್ರೇಕ್ಷಕರ ಸಂಖ್ಯೆ 32 ಸಾವಿರ ದಾಟಿತ್ತು. ಹಾಗೆಯೇ ಮೂರನೇ ದಿನದಾಟದಲ್ಲಿ 25 ಸಾವಿರಕ್ಕಿಂತ ಅಧಿಕ ಪ್ರೇಕ್ಷಕರು ಆಗಮಿಸಿದರೆ, ನಾಲ್ಕನೇ ದಿನದಾಟದಲ್ಲಿ ಈ ಸಂಖ್ಯೆ 27 ಸಾವಿರ ದಾಟಿತ್ತು. ಅಂದರೆ ಕೇವಲ 4 ದಿನದಾಟದಲ್ಲಿ ಮುಗಿದ ಪಂದ್ಯಕ್ಕೆ 1 ಲಕ್ಷಕ್ಕೂ ಅಧಿಕ ಹಾಜರಾತಿ ಲಭಿಸಿತ್ತು.
ಇಲ್ಲಿ ಪ್ರೇಕ್ಷಕರು ಕೇವಲ ಪಂದ್ಯ ಮಾತ್ರ ನೋಡಲು ಆಗಮಿಸುತ್ತಿಲ್ಲ. ಬದಲಾಗಿ ಟೆಸ್ಟ್ ಕ್ರಿಕೆಟ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಹೀಗೆ ಸ್ಟೇಡಿಯಂನಲ್ಲಿ ಕೂತು ಪ್ರತಿ ನಿಮಿಷಗಳನ್ನು ಆನಂದಿಸುವಂತೆ ಮಾಡುವಲ್ಲಿ ಬಾರ್ಮಿ ಆರ್ಮಿ ಹಾಗೂ ಭಾರತ್ ಆರ್ಮಿ ಯಶಸ್ವಿಯಾಗುತ್ತಿದೆ.
Barmy Army wicket inbound 🙏#INDvENG pic.twitter.com/wj8PbAc5Ck
— England’s Barmy Army 🏴🎺 (@TheBarmyArmy) January 28, 2024
ಅದರಲ್ಲೂ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತು ಎಲ್ಲರು ಜೊತೆಗೂಡಿ ಹಾಡೇಳುವ ಮೂಲಕ ಬಾರ್ಮಿ ಆರ್ಮಿ ಕ್ರಿಕೆಟ್ನಲ್ಲೂ ಫುಟ್ಬಾಲ್ ಮೈದಾನದಲ್ಲಿನ ಉಲ್ಲಾಸವನ್ನು ಸೃಷ್ಟಿಸುತ್ತಿದ್ದಾರೆ. ಈ ಉಲ್ಲಾಸ ಉತ್ಸಾಹ ವಿಶಾಖಪಟ್ಟಣಂನಲ್ಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಬೇಡ.