Prithvi Shaw: ಮಿಂಚಿ ಮರೆಯಾಗಿದ್ದ ಪೃಥ್ವಿ ಶಾ ಕಂಬ್ಯಾಕ್

Prithvi Shaw: ಕಳೆದ ವರ್ಷ ಇಂಗ್ಲೆಂಡ್​ನಲ್ಲಿ ಕೌಂಟಿ ಪಂದ್ಯವಾಡುತ್ತಿದ್ದ ವೇಳೆ ಪೃಥ್ವಿ ಶಾ ಗಾಯಗೊಂಡಿದ್ದರು. ಈ ಗಾಯದ ಬಳಿಕ ಯುವ ಸ್ಪೋಟಕ ಬ್ಯಾಟರ್ ಸರ್ಜರಿಗೆ ಒಳಗಾಗಿದ್ದರು. ಇದೀಗ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಪೃಥ್ವಿ ಶಾ ಮತ್ತೆ ಇನಿಂಗ್ಸ್ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದಾರೆ.

Prithvi Shaw: ಮಿಂಚಿ ಮರೆಯಾಗಿದ್ದ ಪೃಥ್ವಿ ಶಾ ಕಂಬ್ಯಾಕ್
Prithvi Shaw
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 01, 2024 | 11:55 AM

ಟೀಮ್ ಇಂಡಿಯಾದಲ್ಲಿ ಮಿಂಚಿ ಮರೆಯಾಗಿದ್ದ ಯುವ ಸ್ಪೋಟಕ ಬ್ಯಾಟರ್ ಪೃಥ್ವಿ ಶಾ (Prithvi Shaw) ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಕಳೆದ 6 ತಿಂಗಳುಗಳಿಂದ ಮೈದಾನದಿಂದ ಹೊರಗುಳಿದಿದ್ದ ಪೃಥ್ವಿ ಇದೀಗ ರಣಜಿ ಕ್ರಿಕೆಟ್​ ಮೂಲಕ ಪುನರಾಗಮನ ಮಾಡಲಿದ್ದಾರೆ. ಶುಕ್ರವಾರದಿಂದ ಕೋಲ್ಕತ್ತಾದಲ್ಲಿ ನಡೆಯಲಿರುವ ಬಂಗಾಳ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕಾಗಿ ಮುಂಬೈ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ಪೃಥ್ವಿ ಶಾ ಕಾಣಿಸಿಕೊಂಡಿದ್ದಾರೆ.

2023ರ ಇಂಗ್ಲೆಂಡ್ ಕೌಂಟಿ ಕ್ರಿಕೆಟ್​ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಕಣಕ್ಕಿಳಿದಿದ್ದ ಪೃಥ್ವಿ ಶಾ ಡರ್ಹಾಮ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು. ಮೊಣಕಾಲಿಗೆ ಉಂಟಾಗಿದ್ದ ಗಾಯದ ಪರಿಣಾಮ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದಾದ ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಪೃಥ್ವಿ ಶಾ ಅವರನ್ನು ರಣಜಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಸ್ತುತ ಮುಂಬೈ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸುತ್ತಿದ್ದು, ಉಪನಾಯಕನಾಗಿ ಶಮ್ಸ್ ಮುಲಾನಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ 16 ಸದಸ್ಯರ ತಂಡಕ್ಕೆ ಪೃಥ್ವಿ ಆಗಮನದೊಂದಿಗೆ ಪ್ಲೇಯಿಂಗ್ ಇಲೆವೆನ್​ನಲ್ಲೂ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.

ಇತ್ತ ಈ ಬಾರಿ ರಣಜಿ ಟೂರ್ನಿಯಲ್ಲಿ ಮುಂಬೈ ತಂಡದ ಆರಂಭಿಕ ಆಟಗಾರ ಭೂಪೇನ್ ಲಾಲ್ವಾನಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದುವರೆಗೆ 314 ರನ್​ ಕಲೆಹಾಕಿರುವ ಲಾಲ್ವಾನಿಯನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯಿಲ್ಲ.

ಇದಾಗ್ಯೂ ಪೃಥ್ವಿ ಶಾ ಅವರನ್ನು ಬಂಗಾಳ ವಿರುದ್ಧ ಕಣಕ್ಕಿಳಿಸಲು ಬಯಸಿದರೆ ಮತ್ತೋರ್ವ ಆರಂಭಿಕ ಆಟಗಾರ ಜಯ್ ಬಿಸ್ತಾ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ. ಅದರಂತೆ ಫೆಬ್ರವರಿ 2 ರಿಂದ ಶುರುವಾಗಲಿರುವ ಪಂದ್ಯದ ಮೂಲಕ ಪೃಥ್ವಿ ಶಾ ದೇಶೀಯ ಅಂಗಳಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.

ಮುಂಬೈ ರಣಜಿ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಜಯ್ ಬಿಸ್ತಾ, ಭೂಪೇನ್ ಲಾಲ್ವಾನಿ, ಶಿವಂ ದುಬೆ, ಅಮೋಘ್ ಭಟ್ಕಳ್, ಸುವೇದ್ ಪರ್ಕರ್, ಪ್ರಸಾದ್ ಪವಾರ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಸೂರ್ಯಾಂಶ್ ಶೆಡ್ಜ್, ತನುಷ್ ಕೋಟ್ಯಾನ್, ಅಥರ್ವ ಅಂಕೋಲೆಕರ್, ಆದಿತ್ಯ ಧುಮಾಲ್, ಮೋಹಿತ್ ಅವಸ್ತಿ , ಧವಳ್ ಕುಲಕರ್ಣಿ, ರಾಯ್​ಸ್ಟನ್ ಡಯಾಸ್, ಸಿಲ್ವೆಸ್ಟರ್ ಡಿಸೋಜಾ.

ಇದನ್ನೂ ಓದಿ: IND vs ENG: ಟೆಸ್ಟ್​ ಕ್ರಿಕೆಟ್​ನ ಕಳೆ ಹೆಚ್ಚಿಸಿದ ಬಾರ್ಮಿ ಆರ್ಮಿ ಮತ್ತು ಭಾರತ್ ಆರ್ಮಿ

ಪೃಥ್ವಿ ಶಾ ವೃತ್ತಿಜೀವನ:

ಟೀಮ್ ಇಂಡಿಯಾ ಪರ 5 ಟೆಸ್ಟ್ ಪಂದ್ಯಗಳನ್ನಾಡಿರುವ ಪೃಥ್ವಿ ಶಾ 1 ಶತಕ ಹಾಗೂ 2 ಅರ್ಧಶತಕಗಳೊಂದಿಗೆ 339 ರನ್ ಕಲೆಹಾಕಿದ್ದಾರೆ. ಇನ್ನು 6 ಏಕದಿನ ಪಂದ್ಯಗಳಿಂದ ಒಟ್ಟು 189 ರನ್​ ಗಳಿಸಿದ್ದಾರೆ. ಹಾಗೆಯೇ 1 ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು