AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jay Shah: ಬಿಸಿಸಿಐನಿಂದ ಜಯ್ ಶಾ ಪಡೆಯುವ ವೇತನ ಎಷ್ಟು?

Jay Shah: ಜಯ್ ಶಾ ಅವರ ಮುಂದಾಳತ್ವದಲ್ಲಿ 2022 ರಲ್ಲಿ ಟಿ20 ಮತ್ತು 2023 ರಲ್ಲಿ ಏಕದಿನ ಏಷ್ಯಾ ಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದೆ. ಸಂದಿಗ್ಧ ಸ್ಥಿತಿಯಲ್ಲೂ ಏಷ್ಯಾಕಪ್ ಆಯೋಜಿಸಲು ಯಶಸ್ವಿಯಾಗಿರುವ ಶಾ ಅವರನ್ನೇ ಅಧ್ಯಕ್ಷರಾಗಿ ಮುಂದುವರೆಸಲು ಇತರೆ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದೆ. ಅದರಂತೆ ಇದೀಗ ಮೂರನೇ ಬಾರಿಗೆ ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Jay Shah: ಬಿಸಿಸಿಐನಿಂದ ಜಯ್ ಶಾ ಪಡೆಯುವ ವೇತನ ಎಷ್ಟು?
Jay Shah
TV9 Web
| Edited By: |

Updated on: Feb 01, 2024 | 1:53 PM

Share

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಮತ್ತೊಮ್ಮೆ ಏಷ್ಯನ್ ಕ್ರಿಕೆಟ್ ಮಂಡಳಿಯ (ACC) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ವರ್ಷ ನಡೆಯಲಿರುವ ಐಸಿಸಿ ಅಧ್ಯಕ್ಷರ ಚುನಾವಣೆಯ ರೇಸ್‌ನಲ್ಲೂ ಜಯ್ ಶಾ ಅವರ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ಮುಂಬರುವ ಐಸಿಸಿ ಚುನಾವಣೆಯಲ್ಲೂ ಬಿಸಿಸಿಐ ಕಾರ್ಯದರ್ಶಿಯ ಹೆಸರು ಕಾಣಿಸಿಕೊಳ್ಳಬಹುದು.

ಕಳೆದ ಮೂರು ವರ್ಷಗಳಿಂದ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮುಂದಾಳತ್ವದಲ್ಲಿ ಮಂಡಳಿಯಲ್ಲಿ ಹಲವು ಬದಲಾವಣೆಗಳು ಕಂಡುಬಂದಿವೆ. ಹಾಗೆಯೇ ಸಂದಿಗ್ಧ ಪರಿಸ್ಥಿತಿಯಲ್ಲಿ ಕಠಿಣ ನಿಲುವು ತೆಗೆದುಕೊಂಡಿದ್ದಾರೆ.

ಇದಕ್ಕೆ ಉತ್ತಮ ಉದಾಹರಣೆ ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆಸಿದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದರು. ಅಲ್ಲದೆ ಟೂರ್ನಿಯನ್ನು ಪಾಕಿಸ್ತಾನ್ ಮತ್ತು ಶ್ರೀಲಂಕಾದಲ್ಲಿ ಆಯೋಜಿಸುವಲ್ಲಿಯೂ ಅವರು ಪ್ರಮುಖ ಪಾತ್ರವಹಿಸಿದ್ದರು.

ಇದೀಗ ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಹುದ್ದೆಯೊಂದಿಗೆ ಎಸಿಸಿ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿಐ ಕಡೆಯಿಂದ ಶಾ ಅವರು ಪಡೆಯುತ್ತಿರುವ ವೇತನ ಎಷ್ಟು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಈ ಪ್ರಶ್ನೆಗೆ ಸ್ಪಷ್ಟ ಉತ್ತರವಂತು ಸಿಗುತ್ತಿಲ್ಲ. ಅಂದರೆ ಬಿಸಿಸಿಐ ಕಾರ್ಯದರ್ಶಿ ಅವರ ವೇತನವನ್ನು ಎಲ್ಲೂ ಕೂಡ ಬಹಿರಂಗಪಡಿಸಲಾಗಿಲ್ಲ. ಇದಾಗ್ಯೂ ಜಯ್ ಶಾ ಅವರು ಬಿಸಿಸಿಐ ಸಭೆಗಳಿಗೆ ಹಾಜರಾಗಲು 3,50,000 ರೂ. ಪಡೆಯುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಅಂದರೆ ಒಂದು ಸಭೆಗೆ ಬಿಸಿಸಿಐ ಕಾರ್ಯದರ್ಶಿಗೆ 3.5 ಲಕ್ಷ ರೂ. ನಿಗದಿ ಮಾಡಲಾಗಿದೆ. ಅಂದರೆ ಇಲ್ಲಿ ಯಾವುದೇ ವೇತನ ನೀಡಲಾಗುತ್ತಿಲ್ಲ. ಬದಲಾಗಿ ಸಭೆಗೆ ಹಾಜರಾದರೆ ಭತ್ಯೆಗಳನ್ನು ಪಾವತಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಸಭೆಗಳಿಗೆ ಹಾಜರಾಗಲು, ಪ್ರಯಾಣಿಸಲು ಮತ್ತು ಇತರ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ.

ಅಕ್ಟೋಬರ್ 2022ರ ಎಜಿಎಂ ಸಭೆಯ ನಂತರ ಅಧಿಕಾರಿಗಳ ವೆಚ್ಚವನ್ನು ಹೆಚ್ಚಿಸಲು ಬಿಸಿಸಿಐ ನಿರ್ಧರಿಸಿತ್ತು. ಮಂಡಳಿಯ ಅಧಿಕಾರಿಗಳು ದೇಶದ ಯಾವುದೇ ಸಭೆಯಲ್ಲಿ ಭಾಗವಹಿಸಲು ದಿನಕ್ಕೆ 40 ಸಾವಿರ ರೂ. ಭತ್ಯೆ ಪಡೆಯುತ್ತಾರೆ. ಹಾಗೆಯೇ ವಿದೇಶದಲ್ಲಿ ನಡೆಯುವ ಸಭೆಗಳಿಗೆ ಹಾಜರಾಗಲು ಅಧಿಕಾರಿಗಳಿಗೆ ದಿನಕ್ಕೆ ಸುಮಾರು 80 ಸಾವಿರ ರೂ. ನೀಡಲಾಗುತ್ತದೆ ಎಂದು ವರದಿಯಾಗಿದೆ.

ದೇಶದೊಳಗೆ ಅಥವಾ ವಿದೇಶಿ ವಿಮಾನ ಪ್ರಯಾಣಕ್ಕಾಗಿ ಬಿಸಿಸಿಐನಿಂದ ಬಿಸಿನೆಸ್ ಕ್ಲಾಸ್ ಟಿಕೆಟ್ ನೀಡಲಾಗುತ್ತದೆ. ಈ ಸೌಲಭ್ಯಗಳು ಬಿಸಿಸಿಐ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಮತ್ತು ಇತರ ಕೆಲವು ಉನ್ನತ ಅಧಿಕಾರಿಗಳಿಗೆ ಮಾತ್ರ ಲಭ್ಯವಿರುತ್ತವೆ.

ಇದನ್ನೂ ಓದಿ: Asia Cup: ಜಯ್ ಶಾ ಹೇಳಿಕೆಗೆ ಶಾಹಿದ್ ಅಫ್ರಿದಿ ತಿರುಗೇಟು

ಇದೀಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಆಯ್ಕೆಯಾಗಿರುವ ಜಯ್ ಶಾ ಅವರಿಗೆ ಅಲ್ಲಿಯೂ ಸಭೆಯ ಆಧಾರದ ಮೇಲೆ ಭತ್ಯೆ ನೀಡಲಾಗುತ್ತದೆ ಎಂದು ವರದಿಯಾಗಿದೆ.