AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The Hundred 2024: ಹಂಡ್ರೆಡ್ ಲೀಗ್​ನ 8 ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ

The Hundred 2024: ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ಕ್ರಿಕೆಟ್ ಟೂರ್ನಿಯು ಮಂಗಳವಾರದಿಂದ (ಜು.23) ಶುರುವಾಗಲಿದೆ. 2021 ರಲ್ಲಿ ಶುರುವಾದ ಈ ಟೂರ್ನಿಯು ಟಿ20 ಸ್ವರೂಪದಲ್ಲಿದ್ದರೂ ಹಲವು ನಿಯಮಗಳಲ್ಲಿ ವ್ಯತ್ಯಾಸಗಳಿವೆ. ಮುಖ್ಯವಾಗಿ ಈ ಟೂರ್ನಿಯು 100 ಎಸೆತಗಳ ಪಂದ್ಯಾವಳಿ ಎಂಬುದು ವಿಶೇಷ.,

The Hundred 2024: ಹಂಡ್ರೆಡ್ ಲೀಗ್​ನ 8 ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ
The Hundred 2024
ಝಾಹಿರ್ ಯೂಸುಫ್
|

Updated on:Jul 23, 2024 | 3:21 PM

Share

ಬಹುನಿರೀಕ್ಷಿತ ದಿ ಹಂಡ್ರೆಡ್ ಲೀಗ್ ಇಂದಿನಿಂದ (ಜು.23) ಶುರುವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು ತಂಡಗಳು ಕಣಕ್ಕಿಳಿಯುತ್ತಿದ್ದು, ಪ್ರತಿ ತಂಡಗಳಲ್ಲಿ 15 ಆಟಗಾರರಿಗೆ ಅವಕಾಶ ನೀಡಲಾಗಿದೆ. ಹಾಗೆಯೇ ಒಂದು ತಂಡದಲ್ಲಿ ಗರಿಷ್ಠ 4 ವಿದೇಶಿ ಆಟಗಾರರು ಕಾಣಿಸಿಕೊಳ್ಳಬಹುದು. ಅದರಂತೆ ದಿ ಹಂಡ್ರೆಡ್ ಲೀಗ್​ ತಂಡಗಳಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಇಲ್ಲಿದೆ…

ಓವಲ್ ಇನ್ವಿನ್ಸಿಬಲ್ಸ್: ಸ್ಯಾಮ್ ಬಿಲ್ಲಿಂಗ್ಸ್ (ನಾಯಕ), ಸ್ಯಾಮ್ ಕರನ್, ಟಾಮ್ ಕರನ್, ವಿಲ್ ಜ್ಯಾಕ್ಸ್, ಜೋರ್ಡಾನ್ ಕಾಕ್ಸ್, ಗಸ್ ಅಟ್ಕಿನ್ಸನ್ (ಹ್ಯಾರಿಸನ್ ವಾರ್ಡ್*), ಸಾಕಿಬ್ ಮಹಮೂದ್, ಡೇವಿಡ್ ಮಲಾನ್, ನಾಥನ್ ಸೌಟರ್, ಟಾಮ್ ಲ್ಯಾಮನ್ಬಿ, ತವಾಂಡಾ ಮುಯೆಯೆ, ಮಾರ್ಚಂಟ್ ಡಿ ಲ್ಯಾಂಗ್, ಮಾರ್ಕ್ ವ್ಯಾಟ್.

ವಿದೇಶಿ ಆಟಗಾರರು: ಆ್ಯಡಂ ಝಂಪಾ , ಸ್ಪೆನ್ಸರ್ ಜಾನ್ಸನ್, ಡೊನೊವನ್ ಫೆರೇರಾ

ಮ್ಯಾಂಚೆಸ್ಟರ್ ಒರಿಜಿನಲ್ಸ್: ಜೋಸ್ ಬಟ್ಲರ್ , ಜೇಮೀ ಓವರ್ಟನ್, ಫಿಲ್ ಸಾಲ್ಟ್, ಪಾಲ್ ವಾಲ್ಟರ್, ಟಾಮ್ ಹಾರ್ಟ್ಲಿ, ವೇಯ್ನ್ ಮ್ಯಾಡ್ಸೆನ್, ಸ್ಕಾಟ್ ಕ್ಯೂರಿ, ಮ್ಯಾಕ್ಸ್ ಹೋಲ್ಡನ್, ಜೋಶ್ ಹಲ್, ಟಾಮ್ ಆಸ್ಪಿನ್ವಾಲ್, ಮಿಚ್ ಸ್ಟಾನ್ಲಿ, ಸೋನಿ ಬೇಕರ್, ಮ್ಯಾಥ್ಯೂ ಹರ್ಸ್ಟ್.

ವಿದೇಶಿ ಆಟಗಾರರು: ಸಿಕಂದರ್ ರಾಝ, ಫಝಲ್​ಹಕ್ ಫಾರೂಕಿ, ಉಸಾಮಾ ಮಿರ್.

ನಾರ್ಥನ್ ಸೂಪರ್​ ಚಾರ್ಜರ್ಸ್: ಹ್ಯಾರಿ ಬ್ರೂಕ್ (ಪ್ಯಾಟ್ ಬ್ರೌನ್*), ಬೆನ್ ಸ್ಟೋಕ್ಸ್ (ಬೆನ್ ದ್ವಾರ್ಶುಸ್*), ಜೇಸನ್ ರಾಯ್ , ಆದಿಲ್ ರಶೀದ್, ರೀಸ್ ಟೋಪ್ಲಿ, ಆ್ಯಡಂ ಹೋಸ್, ಟಾಮ್ ಲಾವ್ಸ್, ಮ್ಯಾಥ್ಯೂ ಪಾಟ್ಸ್, ಗ್ರಹಾಂ ಕ್ಲಾರ್ಕ್, ಕ್ಯಾಲಮ್ ಪಾರ್ಕಿನ್ಸನ್, ಒಲೀ ರಾಬಿನ್ಸನ್, ಜೋರ್ಡಾನ್ ಕ್ಲಾರ್ಕ್, ಡಿಲ್ಲಾನ್ ಪೆನ್ನಿಂಗ್ಟನ್.

ವಿದೇಶಿ ಆಟಗಾರರು: ನಿಕೋಲಸ್ ಪೂರನ್, ಮಿಚೆಲ್ ಸ್ಯಾಂಟ್ನರ್ ** (ಡೇನಿಯಲ್ ಸ್ಯಾಮ್ಸ್), ಮ್ಯಾಟ್ ಶಾರ್ಟ್

ಲಂಡನ್ ಸ್ಪಿರಿಟ್: ಝಾಕ್ ಕ್ರಾಲಿ, ಡಾನ್ ಲಾರೆನ್ಸ್ (ನಾಯಕ), ಲಿಯಾಮ್ ಡಾಸನ್, ಡಾನ್ ವೊರಾಲ್, ಓಲಿ ಸ್ಟೋನ್, ಆ್ಯಡಂ ರೋಸಿಂಗ್ಟನ್, ರಿಚರ್ಡ್ ಗ್ಲೀಸನ್, ಆಲಿ ಪೋಪ್ (ಮ್ಯಾಟ್ ಟೇಲರ್*), ಡೇನಿಯಲ್ ಬೆಲ್-ಡ್ರಮಂಡ್, ಮ್ಯಾಥ್ಯೂ ಕ್ರಿಚ್ಲಿ, ಮೈಕೆಲ್ ಪೆಪ್ಪರ್, ರಯಾನ್, ಹಿಗ್ಗಿನ್ಸ್.

ವಿದೇಶಿ ಆಟಗಾರರು: ಜಿಮ್ಮಿ ನೀಶಮ್*, ಆ್ಯಂಡ್ರೆ ರಸೆಲ್, ಶಿಮ್ರಾನ್ ಹೆಟ್ಮೆಯರ್, ನಾಥನ್ ಎಲ್ಲಿಸ್

ಬರ್ಮಿಂಗ್ಹ್ಯಾಮ್ ಫೀನಿಕ್ಸ್: ಕ್ರಿಸ್ ವೋಕ್ಸ್, ಲಿಯಾಮ್ ಲಿವಿಂಗ್ಸ್ಟೋನ್, ಮೊಯೀನ್ ಅಲಿ (ನಾಯಕ), ಬೆನ್ ಡಕೆಟ್, ಬೆನ್ನಿ ಹೋವೆಲ್, ಜೇಮೀ ಸ್ಮಿತ್, ಲೂಯಿಸ್ ಕಿಂಬರ್, ಟಾಮ್ ಹೆಲ್ಮ್, ಜೇಮ್ಸ್ ಫುಲ್ಲರ್, ಡಾನ್ ಮೌಸ್ಲಿ, ಜಾಕೋಬ್ ಬೆಥೆಲ್, ಅನೆರಿನ್ ಡೊನಾಲ್ಡ್,

ವಿದೇಶಿ ಆಟಗಾರರು: ಟಿಮ್ ಸೌಥಿ, ಆಡಮ್ ಮಿಲ್ನೆ , ಸೀನ್ ಅಬಾಟ್

ಸದರ್ನ್ ಬ್ರೇವ್: ಜೋಫ್ರಾ ಆರ್ಚರ್, ಜೇಮ್ಸ್ ವಿನ್ಸ್, ಕ್ರಿಸ್ ಜೋರ್ಡನ್, ಟೈಮಲ್ ಮಿಲ್ಸ್, ಲಾರಿ ಇವಾನ್ಸ್, ಲೆಯುಸ್ ಡು ಪ್ಲೂಯ್, ರೆಹಾನ್ ಅಹ್ಮದ್, ಕ್ರೇಗ್ ಓವರ್ಟನ್, ಡ್ಯಾನಿ ಬ್ರಿಗ್ಸ್, ಜಾರ್ಜ್ ಗಾರ್ಟನ್, ಅಲೆಕ್ಸ್ ಡೇವಿಸ್, ಜೇಮ್ಸ್ ಕೋಲ್ಸ್, ಜೋ ವೆದರ್ಲಿ.

ವಿದೇಶಿ ಆಟಗಾರರು: ಕೀರಾನ್ ಪೊಲಾರ್ಡ್, ಅಕೇಲ್ ಹೊಸೈನ್, ಫಿನ್ ಅಲೆನ್ (ಡೇನಿಯಲ್ ಹ್ಯೂಸ್*)

ಟ್ರೆಂಟ್ ರಾಕೆಟ್ಸ್: ಜೋ ರೂಟ್ , ಅಲೆಕ್ಸ್ ಹೇಲ್ಸ್ , ಲೆವಿಸ್ ಗ್ರೆಗೊರಿ, ಲ್ಯೂಕ್ ವುಡ್, ಟಾಮ್ ಬ್ಯಾಂಟನ್, ಜಾನ್ ಟರ್ನರ್, ಸ್ಯಾಮ್ ಹೈನ್, ಸ್ಯಾಮ್ ಕುಕ್, ಕ್ಯಾಲ್ವಿನ್ ಹ್ಯಾರಿಸನ್, ಜೋರ್ಡಾನ್ ಥಾಂಪ್ಸನ್, ಆಡಮ್ ಲಿಥ್, ಟಾಮ್ ಅಲ್ಸೋಪ್.

ವಿದೇಶಿ ಆಟಗಾರರು: ರಿಲೆ ಮೆರೆಡಿತ್*, ರೋವ್‌ಮನ್ ಪೊವೆಲ್, ರಶೀದ್ ಖಾನ್, ಇಮಾದ್ ವಾಸಿಮ್.

ಇದನ್ನೂ ಓದಿ: The Hundred 2024: ದಿ ಹಂಡ್ರೆಡ್ ಲೀಗ್​ನ ನಿಯಮಗಳೇನು?

ವೆಲ್ಷ್ ಫೈರ್: ಜಾನಿ ಬೈರ್‌ಸ್ಟೋವ್ , ಟಾಮ್ ಕೊಹ್ಲರ್-ಕ್ಯಾಡ್ಮೋರ್, ಡೇವಿಡ್ ವಿಲ್ಲಿ, ಜೋ ಕ್ಲಾರ್ಕ್, ಟಾಮ್ ಅಬೆಲ್, ಡೇವಿಡ್ ಪೇನ್, ಲ್ಯೂಕ್ ವೆಲ್ಸ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಜೇಕ್ ಬಾಲ್, ಸ್ಟೀವಿ ಎಸ್ಕಿನಾಜಿ, ಕ್ರಿಸ್ ಕುಕ್, ಮೇಸನ್ ಕ್ರೇನ್, ಬೆನ್ ಗ್ರೀನ್.

ವಿದೇಶಿ ಆಟಗಾರು: ಮ್ಯಾಟ್ ಹೆನ್ರಿ, ಗ್ಲೆನ್ ಫಿಲಿಪ್ಸ್, ಹ್ಯಾರಿಸ್ ರೌಫ್

  • * – ತಾತ್ಕಾಲಿಕ ಬದಲಿ ಆಟಗಾರರು

ದಿ ಹಂಡ್ರೆಡ್ ಲೀಗ್ ವೇಳಾಪಟ್ಟಿ:

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್​ನಲ್ಲಿ ವೀಕ್ಷಿಸಬಹುದು. ಹಾಗೆಯೇ ಲೈವ್ ಸ್ಟ್ರೀಮಿಂಗ್ ಸೋನಿಲಿವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಪುರುಷರ ಹಂಡ್ರೆಡ್ ಲೀಗ್ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 11 PM ಗಂಟೆಗೆ ಶುರುವಾಗಲಿದೆ. ಇನ್ನು ಡಬಲ್ ಹೆಡ್ಡರ್ ಪಂದ್ಯಗಳಿದ್ದರೆ ಮೊದಲ ಪಂದ್ಯ ರಾತ್ರಿ 7.30 PM ಗೆ ಶುರುವಾಗಲಿದ್ದು, ಎರಡನೇ ಪಂದ್ಯ ರಾತ್ರಿ 11 PM ಗೆ ಆರಂಭವಾಗಲಿದೆ.

Published On - 3:20 pm, Tue, 23 July 24