
ಟಿ20 ಕ್ರಿಕೆಟ್‌ನ ಅಬ್ಬರ ಹಾಗೂ ಬದಲಾಗುತ್ತಿರುವ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮಹತ್ವದ ಬದಲಾವಣೆ ತರಲು ಗಂಭೀರ ಚಿಂತನೆ ನಡೆಸುತ್ತಿದೆ. ಸದ್ಯ ಚಾಲ್ತಿಯಲ್ಲಿರುವ 50 ಓವರ್‌ಗಳ ಪಂದ್ಯವನ್ನು 40 ಓವರ್‌ಗಳಿಗೆ ಕಡಿತಗೊಳಿಸುವ ಪ್ರಸ್ತಾವನೆ ಇದೀಗ ಐಸಿಸಿ ಮುಂದಿದೆ.
ಮೆಕಿನ್ಸೆ ಎಂಬ ಜಾಗತಿಕ ಸಲಹಾ ಸಂಸ್ಥೆಯ ನೇತೃತ್ವದಲ್ಲಿ ಕ್ರಿಕೆಟ್‌ನ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಐಸಿಸಿ ಇತ್ತೀಚೆಗೆ ಸುದೀರ್ಘ ಪರಿಶೀಲನೆ ನಡೆಸಿದೆ. ಈ ವೇಳೆ ಏಕದಿನ ಕ್ರಿಕೆಟ್ ಅನ್ನು ಉಳಿಸಿಕೊಳ್ಳಬೇಕಿದ್ದರೆ ಓವರ್‌ಗಳ ಕಡಿತ ಅನಿವಾರ್ಯ ಎಂಬ ಸಲಹೆಯನ್ನು ನೀಡಲಾಗಿದೆ.
ಟಿ20 ಲೀಗ್‌ಗಳ ಭರಾಟೆಯ ಮಧ್ಯೆ ಏಕದಿನ ಕ್ರಿಕೆಟ್ಗೆ ಪ್ರೇಕ್ಷಕರ ಕೊರತೆ ಉಂಟಾಗುತ್ತಿರುವುದನ್ನು ಮನಗಂಡಿರುವ ಮೆಕಿನ್ಸೆ ಸಂಸ್ಥೆಯು, “ಏಕದಿನ ಕ್ರಿಕೆಟ್ ಅನ್ನು ಉಳಿಸಿಕೊಳ್ಳಬೇಕಿದ್ದರೆ ಕ್ರಾಂತಿಕಾರಿ ಬದಲಾವಣೆಗಳು ಅನಿವಾರ್ಯ” ಎಂದು ಎಚ್ಚರಿಸಿದೆ. ಈ ನಿಟ್ಟಿನಲ್ಲಿ ಅದು ನೀಡಿರುವ ಪ್ರಮುಖ ಸಲಹೆಗಳು ಮತ್ತು ಶಿಫಾರಸುಗಳು ಹೀಗಿವೆ:
ಮೆಕಿನ್ಸೆ ಸಂಸ್ಥೆಯು, “ಏಕದಿನ ಕ್ರಿಕೆಟ್ ಅನ್ನು ಉಳಿಸಿಕೊಳ್ಳಬೇಕಿದ್ದರೆ ಕ್ರಾಂತಿಕಾರಿ ಬದಲಾವಣೆಗಳು ಅನಿವಾರ್ಯ” ಎಂದು ಎಚ್ಚರಿಸಿದರೂ ಹೊಸ ನಿಯಮಗಳು 2027ರ ಏಕದಿನ ವಿಶ್ವಕಪ್ ಮುಗಿಯುವವರೆಗೆ ಜಾರಿಗೆ ಬರುವುದಿಲ್ಲ. ಅಲ್ಲದೆ ಪ್ರಸ್ತುತ ಇರುವ ‘ಫ್ಯೂಚರ್ ಟೂರ್ಸ್ ಪ್ರೋಗ್ರಾಂ’ (FTP) ಪ್ರಕಾರ ಜಾಗತಿಕ ಕ್ರಿಕೆಟ್ ವೇಳಾಪಟ್ಟಿಯನ್ನು ಪರಿಶೀಲಿಸಿದ ಬಳಿಕವಷ್ಟೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಸದ್ಯ ಮಾಹಿತಿ ಪ್ರಕಾರ, ಎಡಿನ್‌ಬರ್ಗ್‌ನಲ್ಲಿ ನಡೆಯಲಿರುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) 12 ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ಮುಂದೆ ಏಕದಿನ ಕ್ರಿಕೆಟ್‌ನ ಬದಲಾವಣೆ ಬಗ್ಗೆಗಿನ ಪ್ರಸ್ತಾವನೆಯನ್ನು ಚರ್ಚಿಸಲಾಗುತ್ತದೆ. ಇದಾದ ಬಳಿಕವಷ್ಟೇ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ: ನಿರ್ಣಾಯಕ ಪಂದ್ಯಕ್ಕೆ 5 ಅರ್ಜೆಂಟೀನಾ ರೆಫರಿ: ಫ್ರಾನ್ಸ್ಗೆ ಢವ ಢವ!
ಅಲ್ಲಿಯವರೆಗೆ, ಅಂದರೆ 2027ರ ಏಕದಿನ ವಿಶ್ವಕಪ್ ಒಳಗೊಂಡಂತೆ, ಏಕದಿನ ಟೂರ್ನಿಗಳು ಸದ್ಯದ 50 ಓವರ್‌ಗಳ ಸಾಂಪ್ರದಾಯಿಕ ಮಾದರಿಯಲ್ಲೇ ಮುಂದುವರಿಯಲಿವೆ.