Champions Trophy 2025: ದುಬೈಗೆ ತೆರಳಿದ ಟೀಂ ಇಂಡಿಯಾ, ಆಲ್​ದಿ ಬೆಸ್ಟ್..ಗೆದ್ದು ಬಾ ಭಾರತ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ಕ್ಕಾಗಿ ಈಗಾಗಲೇ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ವೇಗಿ ಜಸ್ಪ್ರೀತ್‌ ಬುಮ್ರಾ ಅಲಭ್ಯತೆಯ ಹೊರತಾಗಿಯೂ ಪ್ರಬಲ ತಂಡವನ್ನೇ ರಚಿಸಿದೆ. ಇದೀಗ ಟೀಂ ಇಂಡಿಯಾ ಚಾಂಪಿಯನ್ಸ್‌ ಟ್ರೋಫಿ ಆಡಲು ದುಬೈಗೆ ಪ್ರಯಾಣ ಬೆಳೆಸಿದೆ. ಭಾರತ ಕ್ರಿಕೆಟ್ ತಂಡದ ಮೊದಲ ಬ್ಯಾಚ್​ನಲ್ಲಿ ಯಾರೆಲ್ಲಾ ತೆರಳಿದರು ಎನ್ನುವುದನ್ನು ನೋಡಿ

Champions Trophy 2025: ದುಬೈಗೆ ತೆರಳಿದ ಟೀಂ ಇಂಡಿಯಾ, ಆಲ್​ದಿ ಬೆಸ್ಟ್..ಗೆದ್ದು ಬಾ ಭಾರತ
Team India

Updated on: Feb 15, 2025 | 6:54 PM

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿಯಲ್ಲಿ ಭಾಗವಹಿಸಲು, ಭಾರತ ಕ್ರಿಕೆಟ್ ತಂಡದ ಮೊದಲ ಬ್ಯಾಚ್ ದುಬೈಗೆ ಪ್ರಯಾಣ ಬೆಳೆಸಿದೆ. ಮೊದಲ ಬ್ಯಾಚ್‌ನಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌, ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ, ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ, ಆಲ್‌ರೌಂಡರ್‌ ರವೀಂದ್ರ ಜಡೇಜಾ ಸೇರಿದಂತೆ, ಇನ್ನೀತರ ಆಟಗಾರರು ದುಬೈಗೆ ಪ್ರಯಾಣ ಬೆಳೆಸಿದರು.

ಇಂದು (ಫೆಬ್ರವರಿ 15) ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೀಂ ಇಂಡಿಯಾದ ಮೊದಲ ಬ್ಯಾಚ್‌ ದುಬೈಗೆ ಪ್ರಯಾಣ ಬೆಳೆಸಿತು. ಇನ್ನು ವಿಮಾನ ನಿಲ್ದಾಣದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಕಂಡು ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಚಾಂಪಿಯನ್ಸ್ ಟ್ರೋಫಿ ಗೆದ್ದು ಬನ್ನಿ ಎಂದು ಶುಭಹಾರೈಸಿದರು.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ IPL ಆಟಗಾರರ ಸಂಭಾವನೆಗಿಂತ ಕಡಿಮೆ..!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19(ಬುಧವಾರ)ರಂದು ಆರಂಭವಾಗಲಿದ್ದು, ಮಾರ್ಚ್ 9ರವರೆಗೆ ನಡೆಯಲಿದೆ. ಇನ್ನು ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ರ ಟೀಂ ಇಂಡಿಯಾದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಉದ್ಘಾಟನಾ ಪಂದ್ಯಕ್ಕಾಗಿ ಪಾಕಿಸ್ತಾನದ ಕರಾಚಿಯ ನ್ಯಾಷನಲ್‌ ಬ್ಯಾಂಕ್‌ ಸ್ಟೇಡಿಯಂ ಸಂಪೂರ್ಣ ಸಜ್ಜಾಗಿದ್ದು, ಫೆ.19(ಬುಧವಾರ)ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ-ನ್ಯೂಜಿಲ್ಯಾಂಡ್‌ ತಂಡಗಳು ಪರಸ್ಪರ ಎದುರಾಗಲಿವೆ. ಇನ್ನು ಭಾರತ ತಂಡದ ಮೊದಲ ಪಂದ್ಯವು, ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಾಡಲಿದೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ಕ್ಕಾಗಿ ಈಗಾಗಲೇ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ವೇಗಿ ಜಸ್ಪ್ರೀತ್‌ ಬುಮ್ರಾ ಅಲಭ್ಯತೆಯ ಹೊರತಾಗಿಯೂ ಪ್ರಬಲ ತಂಡವನ್ನೇ ರಚಿಸಿದೆ. ಈಗಾಗಲೆ ಇಂಗ್ಲೇಡ್​ ವಿರುದ್ಧ ಟಿ20 ಹಾಗೂ ಏಕದಿನ ಸರಣಿ ಗೆದ್ದ ವಿಶ್ವಾಸದಲ್ಲಿರುವ ಟೀಂ ಇಂಡಿಯಾ ಈ ಬಾರಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಚಾಂಪಿಯನ್​​ ಆಗುವ ಹುಮ್ಮಿಸ್ಸಿನಲ್ಲಿದ್ದು, ನಮ್ಮ ಟೀಂ ಇಂಡಿಯಾ ಆಲ್​ದಿ ಬೆಸ್ಟ್​. ಗೆದ್ದು ಬಾ ಇಂಡಿಯಾ…