ಟಿ20 ವಿಶ್ವಕಪ್ (T20 World Cup 2022) ಸೋಲಿನ ಬೆನ್ನಲ್ಲೇ ಮಂಡಳಿಯಲ್ಲಿ ಮೇಜರ್ ಸರ್ಜರಿಗೆ ಮುಂದಾಗಿರುವ ಬಿಸಿಸಿಐ (BCCI) ಅದರ ಮೊದಲ ಹೆಜ್ಜೆಯಾಗಿ ಚೇತನ್ ಶರ್ಮಾ (Chetan Sharma) ನೇತೃತ್ವದಲ್ಲಿ ಅಸ್ತಿತ್ವದಲ್ಲಿದ್ದ ಆಯ್ಕೆ ಸಮಿತಿಯನ್ನು ವಜಾಗೊಳಿಸಿದೆ. ಅಲ್ಲದೆ ಹೊಸ ಆಯ್ಕೆ ಸಮಿತಿಯ ರಚನೆಗೂ ಅರ್ಜಿ ಆಹ್ವಾನಿಸಿದೆ. ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಅಭಿಯಾನ ಆರಂಭವಾಗುವ ಮುನ್ನವೇ ಚೇತನ್ ಶರ್ಮಾ ನೇತೃತ್ವದ ಮಂಡಳಿಯ ವಿಸರ್ಜನೆಯ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಈಗ ಟೂರ್ನಿಯಲ್ಲಿ ಮತ್ತೊಮ್ಮೆ ವಿಫಲವಾದ ಭಾರತ ತಂಡದ ಕಳಪೆ ಪ್ರದರ್ಶನದ ನಂತರ ಇಡೀ ಆಯ್ಕೆ ಸಮಿತಿಯನ್ನೇ ಬಿಸಿಸಿಐ ವಿಸರ್ಜಿಸಿದೆ. ಅಂದಹಾಗೆ ಆಯ್ಕೆ ಸಮಿತಿಯ ವಿಸರ್ಜನೆಗೆ ವಿಶ್ವಕಪ್ನಲ್ಲಿನ ಕಳಪೆ ಪ್ರದರ್ಶನದ ಹೊರತಾಗಿ ಇನ್ನೂ ಪ್ರಮುಖ ಕಾರಣಗಳು ಕೂಡ ಸೇರಿವೆ.
ಈ ಸಮಿತಿಯಲ್ಲಿ ಚೇತನ್ ಶರ್ಮಾ ಅವರಲ್ಲದೆ, ಸುನಿಲ್ ಜೋಶಿ, ಹರ್ವಿಂದರ್ ಸಿಂಗ್ ಮತ್ತು ದೇಬಾಶಿಶ್ ಮೊಹಾಂತಿ ಕೂಡ ಇದ್ದರು. ಅವರಲ್ಲಿ ಯಾರೊಬ್ಬರಿಗೂ ತಮ್ಮ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಅವರನ್ನು ವಜಾಗೊಳಿಸಿದ ಬಗ್ಗೆ ಯಾವುದೇ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ಆಟಗಾರರ ಪ್ರದರ್ಶನವನ್ನು ಗಮನಿಸಲು ನಾಲ್ವರು ಆಯ್ಕೆಗಾರರು ಪ್ರಸ್ತುತ ವಿವಿಧ ನಗರಗಳಲ್ಲಿದ್ದಾರೆ. ಅವರನ್ನು ಪದಚ್ಯುತಗೊಳಿಸುವ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡದೆ, ಹೊಸ ಸಮಿತಿಯನ್ನು ರಚಿಸುವುದಾಗಿ ನೇರವಾಗಿ ಘೋಷಿಸಿದೆ ಎಂದು ವರದಿಯಾಗಿದೆ.
ಆಯ್ಕೆ ಸಮಿತಿಯ ವಿಸರ್ಜನೆಗೆ ಪ್ರಮುಖ 5 ಕಾರಣಗಳಿವು
ಮೇಲ್ನೋಟಕ್ಕೆ, ಆಯ್ಕೆ ಸಮಿತಿಯ ಬಗ್ಗೆ ಬಿಸಿಸಿಐ ಆಂತರಿಕ ವಲಯದಲ್ಲಿ ಸಾಕಷ್ಟು ಅಸಮಾಧಾನವಿದೆ, ಈ ಕಾರಣದಿಂದಾಗಿ ಮಂಡಳಿಯು ಇಂತಹ ನಿರ್ದಯ ನಿರ್ಧಾರವನ್ನು ತೆಗೆದುಕೊಂಡಿದೆ. ಟೀಂ ಇಂಡಿಯಾದ ಕಳಪೆ ಪ್ರದರ್ಶನದ ಹೊರತಾಗಿ, ಈ ಅಸಮಾಧಾನಕ್ಕೆ ಇತರ ಕೆಲವು ಕಾರಣಗಳು ಇವೆ ಎಂದು ಹೇಳಲಾಗುತ್ತಿದ್ದು, ಇದಕ್ಕಾಗಿಯೇ ಎಲ್ಲರನ್ನೂ ಒಂದೇ ಬಾರಿಗೆ ಹೊರಹಾಕುವಂತೆ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.
Published On - 11:32 am, Sat, 19 November 22