ಕ್ರಿಕೆಟ್ ಆಟವನ್ನು ಧರ್ಮವೆಂದು ಜಪಿಸುವ ಭಾರತದಲ್ಲಿ ಕ್ರಿಕೆಟ್ ದೇವರು ಎಂದೇ ಪರಿಗಣಿತರಾಗಿರುವ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಅದು ತಾಜಾತನದಿಂದ ಕೂಡಿದ್ದು, ಚೇತೋಹಾರಿಯಾಗಿದೆ.
ನಿನ್ನೆ ಜೂನ್ 22ರಂದು ವಿಶ್ವ ಸಂಗೀತ ದಿನ (World Music Day) ಅಂಗವಾಗಿ ಬಾಲಿವುಡ್ ಸಂಗೀತ ಸಾಮ್ರಾಜ್ಞ ಸೋನು ನಿಗಮ್ ಜೊತೆ ಸಚಿನ್ ತೆಂಡೂಲ್ಕರ್ ಹಾಡಿರುವ ಯುಗಳ ಗೀತೆಯದು. ಆ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಶ್ರೋತೃಗಳು ಅದನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಸಂಗೀತ ವಿಡಿಯೋ ವೈರಲ್ ಆಗಿದೆ.
ತೆಂಡೂಲ್ಕರ್ಗೆ ಬರೀ ಕ್ರಿಕೆಟ್ ಪಿಚ್ ಅಷ್ಟೇ ಅಲ್ಲ; ಸಂಗೀತದ ಪಿಚ್ ಸಹ ಗೊತ್ತಿದೆ ಎಂದು ಸಿಂಗರ್ ಸೋನು ನಿಗಮ್, ತೆಂಡೂಲ್ಕರ್ ಅವರನ್ನು ಮೆಚ್ಚಿಕೊಂಡಿದ್ದಾರೆ. ಕ್ರಿಕೆಟ್ ಧಾಟಿಯ ಹಾಡನ್ನು ಸುಶ್ರಾವ್ಯವಾಗಿ ಹಾಡಿರುವ ಸಚಿನ್, ತಮ್ಮ 24 ವರ್ಷದ ಕ್ರಿಕೆಟ್ ಜೀವನದಲ್ಲಿ ಸಂಗೀತ ಹಾಸುಹೊಕ್ಕಿದೆ. ಅದು ನನ್ನ ಜೀವಾಳ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್ 50 ಮಂದಿಯ ಆಯ್ಕೆ ಮಂಡಳಿಯು ಸಚಿನ್ ತೆಂಡೂಲ್ಕರ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ (Greatest of All Time -G.O.A.T) ಎಂದು ಪರಿಗಣಿಸಿದೆ ಎಂಬುದು ಗಮನಾರ್ಹ.
ಸೋನು ನಿಗಮ್ ಜೊತೆ ಸಚಿನ್ ತೆಂಡೂಲ್ಕರ್ ಯುಗಳ ಗೀತೆ ಕೇಳಿ, ನೋಡಿ ಆನಂದಿಸಿ Throwback Video:
(Throwback Video Sachin Tendulkar Singing with Sonu Nigam Watch Video on instagram)
Published On - 11:40 am, Wed, 23 June 21