Tilak Varma: ಹಾರ್ದಿಕ್ ನಿರ್ಧಾರದಿಂದ ಕೋಪಗೊಂಡ ಸೂರ್ಯಕುಮಾರ್: ಡಗೌಟ್​ನಲ್ಲಿ ಜಗಳ?

LSG vs MI IPL 2025: ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧದ ಐಪಿಎಲ್ 2025ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಲು 7 ಎಸೆತಗಳಲ್ಲಿ 24 ರನ್‌ಗಳ ಅಗತ್ಯವಿದ್ದಾಗ, ತಿಲಕ್ ವರ್ಮಾ ಅವರನ್ನು ರಿಟೈರ್ಡ್ ಔಟ್ ಮಾಡಲಾಯಿತು. ಡಗೌಟ್‌ನಲ್ಲಿ ಕುಳಿತಿದ್ದ ಸೂರ್ಯಕುಮಾರ್ ಯಾದವ್ಗೆ ಇದನ್ನು ನಂಬಲು ಸಾಧ್ಯವಾಗಲಿಲ್ಲ. ಸೂರ್ಯ ಕೋಪಗೊಂಡಿರುವುದು ಎದ್ದು ಕಾಣುತ್ತಿತ್ತು.

Tilak Varma: ಹಾರ್ದಿಕ್ ನಿರ್ಧಾರದಿಂದ ಕೋಪಗೊಂಡ ಸೂರ್ಯಕುಮಾರ್: ಡಗೌಟ್​ನಲ್ಲಿ ಜಗಳ?
Suryakumar Tilak And Hardik

Updated on: Apr 05, 2025 | 11:31 AM

ಬೆಂಗಳೂರು (ಏ. 05): ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ 16 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ (Lucknow Super Giants vs Mumbai Indians) ತಂಡವನ್ನು 12 ರನ್‌ಗಳಿಂದ ಸೋಲಿಸಿತು. ಈ ಋತುವಿನ ನಾಲ್ಕನೇ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ಇದು ಎರಡನೇ ಗೆಲುವು. ಮತ್ತೊಂದೆಡೆ, ಇದು ಮುಂಬೈ ಇಂಡಿಯನ್ಸ್ ತಂಡಕ್ಕೆ ಎದುರಾದ ಮೂರನೇ ಸೋಲು. ಈ ಋತುವಿನಲ್ಲಿ ಎಂಐ ಇಲ್ಲಿಯವರೆಗೆ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಅಚ್ಚರಿಯ ಘಟನೆ ಕೂಡ ನಡೆಯಿತು. ಮುಂಬೈ ಬ್ಯಾಟರ್ ತಿಲಕ್ ವರ್ಮಾ ರಿಟೈರ್ಡ್ ಔಟ್ ಆದರು.

ಮುಂಬೈ ಇಂಡಿಯನ್ಸ್ ಗೆಲ್ಲಲು 7 ಎಸೆತಗಳಲ್ಲಿ 24 ರನ್‌ಗಳ ಅಗತ್ಯವಿದ್ದಾಗ, ತಿಲಕ್ ವರ್ಮಾ ಅವರನ್ನು ರಿಟೈರ್ಡ್ ಔಟ್ ಮಾಡಲಾಯಿತು. ಅವರ ಬದಲಿಗೆ ಮಿಚೆಲ್ ಸ್ಯಾಂಟ್ನರ್ ಅವರನ್ನು ಮೈದಾನಕ್ಕೆ ಕರೆತರಲಾಯಿತು. ತಿಲಕ್ 23 ಎಸೆತಗಳಲ್ಲಿ 25 ರನ್ ಗಳಿಸಿದರು. ಹಾರ್ದಿಕ್ ತಿಲಕ್ ಅವರನ್ನು ನಿವೃತ್ತಿ ಹೊಂದಲು ಹೇಳಿದ ತಕ್ಷಣ, ಮುಂಬೈ ಡಗೌಟ್ ಅಚ್ಚರಿಗೊಂಡಿತು. ಭಾರತದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಮೊಹಮ್ಮದ್ ಕೈಫ್ ಕೂಡ ಈ ನಿರ್ಧಾರದ ಬಗ್ಗೆ ಕೆಂಡ ಕಾರಿದರು.

ಇದನ್ನೂ ಓದಿ
ತಿಲಕ್ ಅಲ್ಲ: ಲಕ್ನೋ ವಿರುದ್ಧದ ಸೋಲಿಗೆ ಹಾರ್ದಿಕ್ ದೂರಿದ್ದು ಯಾರನ್ನು?
ಸೂರ್ಯಕುಮಾರ್ ಸಿಕ್ಸ್ ಸಿಡಿಸಿದಾಗ ಕೂದಲೆಳೆಯಿಂದ ಪಾರಾದ ಹುಡುಗಿ: VIDEO
ತವರಿನಲ್ಲಿ ಗೆಲುವಿನ ಸಿಹಿ ಸವಿದ ಲಕ್ನೋ ಸೂಪರ್​ಜೈಂಟ್ಸ್
ಧೋನಿಗೆ ಮತ್ತೊಮ್ಮೆ ನಾಯಕತ್ವ; ಫ್ಯಾನ್ಸ್​ಗೆ ಹಬ್ಬದೂಟ

ತಿಲಕ್ ವರ್ಮಾ ಅವರನ್ನು ನಿವೃತ್ತಿಗೊಳಿಸಿ ಅವರ ಸ್ಥಾನದಲ್ಲಿ ಮಿಚೆಲ್ ಸ್ಯಾಂಟ್ನರ್ ಅವರನ್ನು ಕರೆತರಲಾಯಿತು. ಆದರೆ ತಿಲಕ್ ಅವರನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರ ಸೂರ್ಯಕುಮಾರ್ ಯಾದವ್ ಅವರನ್ನು ಕೋಪಗೊಳಿಸಿದೆ. ಸ್ಯಾಂಟ್ನರ್ ಬ್ಯಾಟಿಂಗ್ ಮಾಡಲು ಹೊರನಡೆದಾಗ ಮತ್ತು ತಿಲಕ್ ಹಿಂತಿರುಗುತ್ತಿದ್ದಾಗ, ಡಗೌಟ್‌ನಲ್ಲಿ ಕುಳಿತಿದ್ದ ಸೂರ್ಯಕುಮಾರ್ ಯಾದವ್​​ಗೆ ಇದನ್ನು ನಂಬಲು ಸಾಧ್ಯವಾಗಲಿಲ್ಲ. ಸೂರ್ಯ ಕೋಪಗೊಂಡಿರುವುದು ಎದ್ದು ಕಾಣುತ್ತಿತ್ತು. ನಂತರ ಮುಂಬೈ ಮುಖ್ಯ ಕೋಚ್ ಮಹೇಲ ಜಯವರ್ಧನೆ ಸೂರ್ಯನ ಬಳಿ ಬಂದು ಈ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ವಿವರಿಸಿದರು. ಆದರೆ, ಇದಕ್ಕೂ ಸೂರ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತಲೆ ಕೆಳಗೆ ಹಾಕಿ ಜಗಳ ನಡೆಯುವುದು ಬೇಡ ಎಂದು ಕೋಪವನ್ನು ಕಂಟ್ರೊಲ್ ಮಾಡಿಕೊಂಡರು. ಕೆಲ ಮುಂಬೈ ಆಟಗಾರರು ಕೋಚ್ ಹಾಗೂ ನಾಯಕನ ನಿರ್ಧಾರದಿಂದ ಕೋಪಗೊಂಡಂತೆ ಕಂಡುಬಂತು.

 

ತಿಲಕ್ ಅವರ ಅತಿದೊಡ್ಡ ಅಭಿಮಾನಿಗಳಲ್ಲಿ ಸೂರ್ಯ ಕೂಡ ಒಬ್ಬರು ಎಂಬುದನ್ನು ಇಲ್ಲಿ ಗಮನಿಸಬೇಕು. ತಿಲಕ್ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಶತಕವನ್ನು ಬಾರಿಸಿದ ನಂತರ ಸೂರ್ಯಕುಮಾರ್ ಅವರು ಭಾರತದ T20I ತಂಡದಲ್ಲಿ ತಮ್ಮ 3ನೇ ಸ್ಥಾನವನ್ನು ತಿಲಕ್​ಗಾಗಿ ತ್ಯಾಗ ಮಾಡಿದ್ದಾರೆ.

LSG vs MI, IPL 2025: ತಿಲಕ್ ವರ್ಮಾ ಅಲ್ಲ: ಲಕ್ನೋ ವಿರುದ್ಧದ ಸೋಲಿಗೆ ಹಾರ್ದಿಕ್ ಪಾಂಡ್ಯ ದೂರಿದ್ದು ಯಾರನ್ನು ಗೊತ್ತೇ?

ತಿಲಕ್ ವರ್ಮಾ ಅವರನ್ನು ನಿವೃತ್ತಿಗೊಳಿಸಿದ್ದರ ಹಿಂದಿನ ಮಾಸ್ಟರ್ ಮೈಂಡ್ ಜಯವರ್ಧನೆ:

ಪಂದ್ಯದ ನಂತರ, ತಿಲಕ್ ವರ್ಮಾ ಅವರನ್ನು ಮರಳಿ ಕರೆಸಿ ಮಿಚೆಲ್ ಸ್ಯಾಂಟ್ನರ್ ಅವರನ್ನು ಕಳುಹಿಸುವುದು ತಮ್ಮ ಕರೆಯಾಗಿತ್ತು ಎಂದು ಜಯವರ್ಧನೆ ಹೇಳಿದ್ದಾರೆ. “ಸೂರ್ಯಕುಮಾರ್ ಅವರೊಂದಿಗೆ ತಿಲಕ್ ವರ್ಮಾ ಉತ್ತಮ ಜೊತೆಯಾಟ ಆಡಿದರು ಎಂದು ನಾನು ಭಾವಿಸುತ್ತೇನೆ. ಸೂರ್ಯ ಔಟ್ ಆದ ನಂತರ ತಿಲಕ್ ಅವರ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ ಅಂದುಕೊಂಡೆವು, ಆದರೆ ಅವರಿಗೆ ಸಾಧ್ಯವಾಗಲಿಲ್ಲ. ನಾನು ಕೊನೆಯ ಕೆಲವು ಓವರ್‌ಗಳವರೆಗೆ ಕಾಯುತ್ತಿದ್ದೆ. ಈ ಸಂದರ್ಭ ನನಗೆ ಯಾರಾದರೂ ಹೊಸಬರು ಬೇಕು ಎಂದು ಅನಿಸಿತು. ಕ್ರಿಕೆಟ್‌ನಲ್ಲಿ ಈ ರೀತಿಯ ವಿಷಯಗಳು ಸಂಭವಿಸುತ್ತದೆ. ಹಾಗಂತ ಓರ್ವ ಬ್ಯಾಟರ್ ಕಷ್ಟಪಡುತ್ತಿದ್ದರೆ ಅವರನ್ನು ಔಟ್ ಎಂದು ಕರೆಸಿಕೊಳ್ಳುವುದು ಒಳ್ಳೆಯ ನಿರ್ಧಾರ ಅಲ್ಲ, ಆದರೆ ನಾನು ಇಲ್ಲಿ ಹಾಗೆ ಮಾಡಬೇಕಾಗಿತ್ತು, ಆ ಸಮಯದಲ್ಲಿ ಅದು ಯುದ್ಧತಂತ್ರದ ನಿರ್ಧಾರವಾಗಿತ್ತು” ಎಂದು ಜಯವರ್ಧನೆ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ