ಬರೋಬ್ಬರಿ 40 ಸಿಕ್ಸ್​: ದೇಶೀಯ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರನ ಸಿಡಿಲಬ್ಬರ..!

| Updated By: ಝಾಹಿರ್ ಯೂಸುಫ್

Updated on: Aug 02, 2022 | 3:53 PM

Tnpl 2022: ಟೂರ್ನಿಯುದ್ದಕ್ಕೂ ಅಧ್ಭುತ ಪ್ರದರ್ಶನ ನೀಡಿದ್ದ ನೆಲ್ಲೈ ರಾಯಲ್ ಕಿಂಗ್ಸ್ ತಂಡದ ಆಟಗಾರ ಸಂಜಯ್ ಯಾದವ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬರೋಬ್ಬರಿ 40 ಸಿಕ್ಸ್​: ದೇಶೀಯ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರನ ಸಿಡಿಲಬ್ಬರ..!
Sanjay Yadav
Follow us on

ತಮಿಳುನಾಡು ಪ್ರೀಮಿಯರ್ ಲೀಗ್ (TNPL 2022) ಅನಿರೀಕ್ಷಿತ ಅಂತ್ಯದೊಂದಿಗೆ ಮುಕ್ತಾಯಗೊಂಡಿದೆ. ಏಕೆಂದರೆ ಫೈನಲ್​ನಲ್ಲಿ ಹೊಸ ಚಾಂಪಿಯನ್​ ಅನ್ನು ಎದುರು ನೋಡಿದ್ದ ಅಭಿಮಾನಿಗಳಿಗೆ ವರುಣನು ನಿರಾಸೆಯನ್ನುಂಟು ಮಾಡಿದೆ. ಫೈನಲ್ ಪಂದ್ಯದ ವೇಳೆ ಮಳೆ ಬಂದಿದ್ದರಿಂದ ​ ಲೈಕಾ ಕೋವೈ ಕಿಂಗ್ಸ್ ಮತ್ತು ಚೆಪಾಕ್ ಸೂಪರ್ ಗಿಲ್ಲಿಸ್ ತಂಡಗಳನ್ನು ಜಂಟಿ ಚಾಂಪಿಯನ್ಸ್ ಎಂದು ಘೋಷಿಸಲಾಯಿತು. ಈ ಮೂಲಕ ಇದೇ ಮೊದಲ ಬಾರಿಗೆ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಎರಡು ತಂಡಗಳು ಜೊತೆಯಾಗಿ ಚಾಂಪಿಯನ್​ ಪಟ್ಟವನ್ನು ಅಲಂಕರಿಸಿದೆ.

ಇನ್ನು ಟೂರ್ನಿಯುದ್ದಕ್ಕೂ ಅಧ್ಭುತ ಪ್ರದರ್ಶನ ನೀಡಿದ್ದ ನೆಲ್ಲೈ ರಾಯಲ್ ಕಿಂಗ್ಸ್ ತಂಡದ ಆಟಗಾರ ಸಂಜಯ್ ಯಾದವ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್​ ಪ್ರಶಸ್ತಿಗೆ ಭಾಜನರಾದರು. ಈ ಬಾರಿಯ ಟೂರ್ನಿಯಲ್ಲಿ ಸಂಜಯ್ 90 ರ ಸರಾಸರಿಯಲ್ಲಿ ಒಟ್ಟು 452 ರನ್ ಕಲೆಹಾಕಿದ್ದರು. ಈ ವೇಳೆ ಅವರ ಬ್ಯಾಟ್​ನಿಂದ ಒಂದು ಶತಕ ಹಾಗೂ 5 ಅರ್ಧಶತಕಗಳು ಮೂಡಿಬಂದಿದ್ದವು.

ವಿಶೇಷ ಎಂದರೆ 190 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ಎಡಗೈ ದಾಂಡಿಗ ಸಂಜಯ್ ಯಾದವ್ ತಮ್ಮ ಸ್ಪೋಟಕ ಇನಿಂಗ್ಸ್​ನಲ್ಲಿ ಒಟ್ಟು 40 ಸಿಕ್ಸ್ ಹಾಗೂ 21 ಫೋರ್​ಗಳನ್ನು ಬಾರಿಸಿದ್ದರು. ಈ ಮೂಲಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿ ಬೌಲರ್​ಗಳಿಗೆ ನಡುಕ ಹುಟ್ಟಿಸಿದ್ದರು. ಇದಲ್ಲದೆ 6 ವಿಕೆಟ್​ಗಳನ್ನು ಕಬಳಿಸುವ ಮೂಲಕ ಕೂಡ ಮಿಂಚಿದ್ದರು.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಅಂದಹಾಗೆ ಸಂಜಯ್ ಯಾದವ್ ಕಳೆದ ಸೀಸನ್ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಇದಾಗ್ಯೂ ಯುವ ಆಟಗಾರನಿಗೆ ಕೇವಲ 1 ಪಂದ್ಯದಲ್ಲಿ ಮಾತ್ರ ಆಡುವ ಅವಕಾಶ ಲಭಿಸಿತ್ತು. ಎಸ್​ಆರ್​ಹೆಚ್​ ವಿರುದ್ದ ಕಣಕ್ಕಿಳಿದಿದ್ದ ಸಂಜಯ್ ತಾನು ಎದುರಿಸಿದ 2ನೇ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು. ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

ಅಭಿನೇಷಕ್ ತನ್ವರ್ ಮಿಂಚಿನ ದಾಳಿ:
ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಈ ಬಾರಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದು ಅಭಿಷೇಕ್ ತನ್ವರ್. ಲೈಕಾ ಕೋವೈ ಕಿಂಗ್ಸ್ ತಂಡದ ಪರ ಆಡಿದ್ದ ವೇಗದ ಬೌಲರ್ ಅಭಿಷೇಕ್  9 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಟಿಎನ್​ಪಿಎಲ್​ನಲ್ಲಿನ ಯಶಸ್ವಿ ವೇಗಿ ಎನಿಸಿಕೊಂಡಿದ್ದಾರೆ.