ನೈಟ್ ರೈಡರ್ಸ್ ತಂಡಕ್ಕೆ ಮೂವರು ಸ್ಟಾರ್ ಆಟಗಾರರ ಎಂಟ್ರಿ

| Updated By: ಝಾಹಿರ್ ಯೂಸುಫ್

Updated on: Aug 26, 2023 | 9:04 PM

CPL 2023: ಟಿಕೆಆರ್ ತಂಡದಲ್ಲಿದ್ದ ಸೌತ್ ಆಫ್ರಿಕಾ ಆಟಗಾರ ರಿಲೀ ರೊಸ್ಸೊವ್ ಕಾರಣಾಂತರಗಳಿಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರ ಬದಲಿ ಆಟಗಾರನಾಗಿ ಟಿಮ್ ಡೇವಿಡ್ ಆಯ್ಕೆಯಾಗಿದ್ದಾರೆ. ಇನ್ನು ಅಫ್ಘಾನಿಸ್ತಾನ್ ಸ್ಪಿನ್ನರ್ ನೂರ್ ಅಹ್ಮದ್ ಅವರ ಸ್ಥಾನದಲ್ಲಿ ಇಂಗ್ಲೆಂಡ್ ಆಲ್​ರೌಂಡರ್ ಟಾಮ್ ಕರನ್ ಎಂಟ್ರಿ ಕೊಟ್ಟಿದ್ದಾರೆ.

ನೈಟ್ ರೈಡರ್ಸ್ ತಂಡಕ್ಕೆ ಮೂವರು ಸ್ಟಾರ್ ಆಟಗಾರರ ಎಂಟ್ರಿ
TKR
Follow us on

ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ ಟಿ20 ಟೂರ್ನಿಗೆ ಮೂವರು ಆಟಗಾರರ ಎಂಟ್ರಿಯಾಗಿದೆ. ಅದು ಕೂಡ ಒಂದೇ ತಂಡಕ್ಕೆ ಎಂಬುದು ವಿಶೇಷ. ಟೂರ್ನಿಯ ಆರಂಭದಲ್ಲೇ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದಿಂದ ಮೂವರು ಆಟಗಾರರು ಹೊರಗುಳಿದಿದ್ದು, ಇವರ ಬದಲಿ ಆಟಗಾರರನಾಗಿ ಆಸ್ಟ್ರೇಲಿಯಾದ ಟಿಮ್ ಡೇವಿಡ್, ಐರ್ಲೆಂಡ್​ನ ಲಾರ್ಕನ್ ಟಕರ್ ಹಾಗೂ ಇಂಗ್ಲೆಂಡ್​ನ ಟಾಮ್ ಕರನ್ ಆಯ್ಕೆಯಾಗಿದ್ದಾರೆ.

ಟಿಕೆಆರ್ ತಂಡದಲ್ಲಿದ್ದ ಸೌತ್ ಆಫ್ರಿಕಾ ಆಟಗಾರ ರಿಲೀ ರೊಸ್ಸೊವ್ ಕಾರಣಾಂತರಗಳಿಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರ ಬದಲಿ ಆಟಗಾರನಾಗಿ ಟಿಮ್ ಡೇವಿಡ್ ಆಯ್ಕೆಯಾಗಿದ್ದಾರೆ. ಇನ್ನು ಅಫ್ಘಾನಿಸ್ತಾನ್ ಸ್ಪಿನ್ನರ್ ನೂರ್ ಅಹ್ಮದ್ ಅವರ ಸ್ಥಾನದಲ್ಲಿ ಇಂಗ್ಲೆಂಡ್ ಆಲ್​ರೌಂಡರ್ ಟಾಮ್ ಕರನ್ ಎಂಟ್ರಿ ಕೊಟ್ಟಿದ್ದಾರೆ.

ಹಾಗೆಯೇ ಹೆಚ್ಚುವರಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಐರ್ಲೆಂಡ್​ನ ಲಾರ್ಕನ್ ಟಕರ್ ಆಯ್ಕೆಯಾಗಿದ್ದಾರೆ. ಐರ್ಲೆಂಡ್ ಪರ 100 ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ಲಾರ್ಕನ್ ಟಿ20 ಕ್ರಿಕೆಟ್‌ನಲ್ಲಿ 1,500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಮತ್ತೊಂದೆಡೆ ಟಿ20 ಕ್ರಿಕೆಟ್​ನ ಪವರ್ ಹಿಟ್ಟರ್ ಎನಿಸಿಕೊಂಡಿರುವ ಟಿಮ್ ಡೇವಿಡ್ ಇದೀಗ ಟಿಕೆಆರ್​ಗೆ ಎಂಟ್ರಿಕೊಟ್ಟಿದ್ದಾರೆ. ವಿಶೇಷ ಎಂದರೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದಲ್ಲಿ ಪವರ್​ ಹಿಟ್ಟರ್ಸ್​ಗಳ ದಂಡೇ ಇದೆ.

ಈ ತಂಡದ ನಾಯಕನಾಗಿ ಕೀರನ್ ಪೊಲಾರ್ಡ್ ಇದ್ದರೆ, ಆಲ್​ರೌಂಡರ್​ ಆಗಿ ಆಂಡ್ರೆ ರಸೆಲ್ ಹಾಗೂ ಡ್ವೇನ್ ಬ್ರಾವೊ ಆಡುತ್ತಿದ್ದಾರೆ. ಹಾಗೆಯೇ ಮಾರ್ಟಿನ್ ಗಪ್ಟಿಲ್, ಸುನಿಲ್ ನರೈನ್ ಕೂಡ ತಂಡದಲ್ಲಿದ್ದಾರೆ. ಇನ್ನು ವಿಕೆಟ್ ಕೀಪರ್ ಸ್ಥಾನದಲ್ಲಿ ನಿಕೋಲಸ್ ಪೂರನ್ ಕಣಕ್ಕಿಳಿಯುತ್ತಿದ್ದಾರೆ. ಇದೀಗ ಟಿಮ್ ಡೇವಿಡ್ ಆಗಮನದೊಂದಿಗೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗಿದೆ.

ಇದನ್ನೂ ಓದಿ: RCB ಯಿಂದ ಇಬ್ಬರು, CSK ಯಿಂದ ಒಬ್ಬರು: ತಂಡದಲ್ಲಿ ಮುಂಬೈ ಅವರದ್ದೇ ದರ್ಬಾರು..!

ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ:

ಕೀರನ್ ಪೊಲಾರ್ಡ್ (ನಾಯಕ), ಆಂಡ್ರೆ ರಸೆಲ್, ಸುನಿಲ್ ನರೈನ್, ನಿಕೋಲಸ್ ಪೂರನ್, ಟಾಮ್ ಕರನ್, ಅಕೇಲ್ ಹೊಸೈನ್, ಡ್ವೇನ್ ಬ್ರಾವೋ, ಮಾರ್ಟಿನ್ ಗಪ್ಟಿಲ್, ವಕಾರ್ ಸಲಾಮ್ಖಿಯೆಲ್, ನೂರ್ ಅಹ್ಮದ್, ಟಿಮ್ ಡೇವಿಡ್, ಜೇಡನ್ ಸೀಲ್ಸ್, ಅಲಿ ಖಾನ್, ಮಾರ್ಕ್ ಡೇಯಲ್, ಚಾಡ್ವಿಕ್ ಹಿಂಡ್ಟನ್, ಚಾಡ್ವಿಕ್ ವಾಲ್ಟನ್ , ಕದೀಮ್ ಅಲ್ಲೈನ್, ಜಾಡೆನ್ ಕಾರ್ಮೈಕಲ್, ಲಾರ್ಕನ್ ಟಕರ್.