ಪಾಕ್ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಐಪಿಎಲ್​ಗಾಗಿ ಹೊರಗುಳಿದ ಸ್ಟಾರ್ ಆಟಗಾರರು

| Updated By: ಝಾಹಿರ್ ಯೂಸುಫ್

Updated on: Feb 22, 2022 | 3:27 PM

Australia Squad: ಮಾರ್ಚ್-ಏಪ್ರಿಲ್ ನಡುವೆ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ 3 ಟೆಸ್ಟ್ ಏಕದಿನ ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಟೆಸ್ಟ್​ ಪಂದ್ಯದೊಂದಿಗೆ ಸರಣಿ ಆರಂಭವಾಗಲಿದ್ದು, ಮಾರ್ಚ್ 4 ರಿಂದ ಏಪ್ರಿಲ್ 2 ರವರೆಗೆ ಸರಣಿ ಆಯೋಜಿಸಲಾಗಿದೆ.

ಪಾಕ್ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಐಪಿಎಲ್​ಗಾಗಿ ಹೊರಗುಳಿದ ಸ್ಟಾರ್ ಆಟಗಾರರು
Australia Squad
Follow us on

ಕ್ರಿಕೆಟ್ ಆಸ್ಟ್ರೇಲಿಯಾ (CA) ಮುಂಬರುವ ಪಾಕಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ (Australia vs Pakistan) ತಂಡವನ್ನು ಪ್ರಕಟಿಸಿದೆ. 16 ಸದಸ್ಯರನ್ನು ಒಳಗೊಂಡಿರುವ ಈ ತಂಡವನ್ನು ಆರೋನ್ ಫಿಂಚ್ ಮುನ್ನಡೆಸಲಿದ್ದಾರೆ. ಈ ಸರಣಿಯಿಂದ ಐಪಿಎಲ್​ನಲ್ಲಿನ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಹೊರಗುಳಿದಿರುವುದು ವಿಶೇಷ. ಅದರಂತೆ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮ್ಮಿನ್ಸ್ , ಜೋಸ್ ಹ್ಯಾಝಲ್‌ವುಡ್ ಹೊರಗುಳಿದಿದ್ದಾರೆ. ಇನ್ನು ಮಿಚೆಲ್ ಸ್ಟಾರ್ಕ್ ಕೂಡ ವಿಶ್ರಾಂತಿ ಪಡೆದಿದ್ದಾರೆ.

ಮಾರ್ಚ್-ಏಪ್ರಿಲ್ ನಡುವೆ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ 3 ಟೆಸ್ಟ್ ಏಕದಿನ ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಟೆಸ್ಟ್​ ಪಂದ್ಯದೊಂದಿಗೆ ಸರಣಿ ಆರಂಭವಾಗಲಿದ್ದು, ಮಾರ್ಚ್ 4 ರಿಂದ ಏಪ್ರಿಲ್ 2 ರವರೆಗೆ ಸರಣಿ ಆಯೋಜಿಸಲಾಗಿದೆ. ಅದರ ನಂತರ ಏಕೈಕ ಟಿ20 ಪಂದ್ಯ ನಡೆಯಲಿದೆ.

ಇತ್ತ ಮಾರ್ಚ್​ ತಿಂಗಳಾಂತ್ಯಕ್ಕೆ ಐಪಿಎಲ್ ಶುರುವಾಗುವುದು ಖಚಿತ. ಹೀಗಾಗಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮ್ಮಿನ್ಸ್ , ಜೋಸ್ ಹ್ಯಾಝಲ್‌ವುಡ್ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಈ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಇದಾಗ್ಯೂ ವಿವಾಹದ ನಿಮಿತ್ತ ಗ್ಲೆನ್ ಮ್ಯಾಕ್ಸ್​ವೆಲ್ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಪಾಕಿಸ್ತಾನ ವಿರುದ್ಧದ ಸೀಮಿತ ಓವರ್​ಗಳ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ:
ಆರೋನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಸ್ಟನ್ ಅಗರ್, ಜೇಸನ್ ಬೆಹ್ರೆಂಡಾರ್ಫ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಸ್ ಇಂಗ್ಲಿಸ್, ಮಾರ್ನಸ್ ಲ್ಯಾಬುಶೇನ್, ಮಿಚೆಲ್ ಮಾರ್ಷ್‌, ಬೆನ್ ಮೆಕ್‌ಡಿಮಾರ್ಟ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(Top Australian players skip series against Pakistan for IPL 2022)