ಸಿಡ್ನಿಯಲ್ಲಿ ರೋಹಿತ್ ಹುಡುಗರ ಹೊಟ್ಟೆಗೆ ತಣ್ಣೀರು ಬಟ್ಟೆ..! ಐಸಿಸಿ ಎದುರು ಗುಡುಗಿದ ಬಿಸಿಸಿಐ

| Updated By: ಪೃಥ್ವಿಶಂಕರ

Updated on: Oct 26, 2022 | 12:52 PM

T20 World Cup 2022: ಟೀಂ ಇಂಡಿಯಾ ಅಭ್ಯಾಸ ಮಾಡುವ ಸ್ಥಳವು ಟೀಮ್ ಹೋಟೆಲ್‌ನಿಂದ 42 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಇದು ಕೂಡ ರೋಹಿತ್ ಪಡೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಸಿಡ್ನಿಯಲ್ಲಿ ರೋಹಿತ್ ಹುಡುಗರ ಹೊಟ್ಟೆಗೆ ತಣ್ಣೀರು ಬಟ್ಟೆ..! ಐಸಿಸಿ ಎದುರು ಗುಡುಗಿದ ಬಿಸಿಸಿಐ
Team India
Follow us on

2022 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಪಾಕ್ ವಿರುದ್ಧ ರೋಚಕ ಜಯ ಗಳಿಸಿರುವ ಟೀಂ ಇಂಡಿಯಾ (Team India) ಇದೀಗ ತನ್ನ ಎರಡನೇ ಪಂದ್ಯಕ್ಕಾಗಿ ಸಿಡ್ನಿ ತಲುಪಿದ್ದು, ಅಲ್ಲಿ ತನ್ನ ಅಭ್ಯಾಸದಲಿ ನಿರತವಾಗಿದೆ. ಆದರೆ ಅಭ್ಯಾಸ ಮುಗಿಸಿ ಬಂದ ರೋಹಿತ್ ಪಡೆಗೆ ಸಿಡ್ನಿಯಲ್ಲಿ ನೀಡಿದ ಊಟೋಪಚಾರ ಬೇಸರ ನೀಡಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಸಿಡ್ನಿಯಲ್ಲಿ ಅಭ್ಯಾಸದ ನಂತರ ಟೀಂ ಇಂಡಿಯಾಗೆ ಉತ್ತಮ ಗುಣಮಟ್ಟದ ಆಹಾರ ನೀಡಿಲ್ಲ. ಹಾಗೆಯೇ ನೀಡಿದ ಆಹಾರವೂ ತಣ್ಣಗಾಗಿತ್ತು ಎಂದು ಬಿಸಿಸಿಐ, ಐಸಿಸಿಗೆ ದೂರು ಸಲ್ಲಿಸಿದೆ. ಅಲ್ಲದೆ ಅಭ್ಯಾಸದ ನಂತರ ನೀಡಿದ ಆಹಾರದ ಬಗ್ಗೆ ಭಾರತೀಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ವಾಸ್ತವವಾಗಿ, ಅಭ್ಯಾಸದ ನಂತರ ಭಾರತೀಯ ಆಟಗಾರರಿಗೆ ಬಡಿಸಿದ ಆಹಾರವು ಬಿಸಿಯಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡಿರುವ ಟೀಂ ಇಂಡಿಯಾ ಆಟಗಾರರು ಕ್ರೀಡಾಂಗಣದಲ್ಲಿ ನೀಡಿದ ಆಹಾರ ಸೇವಿಸಿಲ್ಲ. ಆ ಬಳಿಕ ಆಟಗಾರರು ತಮ್ಮ ಅಸಮಾಧಾನವನ್ನು ಬಿಸಿಸಿಐ ಎದುರು ತೊಡಿಕೊಂಡಿದ್ದು, ಬಳಿಕ ಬಿಸಿಸಿಐ ಈ ಬಗ್ಗೆ ಐಸಿಸಿಗೆ ದೂರು ನೀಡಲಾಗಿದೆ.

ತಣ್ಣನೆಯ ಆಹಾರ ನೀಡಿದಕ್ಕೆ ಅಸಮಾದಾನ

ಸಾಮಾನ್ಯಾವಾಗಿ ಮೈದಾನದಲ್ಲಿ ಅಭ್ಯಾಸ ಮಾಡಿದ ಬಳಿಕ ಎಲ್ಲಾ ಆಟಗಾರರು ಕ್ರೀಡಾಂಗಣದ ಹೋಟೆಲ್​ನಲ್ಲಿ ಊಟ ಮಾಡಿ, ಆ ಬಳಿಕ ಬಸ್​ನಲ್ಲಿ ತಾವು ತಂಗಿರುವ ಹೋಟೆಲ್​ಗೆ ಮರಳುವುದು ವಾಡಿಕೆ. ಆದರೆ ಇಲ್ಲಿ ಅಭ್ಯಾಸ ಮುಗಿಸಿ ಬಂದ ಟೀಂ ಇಂಡಿಯಾ ಆಟಗಾರರಿಗೆ ಕ್ರೀಡಾಂಗಣದ ಸಿಬ್ಭಂದಿಗಳು ಸ್ಯಾಂಡ್‌ವಿಚ್‌ ಅನ್ನು ಆಹಾರವಾಗಿ ನೀಡಿದ್ದಾರೆ. ಆದರೆ ಅದು ಕೂಡ ತೀರ ತಣ್ಣಾಗಾಗಿದೆ. ಹೀಗಾಗಿ ರೋಹಿತ್ ಪಡೆ ಹಣ್ಣುಗಳನ್ನು ತಿಂದುಕೊಂಡು ಅಲ್ಲಿಂದ ಹೋಟೆಲ್​ಗೆ ತೆರಳಿದೆ.

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್ 7 ಆವೃತ್ತಿಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿತ್ತು ಗೊತ್ತಾ?

ಸ್ಯಾಂಡ್‌ವಿಚ್‌ ತಣ್ಣಗಾಗಿದ್ದರಿಂದ ಕೆಲವು ಆಟಗಾರರು ಟರ್ಕಿಶ್ ಖಾದ್ಯ ಫಲಾಫೆಲ್ ಅನ್ನು ತಿಂದರೆ, ಕೆಲವರು ಹಣ್ಣುಗಳನ್ನು ತಿನ್ನುವ ಮೂಲಕ ತಮ್ಮ ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಆ ಬಳಿಕ ತಂಡದ ಎಲ್ಲ ಆಟಗಾರರು ಅಭ್ಯಾಸ ಮುಗಿಸಿ ಹೋಟೆಲ್​ಗೆ ತೆರಳಿ ಮತ್ತೆ ಆಹಾರ ಸೇವಿಸಿದ್ದಾರೆ ಎಂದು ವರದಿಯಾಗಿದೆ.

42 ಕಿಲೋಮೀಟರ್ ದೂರ

ಆಹಾರದ ಹೊರತಾಗಿ ತಂಡದ ಅಭ್ಯಾಸದ ಸ್ಥಳದ ಬಗ್ಗೆಯೂ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಟೀಂ ಇಂಡಿಯಾ ಅಭ್ಯಾಸ ಮಾಡುವ ಸ್ಥಳವು ಟೀಮ್ ಹೋಟೆಲ್‌ನಿಂದ 42 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಇದು ಕೂಡ ರೋಹಿತ್ ಪಡೆಯ ಅಸಮಾಧಾನಕ್ಕೆ ಕಾರಣವಾಗಿದೆ. ವಾಸ್ತವವಾಗಿ, ಅಷ್ಟು ದೂರ ಪ್ರಯಾಣ ಮಾಡಿ ಆ ಬಳಿಕ ಅಭ್ಯಾಸ ಮಾಡಬೇಕೆಂದರೆ ಅದು ಆಟಗಾರರಿಗೆ ಹೆಚ್ಚು ಆಯಾಸವನ್ನುಂಟು ಮಾಡುತ್ತದೆ.

ಅ. 27 ರಂದು ನೆದರ್ಲ್ಯಾಂಡ್ಸ್ ಎದುರಾಳಿ

ಸಿಡ್ನಿಯಲ್ಲಿ ನಡೆಯಲಿರುವ ತನ್ನ ಎರಡನೇ ಪಂದ್ಯಕ್ಕಾಗಿ ಟೀಂ ಇಂಡಿಯಾ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಅಕ್ಟೋಬರ್ 27 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ತನ್ನ ಎರಡನೇ ಪಂದ್ಯವನ್ನು ಆಡಲಿದೆ. ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ ಟೀಂ ಇಂಡಿಯಾದ ಉತ್ಸಾಹ ಹೆಚ್ಚಿದ್ದು, ಈಗ ರೋಹಿತ್ ಪಡೆ ನೆದರ್ಲ್ಯಾಂಡ್ಸ್ ವಿರುದ್ಧ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಅಲ್ಲದೆ ಭಾರತ ಮತ್ತು ನೆದರ್ಲೆಂಡ್ ಮೊದಲ ಬಾರಿಗೆ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 am, Wed, 26 October 22