ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾದರಿಯಲ್ಲಿ ಆಯೋಜಿಸುತ್ತಿರುವ ಮಹಿಳಾ ಟಿ20 ಚಾಲೆಂಜ್ ಟೂರ್ನಿ (Women’s T20 Challenge 2022) ಇಂದಿನಿಂದ ಶುರುವಾಗಲಿದೆ. ಈ ಬಾರಿ ಕೂಡ ಮೂರು ತಂಡಗಳಿದ್ದು, ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಟ್ರೇಲ್ಬ್ಲೇಜರ್ಸ್ ಹಾಗೂ ಸೂಪರ್ ನೋವಾಸ್ ತಂಡಗಳು ಮುಖಾಮುಖಿಯಾಗಲಿದೆ.
2018 ರಿಂದ ಶುರುವಾಗಿದ್ದ ಈ ಟೂರ್ನಿಯನ್ನು ಕೊರೋನಾ ಭೀತಿ ಹಿನ್ನಲೆಯಲ್ಲಿ ಕಳೆದ ವರ್ಷ ಬಿಸಿಸಿಐ ಆಯೋಜಿಸಿರಲಿಲ್ಲ. ಇದೀಗ ಮೂರು ತಂಡಗಳ ಟೂರ್ನಿಯನ್ನು ನಡೆಸಲಾಗುತ್ತಿದ್ದು, ಇಲ್ಲಿ ಸೂಪರ್ ನೋವಾಸ್ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಿದರೆ, ಸ್ಮೃತಿ ಮಂಧಾನ ಟ್ರೇಲ್ಬ್ಲೇಜರ್ಸ್ ತಂಡದ ನಾಯಕಿಯಾಗಿದ್ದಾರೆ. ಹಾಗೆಯೇ ವೆಲೋಸಿಟಿ ತಂಡವನ್ನು ದೀಪ್ತಿ ಶರ್ಮಾ ಮುನ್ನಡೆಸಲಿದ್ದಾರೆ. ಆದರೆ ಕಳೆದ ಬಾರಿ ಆಡಿದ್ದ ಟೀಮ್ ಇಂಡಿಯಾದ ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್, ಜುಲಾನ್ ಗೋಸ್ವಾಮಿ ಅವರನ್ನು ಈ ಬಾರಿ ಕೈ ಬಿಡಲಾಗಿದೆ.
ಇದುವರೆಗೆ ಮೂರು ಬಾರಿ ಈ ಟೂರ್ನಿ ನಡೆದಿದ್ದು, ವೇಳೆ ಎರಡು ಬಾರಿ (2018 ಹಾಗೂ 2019 ರಲ್ಲಿ) ಸೂಪರ್ ನೋವಾಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಮೂರನೇ ಬಾರಿ ಟ್ರೇಲ್ಬ್ಲೇಜರ್ಸ್ ತಂಡವು ಪ್ರಶಸ್ತಿಗೆ ಮುತ್ತಿಕ್ಕಿತ್ತು. ಇದೀಗ 4ನೇ ಸೀಸನ್ ಮಹಿಳಾ ಟಿ20 ಚಾಲೆಂಜ್ ಮೇ 23 ರಿಂದ ಮೇ 28 ರವರೆಗೆ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತದ ಆಟಗಾರ್ತಿಯರು ಅಲ್ಲದೆ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದ ಒಟ್ಟು ಹನ್ನೆರಡು ಅಂತಾರಾಷ್ಟ್ರೀಯ ಆಟಗಾರ್ತಿಯರು ಕಾಣಿಸಿಕೊಳ್ಳಲಿದ್ದಾರೆ. ಮಹಿಳಾ ಟಿ20 ಚಾಲೆಂಜ್ನ ಮೂರು ತಂಡಗಳು ಈ ಕೆಳಗಿನಂತಿವೆ.
ಸೂಪರ್ ನೋವಾಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ತನಿಯಾ ಭಾಟಿಯಾ (ಉಪನಾಯಕಿ), ಅಲನಾ ಕಿಂಗ್, ಆಯುಷ್ ಸೋನಿ, ಚಂದು ವಿ, ಡಿಯಾಂಡ್ರಾ ಡಾಟಿನ್, ಹರ್ಲೀನ್ ಡಿಯೋಲ್, ಮೇಘನಾ ಸಿಂಗ್, ಮೋನಿಕಾ ಪಟೇಲ್, ಮುಸ್ಕಾನ್ ಮಲಿಕ್, ಪೂಜಾ ವಸ್ತ್ರಾಕರ್, ಪ್ರಿಯಾ ಪುನಿಯಾ, ರಾಶಿ ಕನೋಜಿಯಾ, ಸೋಫಿ ಎಕ್ಲೆಸ್ಟೋನ್ , ಸುನೆ ಲೂಸ್, ಮಾನ್ಸಿ ಜೋಶಿ
ಟ್ರೇಲ್ಬ್ಲೇಜರ್ಸ್: ಸ್ಮೃತಿ ಮಂಧಾನ (ನಾಯಕ), ಪೂನಂ ಯಾದವ್ (ಉಪನಾಯಕಿ), ಅರುಂಧತಿ ರೆಡ್ಡಿ, ಹೇಲಿ ಮ್ಯಾಥ್ಯೂಸ್, ಜೆಮಿಮಾ ರೋಡ್ರಿಗಸ್, ಪ್ರಿಯಾಂಕಾ ಪ್ರಿಯದರ್ಶಿನಿ, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ರಿಚಾ ಘೋಷ್, ಎಸ್. ಮೇಘನಾ, ಸೈಕಾ ಇಶಾಕ್, ಸಲ್ಮಾ ಖಾತರ್, ಸೋಫಿಯಾ ಬ್ರೌನ್, ಸುಜಾತಾ ಮಲ್ಲಿಕ್, ಎಸ್.ಬಿ.ಪೋಖರ್ಕರ್
ವೆಲೋಸಿಟಿ: ದೀಪ್ತಿ ಶರ್ಮಾ (ನಾಯಕ), ಸ್ನೇಹ ರಾಣಾ (ಉಪನಾಯಕಿ), ಶಫಾಲಿ ವರ್ಮಾ, ಅಯಾಬೊಂಗಾ ಖಾಕಾ, ಕೆಪಿ ನವಗಿರೆ, ಕ್ಯಾಥರಿನ್ ಕ್ರಾಸ್, ಕೀರ್ತಿ ಜೇಮ್ಸ್, ಲಾರಾ ವೊಲ್ವಾರ್ಡ್ಟ್, ಮಾಯಾ ಸೋನಾವಾನೆ, ನತ್ಥಕನ್ ಚಂತಮ್, ರಾಧಾ ಯಾದವ್, ಆರತಿ ಕೇದಾರ್, ಸಿಮ್ರಾನ್ ಬಹಾದ್ , ಯಾಸ್ತಿಕಾ ಭಾಟಿಯಾ, ಪ್ರಣವಿ ಚಂದ್ರ
ಮಹಿಳಾ ಟಿ20 ಚಾಲೆಂಜ್ ವೇಳಾಪಟ್ಟಿ:
ಮೇ-23 – 7:30 PM – ಟ್ರೇಲ್ಬ್ಲೇಜರ್ಸ್ vs ಸೂಪರ್ ನೋವಾಸ್
ಮೇ-24 – 3:30 PM – ಸೂಪರ್ ನೋವಾಸ್ vs ವೆಲೋಸಿಟಿ
ಮೇ-26 – 7:30 PM – ವೆಲೋಸಿಟಿ vs ಟ್ರೇಲ್ಬ್ಲೇಜರ್ಸ್
ಮೇ-28 – 7:30 PM – ಫೈನಲ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಚಾನೆಲ್
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.