Tristan Stubbs: ಇದುವೇ ಈ ವರ್ಷದ ಶ್ರೇಷ್ಠ ಕ್ಯಾಚ್?: ಒಂದೇ ಕೈಯಲ್ಲಿ ಆಫ್ರಿಕಾ ಆಟಗಾರ ಹಿಡಿದ ಕ್ಯಾಚ್ ನೋಡಿ
ENG vs SA 3rd T20I: ಮರ್ಕ್ರಮ್ ಬೌಲಿಂಗ್ನಲ್ಲಿ ಟ್ರಿಸ್ಟನ್ ಸ್ಟಬ್ಸ್ ಹಿಡಿದ ರೋಚಕ ಕ್ಯಾಚ್ಗೆ ಮೊಯಿನ್ ಅಲಿ ಬಲಿಯಾಗಬೇಕಾಯಿತು. ಲೆಫ್ಟ್ ಹ್ಯಾಂಡ್ನಲ್ಲಿ ರೋಚಕ ಡೈವ್ ಬಿದ್ದು ಸ್ಟಬ್ಸ್ ಸೂಪರ್ ಮ್ಯಾನ್ನಂತೆ ಕ್ಯಾಚ್ ಹಿಡಿದರು.
ಆಂಗ್ಲರ ನಾಡಿಗೆ ಪ್ರವಾಸ ಬೆಳೆಸಿರುವ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ (England vs South Africa) ವಿರುದ್ಧದ ಏಕದಿನ ಸರಣಿಯಲ್ಲಿ ಸಮಬಲ ಸಾಧಿಸಿದರೆ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಮೊದಲ ಟಿ20 ಯಲ್ಲಿ ಇಂಗ್ಲೆಂಡ್ 41 ರನ್ಗಳ ಜಯ ಸಾಧಿಸಿದರೆ, 2ನೇ ಕದನದಲ್ಲಿ ಆಫ್ರಿಕಾನ್ನರು 58 ರನ್ಗಳಿಂದ ಗೆದ್ದರು. ಭಾನುವಾರ ರಾತ್ರಿ ನಡೆದ ಅಂತಿಮ ಮೂರನೇ ಟಿ20 ಪಂದ್ಯದಲ್ಲೂ (3rd T20I Match) ಆಫ್ರಿಕಾ 90 ರನ್ಗಳ ಅಮೋಘ ಗೆಲುವು ಕಾಣುವ ಮೂಲಕ 2-1 ಅಂತರದಿಂದ ಸರಣಿಯನ್ನು ಬಾಜಿಕೊಂಡಿದೆ. ರೀಜಾ ಹೆಂಡ್ರಿಕ್ಸ್ (Reeza Hendricks) ಹಾಗೂ ಆ್ಯಡಂ ಮರ್ಕ್ರಮ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಆಫ್ರಿಕಾ 191 ರನ್ ಬಾರಿಸಿತು. ಆದರೆ, ಇಂಗ್ಲೆಂಡ್ ಈ ಕಠಿಣ ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗದೆ ಕೇವಲ 101 ರನ್ಗೆ ಸರ್ವಪತನ ಕಂಡಿತು. ಮೂರನೇ ಟಿ20 ಆಫ್ರಿಕಾ ಯಶಸ್ಸು ಕಾಣಲು ಫೀಲ್ಡಿಂಗ್ ಕೂಡ ಮುಖ್ಯ ಕಾರಣವಾಯಿತು. ಅದರಲ್ಲೂ ಒಂದು ಕ್ಯಾಚ್ ಮಾತ್ರ ಅದ್ಭುತವಾಗಿತ್ತು.
ಆಫ್ರಿಕಾ ನೀಡಿದ್ದ 192 ರನ್ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಇಂಗ್ಲೆಂಡ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಜೇಸನ್ ರಾಯ್ (17), ನಾಯಕ ಜೋಸ್ ಬಟ್ಲರ್ (14), ಡೇವಿಡ್ ಮಲನ್ (7) ಬೇಗನೆ ವಿಕೆಟ್ ಒಪ್ಪಿಸಿದರು. ಜಾನಿ ಬೈರ್ಸ್ಟೋ 27 ರನ್ ಸಿಡಿಸಿದರೂ ಅದು ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ನಂತರ ಬಂದ ಬ್ಯಾಟರ್ಗಳ ಪೈಕಿ ಕ್ರಿಸ್ ಜಾರ್ಡನ್ 14 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳ ಸ್ಕೋರ್ ಎರಡಂಕಿ ದಾಟಲಿಲ್ಲ. ಇಂಗ್ಲೆಂಡ್ 16.4 ಓವರ್ನಲ್ಲಿ ಕೇವಲ 101 ರನ್ಗೆ ಸರ್ವಪತನ ಕಂಡಿತು. ಆಫ್ರಿಕಾ ಪರ ತಬ್ರಿಜ್ ಶಂಸಿ 5 ವಿಕೆಟ್ ಕಿತ್ತು ಮಿಂಚಿದರು.
ಮೊದಲ ಟಿ20 ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ 52 ರನ್ ಚಚ್ಚಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಮೊಯಿನ್ ಅಲಿ ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ಆದರೂ ಆಫ್ರಿಕನ್ನರಿಗೆ ಇವರ ಮೇಲೊಂದು ಕಣ್ಣಿತ್ತು. ಆದರೆ, ಮರ್ಕ್ರಮ್ ಬೌಲಿಂಗ್ನಲ್ಲಿ ಟ್ರಿಸ್ಟನ್ ಸ್ಟಬ್ಸ್ ಹಿಡಿದ ರೋಚಕ ಕ್ಯಾಚ್ಗೆ ಅಲಿ ಬಲಿಯಾಗಬೇಕಾಯಿತು. ಲೆಫ್ಟ್ ಹ್ಯಾಂಡ್ನಲ್ಲಿ ರೋಚಕ ಡೈವ್ ಬಿದ್ದು ಸ್ಟಬ್ಸ್ ಸೂಪರ್ ಮ್ಯಾನ್ನಂತೆ ಕ್ಯಾಚ್ ಹಿಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದು ಈ ವರ್ಷದ ಶ್ರೇಷ್ಠ ಕ್ಯಾಚ್ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
One of the best catches you’ll ever see ?
Scorecard/clips: https://t.co/kgIS4BWSbC
??????? #ENGvSA ?? pic.twitter.com/FBlAOf3HUM
— England Cricket (@englandcricket) July 31, 2022
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ರಿಕಾ ಮೊದಲ ಓವರ್ನಲ್ಲೇ ಶೂನ್ಯಕ್ಕೆ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್ಗೆ ರೀಜಾ ಹೆಂಡ್ರಿಕ್ಸ್ ಹಾಗೂ ರಿಲೀ ರೊಸ್ಸೊ 55 ರನ್ಗಳ ಜೊತೆಯಾಟ ಆಡಿದರು. ರೊಸ್ಸೊ 31 ರನ್ ಗಳಿಸಿದರು. ನಂತರ ಮರ್ಕ್ರಮ್ ಜೊತೆಯಾದ ಹೆಂಡ್ರಿಕ್ಸ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 87 ರನ್ಗಳ ಕಾಣಿಕೆ ನೀಡಿದ ಈ ಜೋಡಿ ಪಂದ್ಯದ ಗತಿಯನ್ನೇ ಬದಲಾಯಿಸಿತು.
ಕೇವಲ 50 ಎಸೆತಗಳಲ್ಲಿ 9 ಫೋರ್ ಬಾರಿಸಿ 70 ರನ್ ಸಿಡಿಸಿ ಹೆಂಡ್ರಿಕ್ಸ್ ಔಟಾದರು. ಕೊನೆಯ ವರೆಗೂ ಭರ್ಜರಿ ಬ್ಯಾಟಿಂಗ್ ನಡೆಸಿದ ಮರ್ಕ್ರಮ್ 36 ಎಸೆತಗಳಲ್ಲಿ ಅಜೇಯ 51 ರನ್ ಬಾರಿಸಿದರು. ನಾಯಕ ಡೇವಿಡ್ ಮಿಲ್ಲರ್ 9 ಎಸೆತಗಳಲ್ಲಿ 22 ರನ್ ಸಿಡಿಸಿದರು. ಪರಿಣಾಮ ಆಫ್ರಿಕಾ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಅಂತಿಮವಾಗಿ 90 ರನ್ಗಳ ಜಯ ಸಾಧಿಸಿತು. ಆಗಸ್ಟ್ 17 ರಿಂದ ಇಂಗ್ಲೆಂಡ್ – ಆಫ್ರಿಕಾ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.
Published On - 10:40 am, Mon, 1 August 22