AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2022: ಭಾರತಕ್ಕೆ ಮೂರನೇ ಚಿನ್ನ: ವೇಟ್​​ಲಿಫ್ಟಿಂಗ್​ನಲ್ಲಿ ಬಂಗಾರ ಗೆದ್ದ ಅಚಿಂತಾ ಶೆಯುಲಿ

Achinta Sheuli: ಯುವ ವೇಟ್‌ಲಿಫ್ಟರ್‌ ಅಚಿಂತಾ ಶೆಯುಲಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಪುರುಷರ 73kg ವಿಭಾಗದಲ್ಲಿ ಒಟ್ಟು 313 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ 20 ವರ್ಷದ ವೇಟ್​​ಲಿಫ್ಟರ್ ಬಂಗಾರಕ್ಕೆ (Gold) ಕೊರಳೊಡ್ಡಿದ್ದಾರೆ.

CWG 2022: ಭಾರತಕ್ಕೆ ಮೂರನೇ ಚಿನ್ನ: ವೇಟ್​​ಲಿಫ್ಟಿಂಗ್​ನಲ್ಲಿ ಬಂಗಾರ ಗೆದ್ದ ಅಚಿಂತಾ ಶೆಯುಲಿ
Achinta Sheuli CWG 2022
TV9 Web
| Edited By: |

Updated on:Aug 01, 2022 | 7:38 AM

Share

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ 2022ರ ಕಾಮನ್‌ವೆಲ್ತ್‌ ಕ್ರೀಡಾ (Commonwealth Games) ಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಶಕ್ತಿ ಪ್ರದರ್ಶನ ಮುಂದುವರಿದಿದೆ. ಯುವ ವೇಟ್‌ಲಿಫ್ಟರ್‌ ಅಚಿಂತಾ ಶೆಯುಲಿ (Achinta Sheuli ) ಅವರು ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಪುರುಷರ 73kg ವಿಭಾಗದಲ್ಲಿ ಒಟ್ಟು 313 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ 20 ವರ್ಷದ ವೇಟ್​​ಲಿಫ್ಟರ್ ಬಂಗಾರಕ್ಕೆ (Gold) ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಆರಕ್ಕೇರಿದೆ. ವಿಶೇಷ ಎಂದರೆ ಇದುವರೆಗೆ ಬಂದಿರುವ ಎಲ್ಲ ಪದಕಗಳು ವೇಟ್​ಲಿಫ್ಟಿಂಗ್​​ನಿಂದಲೇ ಆಗಿದೆ. ಸ್ನಾಚ್ ರೌಂಡ್​ನಲ್ಲಿ ದಾಖಲೆಯ 140kg ಮತ್ತು 143kg ಎತ್ತಿದರೆ ಜೆರ್ಜ್​ ರೌಂಡ್​ನಲ್ಲಿ 166kg ಮತ್ತು 170kg ಬಾರ ಎತ್ತುವ ಮೂಲಕ ಅಚಿಂತಾ ಶೆಯುಲಿ ಚಿನ್ನವನ್ನು ಬಾಜಿಕೊಂಡಿದ್ದಾರೆ. ಈ ಬಂಗಾರದ ಪದಕವನ್ನು ನಾನು ನನ್ನ ಕೋಚ್ ಹಾಗೂ ಸಹೋದರನಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಚಿನ್ನ ಗೆದ್ದ ಜೆರೆಮಿ

ಜೆರೆಮಿ ಲಾಲ್ರಿನ್ನುಂಗಾ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು. ಮೀರಾಬಾಯಿ ಚಾನು ನಂತರ, ಜೆರೆಮಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಜೆರೆಮಿ ಸ್ನ್ಯಾಚ್‌ನಲ್ಲಿ 140 ಕೆಜಿ ಭಾರ ಹಾಗೂ ಜರ್ಕ್ನಲ್ಲಿ 160 ಕೆಜಿ ಎತ್ತಿದರು. ಮೂರನೇ ಪ್ರಯತ್ನದಲ್ಲಿ 165 ಕೆಜಿ ಎತ್ತಲು ಬಯಸಿದ್ದರು, ಆದರೆ ಜೆರೆಮಿಗೆ ಅದು ಸಾಧ್ಯವಾಗಲಿಲ್ಲ. 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 3 ಚಿನ್ನ, 2 ಬೆಳ್ಳಿ ಮತ್ತು ಒಂದು ಕಂಚು ಸೇರಿದಂತೆ ಒಟ್ಟು 6 ಪದಕಗಳು ಬಂದಿವೆ.

ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಕ್ರಿಕೆಟ್ ಪಂದ್ಯಗಳಲ್ಲಿ ಭಾರತದ ಕ್ರಿಕೆಟ್ ಪ್ರೇಮಿಗಳು ಯಾವ ರೀತಿಯ ಫಲಿತಾಂಶವನ್ನು ನಿರೀಕ್ಷಿಸಿದ್ದರು ಅದೇ ದೃಶ್ಯ ಎಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಕಂಡುಬಂದಿದೆ.

ಮಳೆಯಿಂದಾಗಿ ತಡವಾದ ಕಾರಣ, ಪಂದ್ಯವನ್ನು 18-18 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು, ಆದರೆ ಈ ನಿರ್ಧಾರವು ಇಡೀ ಪಂದ್ಯದಲ್ಲಿ ಸರಿ ಎಂದು ಸಾಬೀತಾಗಲಿಲ್ಲ ಮತ್ತು ಇಡೀ ತಂಡ 99 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರ ಅಬ್ಬರದ ಇನ್ನಿಂಗ್ಸ್‌ನ ಪರಿಣಾಮ ಭಾರತ 12 ಓವರ್‌ಗಳಲ್ಲಿ 100 ರನ್‌ಗಳ ಸಾಧಾರಣ ಗುರಿಯನ್ನು ಸಾಧಿಸಿತು.

Published On - 7:21 am, Mon, 1 August 22

Follow Us
TV9 Web
TV9 Web

TV9 Kannada

Read More
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ