KL Rahul: ಸ್ವಲ್ಪ ಬೇಗ ರೆಡಿಯಾಗಿ ಕೆಎಲ್: ಅಂಪೈರ್ ಕ್ಷಮೆಯಾಚಿಸಿದ ರಾಹುಲ್
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಭಾರತ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 26 ರನ್ಗಳಿಗೆ ಮೊದಲಿಗರಾಗಿ ಹೊರನಡೆದರು.
ಭಾರತ-ದಕ್ಷಿಣ ಆಫ್ರಿಕಾ (India vs South Africa 2nd Test) ನಡುವಣ 2ನೇ ಟೆಸ್ಟ್ ಪಂದ್ಯವನ್ನು ಸ್ಟೇಡಿಯಂನಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿಲ್ಲ. ಕೊರೋನಾ ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸಲಾಗುತ್ತಿದೆ. ಇತ್ತ ಪ್ರೇಕ್ಷಕರ ಗದ್ದಲವಿಲ್ಲದ ಕಾರಣ ಸ್ಟಂಪ್ ಮೈಕ್ನಲ್ಲಿ ಆಟಗಾರರ ಸಂಭಾಷಣೆಗಳು ಸ್ಪಷ್ಟವಾಗಿ ಕೇಳಿಸುತ್ತಿದೆ. ಅದರಂತೆ ಮೊದಲ ಪಂದ್ಯದ ವೇಳೆ ಅಂಪೈರ್ ಟೀಮ್ ಇಂಡಿಯಾ (Team India) ನಾಯಕ ಕೆಎಲ್ ರಾಹುಲ್ (KL Rahul) ಅವರಲ್ಲಿ ಮನವಿ ಮಾಡುತ್ತಿರುವ ಸಂಭಾಷಣೆಯೊಂದು ಇದೀಗ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಎಲ್ ರಾಹುಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಇನಿಂಗ್ಸ್‌ನ ಐದನೇ ಓವರ್‌ನಲ್ಲಿ ಕಗಿಸೊ ರಬಾಡ ಬೌಲಿಂಗ್ ಮಾಡಲು ರನ್-ಅಪ್ ತೆಗೆದುಕೊಂಡಾಗ, ಕೊನೆಯ ಕ್ಷಣದಲ್ಲಿ ರಾಹುಲ್ ಹಿಂದೆ ಸರಿದರು. ಈ ವೇಳೆ ಅಂಪೈರ್ ಮರೈಸ್ ಎರಾಸ್ಮಸ್ ಅವರು ರಾಹುಲ್ ಅವರಲ್ಲಿ ಮನವಿ ಮಾಡುತ್ತಿರುವುದು ಸ್ಟಂಪ್ ಮೈಕ್ರೊಫೋನ್‌ನಲ್ಲಿ ಸ್ಪಷ್ಟವಾಗಿ ಕೇಳಿಸಿದೆ.
ರಾಹುಲ್‌ಗೆ, ‘ದಯವಿಟ್ಟು ಸ್ವಲ್ಪ ಬೇಗ ಆಡಲು ಪ್ರಯತ್ನಿಸಿ’ ಎಂದು ಅಂಪೈರ್ ಮರೈಸ್ ಎರಾಸ್ಮಸ್ ಕೇಳಿಕೊಂಡರು. ಅತ್ತ ಅಂಪೈರ್ ಮನವಿ ಮಾಡುತ್ತಿದ್ದಂತೆ ಕೆಎಲ್ ರಾಹುಲ್ ಕ್ಷಮೆಯಾಚಿಸಿದರು. ಬೌಲರ್ ಚೆಂಡೆಸೆಯುವ ಅಂತಿಮ ಕ್ಷಣದಲ್ಲಿ ಹಿಂದೆ ಸರಿಯುತ್ತಿರುವ ಕಾರಣ ಎರಾಸ್ಮಸ್ ಅವರು ಕೆಎಲ್ ರಾಹುಲ್ ಅವರಲ್ಲಿ ಬೇಗ ರೆಡಿಯಾಗಿ ಯತ್ನಿಸಿ ಎಂದು ತಿಳಿಸಿದ್ದರು. ಅದರಂತೆ ಆ ಬಳಿಕ ಕೆಎಲ್ ರಾಹುಲ್ ಅಂತಿಮ ಕ್ಷಣದಲ್ಲಿ ಹಿಂದೆ ಸರಿದಿರಲಿಲ್ಲ ಎಂಬುದು ವಿಶೇಷ.
Marais is a sweet guy #INDvSA. As is the stand-in captain pic.twitter.com/KVQNqUPt06
— Benaam Baadshah (@BenaamBaadshah4) January 3, 2022
ಕಡಿಮೆ ಮೊತ್ತಕ್ಕೆ ಟೀಮ್ ಇಂಡಿಯಾ ಆಲೌಟ್! ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಭಾರತ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 26 ರನ್ಗಳಿಗೆ ಮೊದಲಿಗರಾಗಿ ಹೊರನಡೆದರು. ಇದರ ಬೆನ್ನಲ್ಲೇ ಚೇತೇಶ್ವರ ಪೂಜಾರ (3) ಹಾಗೂ ಅಜಿಂಕ್ಯ ರಹಾನೆ (0) ಕೂಡ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ ನಾಯಕ ಕೆಎಲ್ ರಾಹುಲ್ ಸಂಪೂರ್ಣ ರಕ್ಷಣಾತ್ಮಕ ಆಟವಾಡಿದರು.
ಇನ್ನು ಹನುಮ ವಿಹಾರಿ (20) ಹಾಗೂ ರಿಷಭ್ ಪಂತ್ 17) ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರೂ ದೊಡ್ಡ ಮೊತ್ತಗಳಿಸಲು ಸಾಧ್ಯವಾಗಲಿಲ್ಲ. ಇದಾಗ್ಯೂ ರಾಹುಲ್ ಜೊತೆಗೂಡಿದ ಅಶ್ವಿನ್ ತಂಡಕ್ಕೆ ಆಸರೆಯಾದರು. 133 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ ಅರ್ಧಶತಕ ಪೂರೈಸಿದರು. ಹಾಗೆಯೇ ಅಶ್ವಿನ್ 50 ಎಸೆತಗಳಲ್ಲಿ ಬಿರುಸಿನ 46 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. ಅದರಂತೆ ಅಂತಿಮವಾಗಿ ಟೀಮ್ ಇಂಡಿಯಾ 202 ರನ್ಗಳಿಸಿತು.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(‘Try and be a little quicker please’: Umpire warns KL Rahul)