ಫಾದರ್ ಆಫ್ ಪಾಕಿಸ್ತಾನ್..! ಕಿಂಗ್ ಕೊಹ್ಲಿಯ ಶತಕವನ್ನು ನೆಟ್ಟಿಗರು ಸಂಭ್ರಮಿಸಿದ್ದು ಹೀಗೆ

|

Updated on: Sep 12, 2023 | 9:40 AM

Virat Kohli: ಪಾಕಿಸ್ತಾನದ ವಿರುದ್ಧ ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ ಕೊಹ್ಲಿ, ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ 60 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದು,ಪಾಕಿಸ್ತಾನದ ವಿರುದ್ಧ ಕೊಹ್ಲಿ ಇದುವರೆಗೆ ಆಡಿರುವ 15 ಪಂದ್ಯಗಳಲ್ಲಿ 640 ರನ್ ಕಲೆಹಾಕಿದ ದಾಖಲೆ ಬರೆದಿದ್ದಾರೆ.

ಫಾದರ್ ಆಫ್ ಪಾಕಿಸ್ತಾನ್..! ಕಿಂಗ್ ಕೊಹ್ಲಿಯ ಶತಕವನ್ನು ನೆಟ್ಟಿಗರು ಸಂಭ್ರಮಿಸಿದ್ದು ಹೀಗೆ
ವಿರಾಟ್ ಕೊಹ್ಲಿ
Follow us on

ಟೀಂ ಇಂಡಿಯಾದ ಕಿಂಗ್, ವಿರಾಟ್ ಕೊಹ್ಲಿ (Virat Kohli) ಇತಿಹಾಸ ಸೃಷ್ಟಿಸಿದ್ದಾರೆ. ಸೋಮವಾರ, ಏಷ್ಯಾಕಪ್‌ನ (Asia Cup 2023) ಸೂಪರ್-4 ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ (India vs Pakistan) ಅದ್ಭುತ ಇನ್ನಿಂಗ್ಸ್ ಆಡಿ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 13 ಸಾವಿರ ರನ್‌ಗಳನ್ನು ಪೂರೈಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 77ನೇ ಶತಕವನ್ನೂ ದಾಖಲಿಸಿದ್ದಾರೆ. ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ 84 ಎಸೆತಗಳಲ್ಲಿ ವಿರಾಟ್ ಕೊಹ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಶತಕವನ್ನು ಪೂರ್ಣಗೊಳಿಸಿದರು. ಕೆಎಲ್ ರಾಹುಲ್ ಜೊತೆಗೂಡಿ ವಿರಾಟ್ ಕೊಹ್ಲಿ 200ಕ್ಕೂ ಹೆಚ್ಚು ರನ್ ಜೊತೆಯಾಟ ನಡೆಸಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದರು.

ವಿರಾಟ್ ಕೊಹ್ಲಿ ಈ ಇನ್ನಿಂಗ್ಸ್‌ನಲ್ಲಿ ಕೇವಲ 94 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ ಒಟ್ಟು 122 ರನ್ ದಾಖಲಿಸಿದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊರತಾಗಿ ಕೆಎಲ್ ರಾಹುಲ್ ಕೂಡ ಶತಕ ಸಿಡಿಸಿದ್ದು, 106 ಎಸೆತಗಳಲ್ಲಿ 111 ರನ್ ಗಳಿಸಿದ್ದಾರೆ. ಇವರಿಬ್ಬರ ಬ್ಯಾಟಿಂಗ್‌ ಬಲದಿಂದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 356 ರನ್ ಕಲೆಹಾಕಿತು. ಇನ್ನು ಮೈದಾನದಲ್ಲಿ ಪಾಕ್ ಬೌಲರ್​ಗಳ ಬೆಂಡೆತ್ತಿದ್ದ ಕಿಂಗ್ ಕೊಹ್ಲಿಯ ಆಟವನ್ನು ನೆಟ್ಟಿಗರು ಭಿನ್ನವಿಭಿನ್ನವಾಗಿ ಹಾಡಿ ಹೊಗಳಿದ್ದಾರೆ.

ಪಾಕ್ ವಿರುದ್ಧ 60+ ಸರಾಸರಿ

ಇನ್ನು ಪಾಕಿಸ್ತಾನದ ವಿರುದ್ಧ ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ ಕೊಹ್ಲಿ, ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ 60 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದು,ಪಾಕಿಸ್ತಾನದ ವಿರುದ್ಧ ಕೊಹ್ಲಿ ಇದುವರೆಗೆ ಆಡಿರುವ 15 ಪಂದ್ಯಗಳಲ್ಲಿ 640 ರನ್ ಕಲೆಹಾಕಿದ ದಾಖಲೆ ಬರೆದಿದ್ದಾರೆ.

13 ಸಾವಿರ ರನ್ ಪೂರೈಸಿದ ವಿರಾಟ್

ಹಾಗೆಯೇ ಏಕದಿನದಲ್ಲಿ ಕೊಹ್ಲಿ13,000 ರನ್‌ಗಳನ್ನು ಪೂರೈಸಿದ್ದಲ್ಲದೆ, 112 ರನ್‌ಗಳೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ರ ಅತಿ ಹೆಚ್ಚು 50+ ಸ್ಕೋರ್‌ಗಳ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದರು. ಅಷ್ಟೇ ಅಲ್ಲ, ಈ ಶತಕದೊಂದಿಗೆ ಕೊಹ್ಲಿ ಕೊಲಂಬೊದಲ್ಲಿನ ತನ್ನ ಶತಕದ ( 128, 131 ಮತ್ತು 110 ಸ್ಕೋರ್‌) ಓಟವನ್ನು ಮುಂದುವರೆಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ