ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನ (U19 World Cup 2024) ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ (India U-19 vs New Zealand U-19) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು 295 ರನ್ ಕಲೆಹಾಕಿದೆ. ತಂಡದ ಪರ ಆರಂಭಿಕ ಆದರ್ಶ್ ಸಿಂಗ್ (Adarsh Singh) ಅರ್ಧಶತಕ ಸಿಡಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸ್ಫೋಟಕ ಬ್ಯಾಟರ್ ಮುಶೀರ್ ಖಾನ್ (Musheer Khan) ಲೀಗ್ನಲ್ಲಿ ಸತತ ಎರಡನೇ ಶತಕ ಸಿಡಿಸಿ ಮಿಂಚಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಮೊದಲ ವಿಕೆಟ್‌ಗೆ 28 ರನ್‌ಗಳ ಜೊತೆಯಾಟ ಬಂತು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಆರಂಭಿಕ ಅರ್ಶಿನ್ ಕುಲಕರ್ಣಿ ಈ ಪಂದ್ಯದಲ್ಲಿ ಕೇವಲ 8 ರನ್ಗಳಿಗೆ ಸುಸ್ತಾದರು. ಆದರೆ ಆ ಬಳಿಕ ಜೊತೆಯಾದ ಆದರ್ಶ್ ಹಾಗೂ ಮುಶೀರ್ ಅರ್ಧಶತಕದ ಜೊತೆಯಾಟ ನಡೆಸಿದರು. ಈ ವೇಳೆ ಅರ್ಧಶತಕ ಸಿಡಿಸಿದ ಆದರ್ಶ್ 52 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ಮುಶೀರ್ ಖಾನ್ ಅರ್ಧಶತಕ ಸಿಡಿಸಿ ಮಿಂಚಿದರು.
U19 World Cup 2024: ಮುಶೀರ್ ಖಾನ್ ಶತಕ; ಭಾರತಕ್ಕೆ 201 ರನ್‌ಗಳ ಭರ್ಜರಿ ಜಯ
ಆದರ್ಶ್ ವಿಕೆಟ್ ಪತನದ ಬಳಿಕ ಬಂದ ನಾಯಕ ಉದಯ್, ಮುಶೀರ್ಗೆ ಉತ್ತಮ ಸಾಥ್ ನೀಡಿದರು. ಈ ಇಬ್ಬರ ನಡುವೆಯೂ ಅರ್ಧಶತಕದ ಜೊತೆಯಾಟ ನಡೆಯಿತು. ಇಬ್ಬರು ಸೇರಿ ತಂಡವನ್ನು ಬಿಗ್ ಸ್ಕೋರ್ಗೆ ಕೊಂಡೊಯ್ಯುತ್ತಾರೆ ಎಂದುಕೊಳ್ಳುವ ವೇಳೆಗೆ ನಾಯಕ ಉದಯ್ 34 ರನ್ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮುಶೀರ್, 126 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 131 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಇವರ ಈ ಆಟದಿಂದಾಗಿ ತಂಡ ಮುನ್ನೂರು ರನ್‌ಗಳ ಸಮೀಪಕ್ಕೆ ಬಂತು.
Innings Break!
A splendid 1⃣3⃣1⃣ from Musheer Khan propels #TeamIndia to 295/8 👌👌
Over to our bowlers 💪
Scorecard ▶️ https://t.co/UdOH802Y4s#BoysInBlue | #INDvNZ pic.twitter.com/eC5SOg7CEh
— BCCI (@BCCI) January 30, 2024
ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಬ್ಯಾಟ್ಸ್‌ಮನ್ ಮುಶೀರ್ ಖಾನ್ಗೆ ಟೂರ್ನಿಯಲ್ಲಿ ಇದು ಸತತ ಎರಡನೇ ಶತಕವಾಗಿದೆ. ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸುವುದುಕ್ಕು ಮುನ್ನ ಮುಶೀರ್, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಶತಕದ ಇನ್ನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮುಶೀರ್ ಖಾನ್ 106 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 118 ರನ್ ಗಳಿಸಿದರು. ಅಲ್ಲದೆ ನಾಯಕ ಉದಯ್ ಅವರೊಂದಿಗೆ ಮೂರನೇ ವಿಕೆಟ್‌ಗೆ ಮುಶೀರ್ 156 ರನ್‌ಗಳ ಪ್ರಮುಖ ಜೊತೆಯಾಟವನ್ನು ಹಂಚಿಕೊಂಡಿದ್ದರು. ಈ ಕಾರಣದಿಂದಾಗಿ ಭಾರತ ತಂಡ 301 ರನ್ ಕಲೆ ಹಾಕಿ 201 ರನ್ಗಳಿಂದ ಗೆಲುವು ಸಾಧಿಸಲು ಸಾಧ್ಯವಾಯಿತು.
2024ರ ಅಂಡರ್ 19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮುಶೀರ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಅವರು 300 ರನ್‌ಗಳ ಗಡಿ ದಾಟಿದ್ದಾರೆ. ಮುಶೀರ್ ಖಾನ್ ಬಿಟ್ಟರೆ ಈ ಬಾರಿ ಯಾವುದೇ ಆಟಗಾರ 300 ರನ್ ಗಡಿ ಮುಟ್ಟಿಲ್ಲ. ಈ ಅವಧಿಯಲ್ಲಿ ಮುಶೀರ್ ಖಾನ್ 2 ಶತಕ ಹಾಗೂ 1 ಅರ್ಧ ಶತಕ ಬಾರಿಸಿದ್ದಾರೆ.
Published On - 5:27 pm, Tue, 30 January 24