ಮ್ಯಾಚ್ ಫಿಕ್ಸಿಂಗ್ ಆರೋಪ; ಯುವ ಕ್ರಿಕೆಟಿಗನಿಗೆ 14 ವರ್ಷಗಳ ನಿಷೇಧ ಹೇರಿದ ಐಸಿಸಿ..!

| Updated By: ಪೃಥ್ವಿಶಂಕರ

Updated on: Oct 12, 2022 | 1:50 PM

ಮೆಹರ್ದೀಪ್ ವಿರುದ್ಧ ಒಟ್ಟು 7 ಆರೋಪಗಳು ಕೇಳಿಬಂದಿದ್ದವು, ಈಗ ಐಸಿಸಿ ಅವರನ್ನು ದೋಷಿ ಎಂದು ಘೋಷಿಸಿ 14 ವರ್ಷಗಳ ಕಾಲ ಕ್ರಿಕೆಟ್​ನಿಂದ ನಿಷೇಧ ಹೇರಿದೆ.

ಮ್ಯಾಚ್ ಫಿಕ್ಸಿಂಗ್ ಆರೋಪ; ಯುವ ಕ್ರಿಕೆಟಿಗನಿಗೆ 14 ವರ್ಷಗಳ ನಿಷೇಧ ಹೇರಿದ ಐಸಿಸಿ..!
ಪ್ರಾತಿನಿಧಿಕ ಚಿತ್ರ
Follow us on

ಟಿ20 ವಿಶ್ವಕಪ್ (T20 World Cup 2022) ಕ್ರಿಕೆಟ್​ ಹಬ್ಬ ಈಗಾಗಲೇ ಆರಂಭವಾಗಿದ್ದು, ಎಲ್ಲಾ ತಂಡಗಳು ಅಭ್ಯಾಸ ಆರಂಭಿಸಿವೆ. ಆದರೆ, ಅದಕ್ಕೂ ಮುನ್ನ ಐಸಿಸಿ ಕ್ರಿಕೆಟ್ ಶಿಶು ತಂಡದ ಆಟಗಾರನಿಗೆ 14 ವರ್ಷಗಲ ವನವಾಸದ ಶಿಕ್ಷೆಯನ್ನು ವಿಧಿಸಿದೆ. ಅಂದಹಾಗೆ, ಈ ಆಟಗಾರ ಟಿ20 ವಿಶ್ವಕಪ್ ಆಡುತ್ತಿಲ್ಲ ಎಂಬುದು ಇಲ್ಲಿ ಕೊಂಚ ಸಮಾದಾನಕರ ಸುದ್ದಿಯಾಗಿದೆ. ಆದರೆ ಈ ಆಟಗಾರ ಪ್ರತಿನಿದಿಸುತ್ತಿರುವ ತಂಡ ಮಾತ್ರ ಅರ್ಹತಾ ಪಂದ್ಯಗಳನ್ನು ಆಡುವ ಮೂಲಕ ವಿಶ್ವಕಪ್​ ಸೂಪರ್ 12 ಸುತ್ತಿಗೆ ಎಂಟ್ರಿಕೊಡಲು ಸೆಣಸಾಡುತ್ತಿದೆ. ಅಷ್ಟಕ್ಕೂ ನಾವು ಯುಎಇ ಕ್ರಿಕೆಟಿಗ (UAE cricketer) ಮೆಹರ್ದೀಪ್ ಚಾವ್ಕರ್ ಬಗ್ಗೆ ಮಾತನಾಡುತ್ತಿದ್ದು, 3 ವರ್ಷಗಳ ಹಿಂದೆ ಈ ಕ್ರಿಕೆಟಿಗ ಕ್ರಿಕೆಟ್ ಮೈದಾನದಲ್ಲಿ ಮಾಡಿದ ದೊಡ್ಡ ತಪ್ಪಿನಿಂದಾಗಿ ಶಿಕ್ಷೆಗೆ ಒಳಗಾಗಿದ್ದಾರೆ. ಆ ಶಿಕ್ಷೆಯ ಫಲವೇ ಈಗ ಮುಂದಿನ 14 ವರ್ಷಗಳ ಕಾಲ ಮೆಹರ್ದೀಪ್ ಚಾವ್ಕರ್ (Mehrdeep Chhawkar) ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿಯಬೇಕಾಗಿದೆ.

3 ವರ್ಷಗಳ ಹಿಂದೆ, ಅಂದರೆ 2019 ರಲ್ಲಿ ಮೆಹರ್ದೀಪ್ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಜಿಂಬಾಬ್ವೆ ಮತ್ತು ಯುಎಇ ನಡುವಿನ ಅಂತರಾಷ್ಟ್ರೀಯ ಪಂದ್ಯ ಹಾಗೂ ಕೆನಡಾದ ಜಿಟಿ20 ಲೀಗ್‌ನ ಪಂದ್ಯದಲ್ಲಿ ಫಿಕ್ಸಿಂಗ್ ಮಾಡಿದ ಆರೋಪ ಅವರ ಮೇಲಿತ್ತು. ಮೆಹರ್ದೀಪ್ ವಿರುದ್ಧ ಒಟ್ಟು 7 ಆರೋಪಗಳು ಕೇಳಿಬಂದಿದ್ದವು, ಈಗ ಐಸಿಸಿ ಅವರನ್ನು ದೋಷಿ ಎಂದು ಘೋಷಿಸಿ 14 ವರ್ಷಗಳ ಕಾಲ ಕ್ರಿಕೆಟ್​ನಿಂದ ನಿಷೇಧ ಹೇರಿದೆ.

14 ವರ್ಷಗಳ ನಿಷೇಧ

ಭ್ರಷ್ಟಾಚಾರ ನಿಗ್ರಹ ದಳ ಮೆಹರ್‌ದೀಪ್‌ಗೆ ನಿಷೇಧ ಹೇರಿದೆ ಎಂದು ಐಸಿಸಿ ಬುಧವಾರ ಮಾಹಿತಿ ನೀಡಿದೆ. ಇದಕ್ಕೂ ಮುನ್ನ ಯುಎಇ ರಾಷ್ಟ್ರೀಯ ತಂಡದ ಇಬ್ಬರು ಆಟಗಾರರನ್ನು ನಿಷೇಧಿಸಲಾಗಿತ್ತು.

ಚಾವ್ಕರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

ಮೆಹರ್ದೀಪ್ ಚಾವ್ಕರ್ ಯುಎಇ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಯುಎಇಯ ಅಗ್ರ ಲೀಗ್‌ನಲ್ಲಿ ನಿರಂತರವಾಗಿ ಆಡುತ್ತಿದ್ದು, 2012ರಲ್ಲಿ ಅಂಡರ್-19 ಏಷ್ಯನ್ ಕ್ಲಬ್ ಟೂರ್ನಿಯಲ್ಲೂ ಆಡಿದ್ದಾರೆ. ಐಸಿಸಿ ಶಿಕ್ಷೆಯ ನಂತರ, ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು, ತನ್ನ ಮೇಲಿರುವ ಆರೋಪಗಳೆಲ್ಲ ನಿರಾಧಾರವಾಗಿವೆ ಎಂದಿದ್ದಾರೆ. ಮೆಹರ್ದೀಪ್ ಚಾವ್ಕರ್ ವಿರುದ್ಧದ ಆರೋಪ ಫಿಕ್ಸಿಂಗ್ ಮಾತ್ರವಲ್ಲದೆ ತನಿಖೆಗೆ ಸಹಕರಿಸದ ಆರೋಪವೂ ಆಗಿದೆ. ಇದೇ ಕಾರಣಕ್ಕೆ ಐಸಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.