ಕೊನೆಯ ಎಸೆತ, 4 ರನ್ ಬೇಕು; ಫೀಲ್ಡರ್‌ ಎಡವಟ್ಟಿನಿಂದ ಬೌಂಡರಿ ದಾಟಿದ ಚೆಂಡು! ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Sep 22, 2022 | 6:20 PM

ಸ್ಟ್ರೈಕ್​ನಲ್ಲಿದ್ದ ಬ್ಯಾಟರ್ ಚೆಂಡನ್ನು ಫೈನ್ ಲೆಗ್‌ ಕಡೆಗೆ ಆಡಿದರು. ಅಲ್ಲಿ ಆಗಲೇ ಜಿಂಬಾಬ್ವೆ ತಂಡ ಫೀಲ್ಡರ್​ನನ್ನು ನಿಯೋಜನೆ ಮಾಡಿದ್ದರಿಂದ ಯುಎಇ ತಂಡಕ್ಕೆ ಕೇವಲ ಒಂದು ರನ್ ಸಿಗುವ ಅವಕಾಶವಿತ್ತು. ಈ ಮೂಲಕ ಜಿಂಬಾಬ್ವೆಗೆ ಗೆಲುವು ನಿಶ್ಚಿತವಾಗಿತ್ತು.

ಕೊನೆಯ ಎಸೆತ, 4 ರನ್ ಬೇಕು; ಫೀಲ್ಡರ್‌ ಎಡವಟ್ಟಿನಿಂದ ಬೌಂಡರಿ ದಾಟಿದ ಚೆಂಡು! ವಿಡಿಯೋ ನೋಡಿ
UAE beat Zimbabwe
Follow us on

ಕ್ರಿಕೆಟ್​ನಲ್ಲಿ ಒಮ್ಮೊಮ್ಮೆ ಕೊನೆಯ ಕ್ಷಣದವರೆಗೂ ವಿಜಯಲಕ್ಷ್ಮೀ ಯಾರ ಪಾಲಾಗಲಿದ್ದಾಳೆ ಎಂಬುದನ್ನು ಹೇಳುವುದು ಕಷ್ಟ. ಇನ್ನೇನೂ ಗೆದ್ದೇ ಬಿಟ್ಟವು ಎಂದು ಭೀಗಲಾರಂಬಿಸಿದ ತಂಡ ಕೊನೆಯ ಕ್ಷಣದಲ್ಲಿ ಸೋಲುವುದನ್ನು ಕಂಡಿದ್ದೇವೆ. ಹಾಗೆಯೇ ಸೋಲು ನಮಗೆ ಖಚಿತ ಎಂದುಕೊಂಡಿರುವ ತಂಡಗಳು ಅದೇಷ್ಟೋ ಬಾರಿ ಗೆದ್ದಿರುವುದನ್ನು ಕಂಡಿದ್ದೇವೆ. ಈ ಅನಿರೀಕ್ಷಿತ ಗೆಲುವಿನಲ್ಲಿ ಉಭಯ ತಂಡಗಳಲ್ಲಿನ ಆಟಗಾರರು ಮಾಡುವ ತಪ್ಪುಗಳೇ ಪ್ರಮುಖವಾಗಿ ಬಿಡುತ್ತವೆ. ಈಗ ಅಂತಹದ್ದೆ ಅನಿರೀಕ್ಷಿತ ಗೆಲುವು ಯುಎಇ ತಂಡದ ಪಾಲಾಗಿದೆ. ಬುಧವಾರ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಕ್ವಾಲಿಫೈಯರ್‌ ಪಂದ್ಯದಲ್ಲೂ ಇದೇ ರೀತಿಯ ಪಲಿತಾಂಶ ಹೊರಬಿದ್ದಿದ್ದು, ಕೊನೆಯ ಎಸೆತದಲ್ಲಿ ಗೆಲುವು ಸಾಧಿಸುವ ಮೂಲಕ ಯುಎಇ ತಂಡ ಜಿಂಬಾಬ್ವೆಗೆ ಸೋಲಿನ ಆಘಾತ ನಿಡಿದೆ. ತನ್ನ ಗೆಲುವಿಗೆ 121 ರನ್​ಗಳ ಅಲ್ಪ ಟಾರ್ಗೆಟ್ ಬೆನ್ನಟ್ಟಿದ ಯುಎಇ ತಂಡಕ್ಕೆ ಕೊನೆಯ ಎಸೆತದಲ್ಲಿ 4 ರನ್‌ಗಳ ಅಗತ್ಯವಿತ್ತು. ಆದರೆ ಯುಎಇ ತಂಡದ ಪ್ರಮುಖ 6 ವಿಕೆಟ್‌ಗಳು ಬಿದ್ದಿದ್ದವು. ಹೀಗಾಗಿ ಜಿಂಬಾಬ್ವೆಯ ಗೆಲುವು ಖಚಿತವೆಂದು ಪರಿಗಣಿಸಲಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ಫೀಲ್ಡರ್ ಮಾಡಿದ ತಪ್ಪಿನಿಂದ ಯುಎಇ ಗೆಲುವು ಸಾಧಿಸಿತು.

ಫೀಲ್ಡರ್ ಅಜಾಗರೂಕತೆ

ಕೊನೆಯ ಓವರ್‌ನಲ್ಲಿ ಯುಎಇಗೆ 14 ರನ್‌ಗಳ ಅಗತ್ಯವಿತ್ತು. ಜಿಂಬಾಬ್ವೆ ಪರ ರನ್ ಉಳಿಸುವ ಜವಾಬ್ದಾರಿಯನ್ನು ನೋಮ್ವೆಲೋ ಸಿಬಂದಾ ಅವರಿಗೆ ವಹಿಸಲಾಯಿತು. ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ ನಾಲ್ಕು ರನ್‌ಗಳನ್ನು ನೀಡಿದ ಸಿಬಂದಾ, ಐದನೇ ಎಸೆತದಲ್ಲಿ ಇಲ್ಲದ ಪ್ರಯತ್ನ ಮಾಡಲು ಹೋಗಿ ವೈಡ್‌ ಜೊತೆಗೆ ಬೌಂಡರಿಯನ್ನು ನೀಡಿದರು. ಇದಾದ ಬಳಿಕ ಕೊನೆಯ ಎರಡು ಎಸೆತಗಳಲ್ಲಿ ಯುಎಇಗೆ 6 ರನ್‌ಗಳ ಅಗತ್ಯವಿತ್ತು. 15 ವರ್ಷದ ವೈಷ್ಣವ್ ಮಹೇಶ್ ಐದನೇ ಎಸೆತದಲ್ಲಿ 2 ರನ್ ಗಳಿಸಿದರು.

ಕೊನೆಯ ಎಸೆತದಲ್ಲಿ ಯುಎಇಗೆ ನಾಲ್ಕು ರನ್ ಬೇಕಿತ್ತು. ಹೀಗಾಗಿ ಸಿಬಂದಾ ಕೊನೆಯವನ್ನು ಎಸೆತವನ್ನು ಅತ್ಯುತ್ತಮವಾಗಿ ಬೌಲ್ ಮಾಡಿದರು. ಸ್ಟ್ರೈಕ್​ನಲ್ಲಿದ್ದ ಮಹೇಶ್ ಚೆಂಡನ್ನು ಫೈನ್ ಲೆಗ್‌ ಕಡೆಗೆ ಆಡಿದರು. ಅಲ್ಲಿ ಆಗಲೇ ಜಿಂಬಾಬ್ವೆ ತಂಡ ಫೀಲ್ಡರ್​ನನ್ನು ನಿಯೋಜನೆ ಮಾಡಿದ್ದರಿಂದ ಯುಎಇ ತಂಡಕ್ಕೆ ಕೇವಲ ಒಂದು ರನ್ ಸಿಗುವ ಅವಕಾಶವಿತ್ತು. ಈ ಮೂಲಕ ಜಿಂಬಾಬ್ವೆಗೆ ಗೆಲುವು ನಿಶ್ಚಿತವಾಗಿತ್ತು. ಆದರೆ ಅಲ್ಲಿ ನಿಂತಿದ್ದ ಫೀಲ್ಡರ್ ತುಂಬಾ ಕಳಪೆ ಫೀಲ್ಡಿಂಗ್ ಮಾಡಿ ಚೆಂಡನ್ನು ಹಿಡಿಯುವಲ್ಲಿ ಎಡವಟ್ಟು ಮಾಡಿ ಬಿಟ್ಟರು. ಫೀಲ್ಡರ್ ಕೈನಿಂದ ತಪ್ಪಿಸಿಕೊಂಡ ಚೆಂಡು ಅವರ ಕಾಲುಗಳ ನಡುವೆ ಹಾದುಹೋಗಿ ಬೌಂಡರಿ ಗೆರೆ ದಾಟಿತು. ಈ ಮೂಲಕ ಗೆಲ್ಲುವ ಪಂದ್ಯವನ್ನು ಜಿಂಬಾಬ್ವೆ ಕಳೆದುಕೊಂಡಿತು.

ICC ಮಹಿಳಾ T20 ವಿಶ್ವಕಪ್ ಕ್ವಾಲಿಫೈಯರ್ 2022 ಕುರಿತು ಮಾತನಾಡುವುದಾದರೆ, ಜಿಂಬಾಬ್ವೆ ಮತ್ತು UAE ತಂಡವು B ಗುಂಪಿನಲ್ಲಿದ್ದು, ಜಿಂಬಾಬ್ವೆ ಪಂದ್ಯಾವಳಿಯಲ್ಲಿ ತನ್ನ ಮೊದಲ ಸೋಲನ್ನು ಅನುಭವಿಸಿದೆ. ಆದರೆ ಆಡಿರುವ 3 ಪಂದ್ಯಗಳಲ್ಲಿ 2 ರಲ್ಲಿ ಗೆದ್ದಿರುವ ಜಿಂಬಾಬ್ವೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅದೇ ಹೊತ್ತಿಗೆ ಯುಎಇ ತಂಡ 3 ಪಂದ್ಯಗಳಲ್ಲಿ ಮೊದಲ ಜಯ ದಾಖಲಿಸಿ ಕೊನೆಯ ಸ್ಥಾನದಲ್ಲಿದೆ. ಥಾಯ್ಲೆಂಡ್ ಮತ್ತು ಪಪುವಾ ನ್ಯೂಗಿನಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

Published On - 6:17 pm, Thu, 22 September 22