ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಶುಕ್ರವಾರ (ಡಿಸೆಂಬರ್ 8) ಇಂದು ಬಹುನಿರೀಕ್ಷಿತ ಅಂಡರ್-19 ಏಷ್ಯಾಕಪ್ 2023 ಆವೃತ್ತಿಗೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲೇ ಭಾರತ U-19 ತಂಡ 2017 ರ ಚಾಂಪಿಯನ್ ಅಫ್ಘಾನಿಸ್ತಾನ (India U19 vs Afghanistan U19) ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ದುಬೈನಲ್ಲಿರುವ ಐಸಿಸಿ ಅಕಾಡೆಮಿ ಓವಲ್-1 ನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ದಾಖಲೆಯ ಒಂಬತ್ತನೇ ಬಾರಿಗೆ ಪ್ರಶಸ್ತಿ ಗೆಲ್ಲುವ ತವಕದೊಂದಿಗೆ ಯಂಗ್ ಇಂಡಿಯಾ ಕಣಕ್ಕಿಳಿಯುತ್ತಿದೆ.
ಭಾರತವು ಇತಿಹಾಸದಲ್ಲಿ ಇಲ್ಲಿಯವರೆಗೆ ಸ್ಪರ್ಧೆಯ ಒಂಬತ್ತು ಆವೃತ್ತಿಗಳಲ್ಲಿ ಎಂಟನ್ನು ಗೆದ್ದಿದೆ, 1989, 2003, 2012, 2013/14, 2016, 2018, 2019 ಮತ್ತು 2021 ರಲ್ಲಿ ಪ್ರಶಸ್ತಿಯನ್ನು ಎತ್ತಿಹಿಡಿದಿದೆ. ಭಾರತ ಬಿಟ್ಟು ಚಾಂಪಿಯನ್ ಆಗಿರುವ ಮತ್ತೊಂದು ಏಕೈಕ ತಂಡವೆಂದರೆ ಅದು ಅಫ್ಘಾನಿಸ್ತಾನ (2017 ರಲ್ಲಿ). ಹೀಗಾಗಿ ಇಂದಿನ ಇಂಡೋ-ಅಫ್ಘಾನ್ ನಡುವಣ ಕಾದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
Jos Buttler: ವಿಶೇಷ ದಾಖಲೆ ಬರೆದ ಜೋಸ್ ಬಟ್ಲರ್
ಅಂಡರ್-19 ಏಷ್ಯಾಕಪ್ 2023 ಟೂರ್ನಿಯಲ್ಲಿ ಒಟ್ಟು 8 ತಂಡಗಳ ನಡುವೆ ಕಾದಾಟ ನಡೆಯಲಿದೆ. 8 ತಂಡಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಲ್ಲಿ ಇರಿಸಲಾಗಿದೆ. ಪಾಕಿಸ್ತಾನ, ಭಾರತ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಶ್ರೀಲಂಕಾ, ಜಪಾನ್, ಯುಎಇ ಮತ್ತು ಬಾಂಗ್ಲಾದೇಶ ಬಿ ಗುಂಪಿನಲ್ಲಿದೆ. U-19 ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದ್ದು, ಕಳೆದ ಬಾರಿ 2021ರಲ್ಲಿ ಶ್ರೀಲಂಕಾವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು.
ಭಾರತ U-19 vs ಅಫ್ಘಾನಿಸ್ತಾನ U-19 ಏಷ್ಯಾಕಪ್ ಪಂದ್ಯ ದುಬೈನ ಐಸಿಸಿ ಅಕಾಡೆಮಿ ಓವಲ್-1 ಮೈದಾನದಲ್ಲಿ ನಡೆಯಲಿದ್ದು, ಬೆಳಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದೆ. ಆದರೆ, ಈ ಪಂದ್ಯ ಭಾರತದಲ್ಲಿ ಪ್ರಸಾರವಾಗುವುದಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಯೂಟ್ಯೂಬ್ ಪೇಜ್ ಮೂಲಕ ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
ಉದಯ್ ಸಹರನ್ (ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ, ಅರವೇಲಿ ಅವನೀಶ್ ರಾವ್ (ವಿಕೆಟ್-ಕೀಪರ್), ಸೌಮ್ಯ ಕುಮಾರ್ ಪಾಂಡೆ, ಮುರುಗನ್ ಅಭಿಷೇಕ್, ಇನೇಶ್ ಮಹಾಜನ್ (ವಿಕೆಟ್-ಕೀಪರ್), ಧನುಷ್ ಗೌಡ.
ಸ್ಟ್ಯಾಂಡ್‌ಬೈ ಆಟಗಾರರು: ಪ್ರೇಮ್ ದೇವ್ಕರ್, ಅಂಶ್ ಗೋಸಾಯಿ, ಮೊಹಮ್ಮದ್ ಅಮನ್.
ಮೀಸಲು ಆಟಗಾರರು: ದಿಗ್ವಿಜಯ್ ಪಾಟೀಲ್, ಜಯಂತ್ ಗೋಯತ್, ಪಿ ವಿಘ್ನೇಶ್, ಕಿರಣ್ ಚೋರ್ಮಲೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 am, Fri, 8 December 23