AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಪೊಲೀಸ್ ಸಮವಸ್ತ್ರದಲ್ಲಿ ಬೆಂಕಿ ಬೌಲಿಂಗ್…ವಿಡಿಯೋ ವೈರಲ್

ಭಾರತದಲ್ಲಿ ಕ್ರಿಕೆಟ್ ಜ್ವರ ಕಾವೇರುತ್ತಿದೆ. ಆಗಸ್ಟ್ 30 ರಿಂದ ಏಷ್ಯಾಕಪ್ ಶುರುವಾದರೆ, ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಅಂದರೆ ಆಗಸ್ಟ್ 30 ರಿಂದ ನವೆಂಬರ್ 19 ರವರೆಗೆ ಕ್ರಿಕೆಟ್ ಪ್ರಿಯರಿಗೆ ರಸದೌತಣ. ಇನ್ನು ಡಿಸೆಂಬರ್​ನಲ್ಲಿ ಟೀಮ್ ಇಂಡಿಯಾ ಸರಣಿ ಆಡಲಿದೆ. ಹಾಗೆಯೇ ಈ ಬಾರಿಯ ಐಪಿಎಲ್ ಫೆಬ್ರವರಿ ಅಥವಾ ಮಾರ್ಚ್​ನಲ್ಲೇ ಶುರುವಾಗುವ ಸಾಧ್ಯತೆಯಿದೆ.

VIDEO: ಪೊಲೀಸ್ ಸಮವಸ್ತ್ರದಲ್ಲಿ ಬೆಂಕಿ ಬೌಲಿಂಗ್...ವಿಡಿಯೋ ವೈರಲ್
Viral Post
TV9 Web
| Updated By: ಝಾಹಿರ್ ಯೂಸುಫ್|

Updated on: Aug 12, 2023 | 6:32 PM

Share

ಭಾರತದಲ್ಲಿ ಕ್ರಿಕೆಟ್ ಜ್ವರ ಕಾವೇರುತ್ತಿದೆ. ಈ ಕಾವೇರುವಿಕೆಯ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆದರೆ ಅದು ಅಂತಿಂಥ ವಿಡಿಯೋವಲ್ಲ. ಬದಲಾಗಿ ಪೊಲೀಸ್ ಸಮವಸ್ತ್ರದಲ್ಲಿ ಬೆಂಕಿ ಬೌಲಿಂಗ್ ಮಾಡುತ್ತಿರುವ ವಿಡಿಯೋ. ಹೀಗೆ ಕರಾರುವಾಕ್ ಬೌಲಿಂಗ್ ದಾಳಿ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ವಿಡಿಯೋವನ್ನು ಮುಂಬೈ ಇಂಡಿಯನ್ಸ್  ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವುದು ವಿಶೇಷ.

ಈ ವಿಡಿಯೋದಲ್ಲಿ ಯುವ ಪ್ರತಿಭೆಗಳು ನೆಟ್ಸ್​ನಲ್ಲಿ ಅಭ್ಯಾಸ ನಡೆಸುತ್ತಿರುವುದು ಕಾಣಬಹುದು. ಹೀಗೆ ಅಭ್ಯಾಸ ನಡೆಸುತ್ತಿರುವ ಮುಂದಿನ ಪೀಳಿಗೆಯ ಕ್ರಿಕೆಟ್ ಸ್ಟಾರ್​ಗಳಿಗೆ ಚೆಂಡೆದಿರುವುದು ಪೊಲೀಸ್ ಸಮವಸ್ತ್ರಧಾರಿ ವ್ಯಕ್ತಿ ಎಂಬುದೇ ಇಲ್ಲಿ ವಿಶೇಷ. ಅಲ್ಲದೆ ಈ ಬೌಲರ್​ನ ನಿಖರ ದಾಳಿಗೆ ಕ್ಲೀನ್ ಬೌಲ್ಡ್ ಆಗಿರುವುದನ್ನು ಕಾಣಬಹುದು.

ಇದೀಗ ಪೊಲೀಸ್​ನ ಬೆಂಕಿ ಚೆಂಡುಗಳು ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅತ್ತ ಮುಂಬೈ ಇಂಡಿಯನ್ಸ್ ಟ್ವಿಟರ್ ಖಾತೆಯಲ್ಲಿ ಬೆಂಕಿ ವೇಗದ ಬೌಲಿಂಗ್ ಬಗ್ಗೆ ಪ್ರಕರಣ ದಾಖಲಿಸಲು ಬಯಸುತ್ತೇವೆ ಎಂಬಾರ್ಥದಲ್ಲಿ ಇದೇ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಯಾರು ಈ ಬೆಂಕಿ ಬೌಲರ್?

ಕರಾರುವಾಕ್ ಬೌಲಿಂಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ಬೌಲರ್ ರಾಜಸ್ಥಾನ್ ಮೂಲದ ಭಾಟಿ ದುರ್ಜನ್ ಸಿಂಗ್ ಅಲಿಯಾಸ್ ದುರ್ಜನ್ ಹರ್ಸಾನಿ ಎಂದು ತಿಳಿದು ಬಂದಿದೆ. ಇಲ್ಲಿ ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಅವರು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರಬಹುದು ಎಂದು ಊಹಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ.

ಭಾರತದಲ್ಲಿ ಕ್ರಿಕೆಟ್ ಜ್ವರ:

ಭಾರತದಲ್ಲಿ ಕ್ರಿಕೆಟ್ ಜ್ವರ ಕಾವೇರುತ್ತಿದೆ. ಆಗಸ್ಟ್ 30 ರಿಂದ ಏಷ್ಯಾಕಪ್ ಶುರುವಾದರೆ, ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಅಂದರೆ ಮುಂದಿನ ಮೂರು-ನಾಲ್ಕು ತಿಂಗಳು ಕ್ರಿಕೆಟ್ ಪ್ರಿಯರಿಗೆ ರಸದೌತಣ.

ಇದನ್ನೂ ಓದಿ: Team India: ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

ಇದರ ನಡುವೆ ದುರ್ಜನ್ ಹರ್ಸಾನಿ ಅವರ ಬೌಲಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅಲ್ಲದೆ ಪೊಲೀಸ್ ಸಮವಸ್ತ್ರಧಾರಿಯ ಕರಾರುವಾಕ್ ದಾಳಿಗೆ ಅಭಿಮಾನಿಗಳು ಮೆಚ್ಚುಗೆಗಳನ್ನು ಸೂಚಿಸುತ್ತಿದ್ದಾರೆ.