UPW vs GGW, WPL 2023: ಯುಪಿ ವಾರಿಯರ್ಸ್ ತಂಡಕ್ಕೆ ರೋಚಕ ಜಯ

| Updated By: ಝಾಹಿರ್ ಯೂಸುಫ್

Updated on: Mar 05, 2023 | 11:03 PM

UP Warriorz vs Gujarat Giants: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್​ ತಂಡವು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತ್ತು.

UPW vs GGW, WPL 2023: ಯುಪಿ ವಾರಿಯರ್ಸ್ ತಂಡಕ್ಕೆ ರೋಚಕ ಜಯ
UP Warriorz vs Gujarat Giants

UPW vs GGW Live Score, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 3ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ತಂಡವು 3 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್​ ಕಲೆಹಾಕಿತು. 170 ರನ್​ಗಳ ಟಾರ್ಗೆಟ್ ಪಡೆದ ಯುಪಿ ವಾರಿಯರ್ಸ್ 105 ರನ್​ಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ಹಂತದಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ಆಸ್ಟ್ರೇಲಿಯಾ ಆಟಗಾರ್ತಿ ಗ್ರೇಸ್ ಹ್ಯಾರಿಸ್. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗ್ರೇಸ್ ಹ್ಯಾರಿಸ್ ಕೇವಲ 26 ಎಸೆತಗಳಲ್ಲಿ ಅಜೇಯ 56 ರನ್​ ಚಚ್ಚಿದರು. ಅಲ್ಲದೆ 19.5 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿ ರೋಚಕ ಜಯ ತಂದುಕೊಟ್ಟರು. ವಿಶೇಷ ಎಂದರೆ ಕೊನೆಯ 2 ಎಸೆತಗಳಲ್ಲಿ ಯುಪಿ ವಾರಿಯರ್ಸ್​ಗೆ 1 ರನ್​ನ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಗ್ರೇಸ್ ಹ್ಯಾರಿಸ್ ಗೆಲುವಿನ ರುವಾರಿ ಎನಿಸಿಕೊಂಡರು.

ಗುಜರಾತ್ ಜೈಂಟ್ಸ್​- 169/6 (20)

ಯುಪಿ ವಾರಿಯಸರ್ಸ್- 175/7 (19.5)

ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಕಿರಣ್ ನವಗಿರೆ, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್‌ವಾಡ್

ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಸುಷ್ಮಾ ವರ್ಮಾ, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ (ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್.

ಯುಪಿ ವಾರಿಯರ್ಸ್ ತಂಡ: ಅಲಿಸ್ಸಾ ಹೀಲಿ(ನಾಯಕಿ), ಕಿರಣ್ ನವಗಿರೆ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ದೀಪ್ತಿ ಶರ್ಮಾ, ತಹ್ಲಿಯಾ ಮೆಕ್‌ಗ್ರಾತ್, ಪಾರ್ಶವಿ ಚೋಪ್ರಾ, ಶ್ವೇತಾ ಸೆಹ್ರಾವತ್, ಸೊಪ್ಪದಂಡಿ ಯಶಸ್ರಿ, ಸೋಫಿ ಎಕ್ಲೆಸ್ಟೋನ್, ಶಾಬ್ನಿಮ್ ಇಸ್ಮಾಯಿಲ್, ಲಾ ಹರ್ರಿಸ್ವಾಯಿಲ್, ರಾಜೇಶ್ವರಿ ಇಸ್ಮಾಯಿಲ್ , ಅಂಜಲಿ ಸರ್ವಾಣಿ, ಲಕ್ಷ್ಮಿ ಯಾದವ್

ಗುಜರಾತ್ ಜೈಂಟ್ಸ್ ತಂಡ: ಕಿಮ್ ಗಾರ್ತ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಆಶ್ಲೀಗ್ ಗಾರ್ಡನರ್, ಸೋಫಿಯಾ ಡಂಕ್ಲೆ, ಬೆತ್ ಮೂನಿ (ನಾಯಕಿ), ಹರ್ಲೀನ್ ಡಿಯೋಲ್, ಹರ್ಲಿ ಗಾಲಾ, ಅನ್ನಾಬೆಲ್ ಸದರ್‌ಲ್ಯಾಂಡ್, ಸುಷ್ಮಾ ವರ್ಮಾ, ಸ್ನೇಹ ರಾಣಾ, ಜಾರ್ಜಿಯಾ ವೇರ್‌ಹ್ಯಾಮ್, ಮಾನ್ಸಿ ಜೋಶಿ, ಮೋನಿಕಾ , ಅಶ್ವನಿ ಕುಮಾರಿ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ, ತನುಜಾ ಕನ್ವರ್

 

LIVE NEWS & UPDATES

The liveblog has ended.
  • 05 Mar 2023 10:57 PM (IST)

    UPW vs GGW Live Score, WPL 2023: ಯುಪಿ ವಾರಿಯರ್ಸ್ ತಂಡಕ್ಕೆ ರೋಚಕ ಜಯ

    GGT 169/6 (20)

    UPW 175/7 (19.5)

     3 ವಿಕೆಟ್​ಗಳ ರೋಚಕ ಜಯ ಸಾಧಿಸಿದ ಯುಪಿ ವಾರಿಯರ್ಸ್

    ಕೇವಲ 26 ಎಸೆತಗಳಲ್ಲಿ ಅಜೇಯ 59 ರನ್​ ಬಾರಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಗ್ರೇಸ್ ಹ್ಯಾರಿಸ್
    2 ಎಸೆತಗಳಲ್ಲಿ 1 ರನ್ ಬೇಕಿದ್ದಾಗ ಭರ್ಜರಿ ಸಿಕ್ಸ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟ ಗ್ರೇಸ್ ಹ್ಯಾರಿಸ್
  • 05 Mar 2023 10:45 PM (IST)

    UPW vs GGW Live Score, WPL 2023: ಭರ್ಜರಿ ಸಿಕ್ಸ್

    GGT 169/6 (20)

    UPW 157/7 (19.1)

     

    ಸದರ್​ಲ್ಯಾಂಡ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಗ್ರೇಸ್ ಹ್ಯಾರಿಸ್
    5 ಎಸೆತಗಳಲ್ಲಿ 13 ರನ್​ಗಳ ಅವಶ್ಯಕತೆ
  • 05 Mar 2023 10:43 PM (IST)

    UPW vs GGW Live Score, WPL 2023: ಕೊನೆಯ ಓವರ್ ಬಾಕಿ

    GGT 169/6 (20)

    UPW 151/7 (19)

      

    ಯುಪಿ ವಾರಿಯರ್ಸ್​ಗೆ 6 ಎಸೆತಗಳಲ್ಲಿ 19 ರನ್​ಗಳ ಅವಶ್ಯಕತೆ
  • 05 Mar 2023 10:40 PM (IST)

    UPW vs GGW Live Score, WPL 2023: ಒಂದೇ ಓವರ್​ನಲ್ಲಿ 20 ರನ್

    ಕಿಮ್ ಗಾರ್ಥ್ ಎಸೆದ 18ನೇ ಓವರ್​ನಲ್ಲಿ ಹ್ಯಾಟ್ರಿಕ್ ಫೋರ್​ನೊಂದಿಗೆ 20 ರನ್ ಬಾರಿಸಿದ ಗ್ರೇಸ್ ಹ್ಯಾರಿಸ್

     

    UPW 137/7 (18)

      

  • 05 Mar 2023 10:34 PM (IST)

    UPW vs GGW Live Score, WPL 2023: ಭರ್ಜರಿ ಸಿಕ್ಸ್

    ತನುಜಾ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಸೋಫಿಯಾ

     

    GGT 169/6 (20)

    UPW 117/7 (17)

      

  • 05 Mar 2023 10:28 PM (IST)

    UPW vs GGW Live Score, WPL 2023: 7ನೇ ವಿಕೆಟ್ ಪತನ

    ಸದರ್​ಲ್ಯಾಂಡ್ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ಹೊರನಡೆದ ದೇವಿಕಾ ವೈದ್ಯ (4)

     

    UPW 105/7 (15.4)

      

  • 05 Mar 2023 10:26 PM (IST)

    UPW vs GGW Live Score, WPL 2023: ಶತಕ ಪೂರೈಸಿದ ಯುಪಿ

    UPW 105/6 (15.3)

    ಕ್ರೀಸ್​ನಲ್ಲಿ ದೇವಿಕಾ ವೈದ್ಯ-ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್

     

  • 05 Mar 2023 10:17 PM (IST)

    UPW vs GGW Live Score, WPL 2023: 6ನೇ ವಿಕೆಟ್ ಪತನ

    ಕಿಮ್ ಗಾರ್ಥ್ ಎಸೆತದಲ್ಲಿ ಸಿಮ್ರಾನ್ ಶೇಖ್ (0) ಕ್ಲೀನ್ ಬೌಲ್ಡ್

    2.5 ಓವರ್​ನಲ್ಲಿ 16 ರನ್​ ನೀಡಿ 5 ವಿಕೆಟ್ ಕಬಳಿಸಿದ ಕಿಮ್ ಗಾರ್ಥ್

     

    UPW 88/6 (12.5)

     

     

  • 05 Mar 2023 10:15 PM (IST)

    UPW vs GGW Live Score, WPL 2023: 5ನೇ ವಿಕೆಟ್ ಪತನ

    ಕಿಮ್ ಗಾರ್ಥ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಕಿರಣ್ ನವಗಿರೆ (53)

     

    UPW 88/5 (12.4)

      

  • 05 Mar 2023 10:11 PM (IST)

    UPW vs GGW Live Score, WPL 2023: ಯುಪಿ ವಾರಿಯರ್ಸ್​ 4ನೇ ವಿಕೆಟ್ ಪತನ

    ಮಾನ್ಸಿ ಎಸೆತದಲ್ಲಿ ದೀಪ್ತಿ ಶರ್ಮಾ (11) ಕ್ಲೀನ್ ಬೌಲ್ಡ್​

     

    UPW 86/4 (12)

     

  • 05 Mar 2023 10:09 PM (IST)

    UPW vs GGW Live Score, WPL 2023: ಅರ್ಧಶತಕ ಪೂರೈಸಿದ ನವಗಿರೆ

    40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕಿರಣ್ ನವಗಿರೆ

     

    GGT 169/6 (20)

    UPW 84/3 (11.3)

      

  • 05 Mar 2023 10:03 PM (IST)

    UPW vs GGW Live Score, WPL 2023: 10 ಓವರ್ ಮುಕ್ತಾಯ

    GGT 169/6 (20)

    UPW 70/3 (10)

      

    ಯುಪಿ ವಾರಿಯರ್ಸ್​ಗೆ 60 ಎಸೆತಗಳಲ್ಲಿ 100 ರನ್​ಗಳ ಗುರಿ
  • 05 Mar 2023 09:55 PM (IST)

    UPW vs GGW Live Score, WPL 2023: ಅರ್ಧಶತಕ ಪೂರೈಸಿದ ಯುಪಿ

    ಸ್ನೇಹ್ ರಾಣಾ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕಿರಣ್ ನವಗಿರೆ

     

    GGT 169/6 (20)

    UPW 59/3 (8.5)

      

  • 05 Mar 2023 09:48 PM (IST)

    UPW vs GGW Live Score, WPL 2023: 7 ಓವರ್ ಮುಕ್ತಾಯ

    GGT 169/6 (20)

    UPW 44/3 (7)

     ಕ್ರೀಸ್​ನಲ್ಲಿ ದೀಪ್ತಿ ಶರ್ಮಾ ಹಾಗೂ ಕಿರಣ್ ನವಗಿರೆ ಬ್ಯಾಟಿಂಗ್

  • 05 Mar 2023 09:43 PM (IST)

    UPW vs GGW Live Score, WPL 2023: ಭರ್ಜರಿ ಸಿಕ್ಸ್

    ತನುಜಾ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕಿರಣ್ ನವಗಿರೆ

     

    UPW 35/3 (6)

      

      

  • 05 Mar 2023 09:36 PM (IST)

    UPW vs GGW Live Score, WPL 2023: ಆರಂಭಿಕ ಆಘಾತ

    ಮೊದಲ 4 ಓವರ್​ನಲ್ಲೇ ಮೂವರು ಔಟ್

    ಅಲಿಸ್ಸಾ ಹೀಲಿ (7)

    ಶ್ವೇತಾ ಸೆಹ್ರಾವತ್ (5)

    ತಾಲಿಯಾ ಮೆಗ್ರಾಥ್ (0)…ಔಟ್

    UPW 25/3 (4)

      

     

  • 05 Mar 2023 09:18 PM (IST)

    UPW vs GGW Live Score, WPL 2023: ಮೊದಲ ಓವರ್ ಮುಕ್ತಾಯ

    GGT 169/6 (20)

    UPW 7/0 (1)

     ಮೊದಲ ಓವರ್​ನಲ್ಲಿ 7 ರನ್ ಕಲೆಹಾಕಿದ ಯುಪಿ ವಾರಿಯರ್ಸ್

    ಕ್ರೀಸ್​ನಲ್ಲಿ ಅಲಿಸ್ಸಾ ಹೀಲಿ ಹಾಗೂ ಶ್ವೇತಾ ಸೆಹ್ರಾವತ್ ಬ್ಯಾಟಿಂಗ್
  • 05 Mar 2023 08:59 PM (IST)

    UPW vs GGW Live Score, WPL 2023: ಗುಜರಾತ್ ಜೈಂಟ್ಸ್ ಇನಿಂಗ್ಸ್ ಅಂತ್ಯ

    GGT 169/6 (20)

      

    ಯುಪಿ ವಾರಿಯರ್ಸ್ ತಂಡಕ್ಕೆ 170 ರನ್​ಗಳ ಟಾರ್ಗೆಟ್ ನೀಡಿದ ಗುಜರಾತ್ ಜೈಂಟ್ಸ್

  • 05 Mar 2023 08:56 PM (IST)

    UPW vs GGW Live Score, WPL 2023: 19 ಓವರ್ ಮುಕ್ತಾಯ

    GGT 160/6 (19)

      

    ಕ್ರೀಸ್​ನಲ್ಲಿ ಸ್ನೇಹ್ ರಾಣಾ-ಹೇಮಲತಾ ಬ್ಯಾಟಿಂಗ್

  • 05 Mar 2023 08:53 PM (IST)

    UPW vs GGW Live Score, WPL 2023: ಭರ್ಜರಿ ಸಿಕ್ಸ್

    ದೀಪ್ತಿ ಶರ್ಮಾ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹೇಮಲತಾ

     

    GGT 154/6 (18.2)

      

  • 05 Mar 2023 08:52 PM (IST)

    UPW vs GGW Live Score, WPL 2023: 6ನೇ ವಿಕೆಟ್ ಪತನ

    ಅಂಜಲಿ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಹರ್ಲೀನ್ ಡಿಯೋಲ್…ಕೇವಲ 32 ಎಸೆತಗಳಲ್ಲಿ 46 ರನ್​ ಬಾರಿಸಿದ್ದ ಹರ್ಲೀನ್.

     

    GGT 148/6 (18)

      

  • 05 Mar 2023 08:46 PM (IST)

    UPW vs GGW Live Score, WPL 2023: ಬ್ಯಾಕ್ ಟು ಬ್ಯಾಕ್ ಫೋರ್

    ದೇವಿಕಾ ವೈದ್ಯ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ನಾಲ್ಕು ಫೋರ್ ಬಾರಿಸಿದ ಹರ್ಲೀನ್ ಡಿಯೋಲ್

     

    GGT 139/5 (16.4)

      

  • 05 Mar 2023 08:39 PM (IST)

    UPW vs GGW Live Score, WPL 2023: 15 ಓವರ್ ಮುಕ್ತಾಯ

    GGT 116/4 (15)

      

    ಗುಜರಾತ್ ಜೈಂಟ್ಸ್ ತಂಡಕ್ಕೆ ಹರ್ಲೀನ್ ಡಿಯೋಲ್-ಗಾರ್ಡ್ನರ್ ಆಸರೆ

     

     

  • 05 Mar 2023 08:21 PM (IST)

    UPW vs GGW Live Score, WPL 2023: 4ನೇ ವಿಕೆಟ್ ಪತನ

    ತಾಹಿಲಾ ಮೆಗ್ರಾಥ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಸುಷ್ಮಾ ವರ್ಮಾ (9)

     

    GGT 78/4 (11.1)

      

  • 05 Mar 2023 08:07 PM (IST)

    UPW vs GGW Live Score, WPL 2023: 9 ಓವರ್ ಮುಕ್ತಾಯ

    GGT 58/3 (9)

      

    ಕ್ರೀಸ್​ನಲ್ಲಿ ಹರ್ಲೀನ್ ಡಿಯೋಲ್ ಹಾಗೂ ಸುಷ್ಮಾ ವರ್ಮಾ ಬ್ಯಾಟಿಂಗ್

     

  • 05 Mar 2023 08:02 PM (IST)

    UPW vs GGW Live Score, WPL 2023: 3ನೇ ವಿಕೆಟ್ ಪತನ

    ಎಕ್ಲೆಸ್ಟೋನ್ ಎಸೆತದಲ್ಲಿ ಸದರ್​ಲ್ಯಾಂಡ್ (8) ಔಟ್

     

    GGT 50/3 (7.1)

     

    3 ವಿಕೆಟ್​ ಕಳೆದುಕೊಂಡ ಗುಜರಾತ್ ಜೈಂಟ್ಸ್

      

  • 05 Mar 2023 07:51 PM (IST)

    ಗುಜರಾತ್ ಜೈಂಟ್ಸ್ 2 ವಿಕೆಟ್ ಪತನ

    GGT 38/2 (4.3)

      24 ರನ್​ಗಳಿಸಿ ಔಟಾದ ಮೇಘನಾ

    ದೀಪ್ತಿ ಶರ್ಮಾ ಎಸೆತದಲ್ಲಿ ಸೋಫಿಯಾ ಬೌಲ್ಡ್

     

     

  • 05 Mar 2023 07:34 PM (IST)

    UPW vs GGW Live Score, WPL 2023: ಮೊದಲ ಓವರ್ ಮುಕ್ತಾಯ

    GGT 3/0 (1)

      ಕ್ರೀಸ್​ನಲ್ಲಿ ಮೇಘನಾ-ಸೋಫಿಯಾ ಬ್ಯಾಟಿಂಗ್

  • 05 Mar 2023 07:33 PM (IST)

    UPW vs GGW Live Score, WPL 2023: ಉಭಯ ತಂಡಗಳ ಪ್ಲೇಯಿಂಗ್ 11

    ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಕಿರಣ್ ನವಗಿರೆ, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್‌ವಾಡ್

    ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಸುಷ್ಮಾ ವರ್ಮಾ, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ (ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್

  • 05 Mar 2023 07:06 PM (IST)

    UPW vs GGW Live Score, WPL 2023: ಟಾಸ್ ಗೆದ್ದ ಗುಜರಾತ್ ಜೈಂಟ್ಸ್

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಜೈಂಟ್ಸ್ ತಂಡದ ಹಂಗಾಮಿ ನಾಯಕಿ ಸ್ನೇಹ್ ರಾಣಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

    ಮೊದಲ ಪಂದ್ಯದ ವೇಳೆ ಪಾದದ ನೋವಿಗೆ ಒಳಗಾಗಿದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಬೆತ್ ಮೂನಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

Published On - 7:03 pm, Sun, 5 March 23

Follow us on