ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಮಿಂಚಿದ್ದು ಬಿಟ್ಟರೆ ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ (KL Rahul) ಇದುವರೆಗೂ ತಂಡದ ಪರ ಹೇಳಿಕೊಳ್ಳುವಂತಹ ಒಂದೇ ಒಂದು ಇನ್ನಿಂಗ್ಸ್ ಆಡಿಲ್ಲ. ಈ ವರ್ಷ ಟೀಂ ಇಂಡಿಯಾ ಪರ ಎಲ್ಲಾ ಐಸಿಸಿ ಈವೆಂಟ್ಗಳನ್ನು ಆಡಿರುವ ರಾಹುಲ್ ಕೇವಲ ನೆಪ ಮಾತ್ರಕ್ಕೆ ತಂಡದಲ್ಲಿದ್ದಾರೆ ಎಂಬುದು ಟೀಂ ಇಂಡಿಯಾ (Team India) ಅಭಿಮಾನಿಗಳ ಅಭಿಪ್ರಾಯವಾಗಿದೆ. ಅಲ್ಲದೆ ಸತತ ವೈಫಲ್ಯಗಳ ನಡುವೆಯೂ ರಾಹುಲ್ಗೆ ತಂಡದಲ್ಲಿ ಅವಕಾಶ ಸಿಗುತ್ತಿರುವುದನ್ನೂ ಕೂಡ ಪ್ರಶ್ನೆ ಮಾಡಲಾಗುತ್ತಿದೆ. ಈ ಹಿಂದೆ ನಡೆದ ಏಷ್ಯಾಕಪ್ನಲ್ಲೂ (Asia Cup) ರಾಹುಲ್ ಬ್ಯಾಟ್ ಸದ್ದು ಮಾಡಲಿಲ್ಲ. ಬಳಿಕ ಟಿ20 ವಿಶ್ವಕಪ್ನಲ್ಲೂ ರಾಹುಲ್ ಅಟ್ಟರ್ ಫ್ಲಾಪ್ ಆಗಿದ್ದರು. ಬಳಿಕ ವಿಶ್ರಾಂತಿಗೆಂದು ತೆರಳಿದ್ದ ರಾಹುಲ್ ಪ್ರಸ್ತುತ ಬಾಂಗ್ಲಾದೇಶ (India Vs Bangladesh) ಸರಣಿಯಲ್ಲೂ ರನ್ಗಳಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ರಾಹುಲ್ರನ್ನು ತಂಡದಿಂದ ಕಿತ್ತೊಗೆದು ಫಾರ್ಮ್ನಲ್ಲಿರುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬುದು ಕ್ರಿಕೆಟಿಗ ಪಂಡಿತರ ವಾದವಾಗಿದೆ. ಹಾಗೆಯೇ ಟೀಂ ಇಂಡಿಯಾ ಅಭಿಮಾನಿಗಳು ಕೂಡ ಇದೇ ರೀತಿಯ ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಗಾಲೇ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಇದೀಗ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ಟೆಸ್ಟ್ನಲ್ಲಿ ಕೊಂಚ ಸಂಕಷ್ಟಕ್ಕೆ ಸಿಲುಕಿದೆ. ಸ್ವತಃ ತಂಡದ ನಾಯಕನಾಗಿರುವ ರಾಹುಲ್ ಕೂಡ ಇಡೀ ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದು, ಈ ಪಂದ್ಯದಲ್ಲೂ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ. ಗೆಲ್ಲಲೇಬೇಕಾದ ಎರಡನೇ ಟೆಸ್ಟ್ನ ಎರಡೂ ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಬ್ಯಾಟ್‌ನಿಂದ ಕೇವಲ 12 ರನ್‌ಗಳು ಹೊರಬಿದ್ದವು. ಮೊದಲ ಇನ್ನಿಂಗ್ಸ್‌ನಲ್ಲಿ 10 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಎರಡು ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ದಾರೆ.
KL Rahul- Athiya Shetty Wedding: ಕೆಎಲ್ ರಾಹುಲ್ -ಅಥಿಯಾ ಶೆಟ್ಟಿ ಮದುವೆ ಡೇಟ್ ಫಿಕ್ಸ್!
ಈ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್, ಈ ಸರಣಿಯಲ್ಲಿ ತಮ್ಮ ತಂಡ ಆಕ್ರಮಣಕಾರಿ ಕ್ರಿಕೆಟ್ ಆಡಲು ಪ್ರಯತ್ನಿಸಲಿದೆ ಎಂದಿದ್ದರು. ಆದರೆ ಸ್ವತಃ ರಾಹುಲ್ ಆಕ್ರಮಣಕಾರಿ ಕ್ರಿಕೆಟ್ ಆಡುವುದಿರಲಿ, ತನ್ನ ಬ್ಯಾಟ್ಗೆ ಹಿಡಿದಿರುವ ರನ್ ಬರವನ್ನು ಕೊನೆಗೊಳಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನೆಟ್ಟಿಗರು ರಾಹುಲ್ರನ್ನು ತಮ್ಮದೆ ಶೈಲಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
Yep…you can ignore KL Rahul and Kohli…rest should play well…these two will play in Dream11 and other commercial endorsements
— gsatishkumar (@gstishkumar) December 24, 2022
KL Rahul Jan bhuj kar khel nahi raha hai…#Leadership lesson.
He wants his team member to get all the limelight.#INDvBAN #BharatRatna— Puntastic (@Puntastic101) December 24, 2022
Just sack the useless ever coach Rahul and the most useless captain kl rahul. Team will be fine then. We need passionate players to play and not players who go into shell for saving their careers.
— CA Ramachandran (@jayaram8786) December 24, 2022
Last 6 innings of KL Rahul after a shameful and miserable world cup!
ODI: 14, 8
Test: 22,23,10 and 9One of the worst ever…
— Twinkle Dewangan (sawant❤️) (@ImTwinkle7) December 24, 2022
ಬಾಂಗ್ಲಾದೇಶ ಪ್ರವಾಸದಲ್ಲಿ ರಾಹುಲ್ ಎರಡು ಟೆಸ್ಟ್‌ಗಳಲ್ಲಿ ಒಟ್ಟು 57 ರನ್ ಗಳಿಸಿದರು. ಇದರಲ್ಲಿ ಚಟ್ಟೋಗ್ರಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 22 ಮತ್ತು 23 ರನ್ ಗಳಿಸಲಷ್ಟೇ ಶಕ್ತರಾದರು. ಅಲ್ಲದೆ ಕಳೆದ ಏಳು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಅವರ ಪ್ರದರ್ಶನವನ್ನು ನೋಡಿದರೆ, ಅವರ ಬ್ಯಾಟ್‌ನಿಂದ ಒಂದೇ ಒಂದು ಅರ್ಧ ಶತಕ ಕೂಡ ಹೊರಹೊಮ್ಮಿಲ್ಲ. ಬಾಂಗ್ಲಾದೇಶಕ್ಕೂ ಮುನ್ನ ಟೀಂ ಇಂಡಿಯಾ ಈ ವರ್ಷದ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಆಡಿದ್ದು, ಅದರಲ್ಲಿ ರಾಹುಲ್ 10, 12 ಮತ್ತು ಎಂಟು ರನ್ ಗಳಿಸಿದ್ದರು.
ಕಳೆದ ತಿಂಗಳು ನಡೆದ ಟಿ20 ವಿಶ್ವಕಪ್ನಲ್ಲೂ ರಾಹುಲ್ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೇವಲ 4 ರನ್ ಗಳಿಸಿದ್ದ ರಾಹುಲ್, ನೆದರ್ಲೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತಲಾ 9 ರನ್ ಗಳಿಸಿದ್ದರು. ಇದರ ನಂತರ ಬಾಂಗ್ಲಾದೇಶ ವಿರುದ್ಧ 50 ಮತ್ತು ಜಿಂಬಾಬ್ವೆ ವಿರುದ್ಧ 51 ರನ್ ಬಾರಿಸಿದ್ದನ್ನು ಬಿಟ್ಟರೆ, ಪ್ರಮುಖ ಪಂದ್ಯಗಳಲ್ಲಿ ಕೈಕೊಡುವ ತಮ್ಮ ಚಾಳಿಯನ್ನು ಮುಂದುವರೆಸಿದ್ದ ರಾಹುಲ್ ಅಡಿಲೇಡ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 5 ಎಸೆತಗಳಲ್ಲಿ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ ಈ ಸರಣಿಯಲ್ಲಿ ಆಡುತ್ತಿಲ್ಲ. ಹೀಗಾಗಿ ರಾಹುಲ್ಗೆ ತಂಡದ ನಾಯಕತ್ವ ನೀಡಲಾಗಿದೆ. ಸರಣಿಗೂ ಮುನ್ನ ತಮ್ಮ ತಂಡ ಆಕ್ರಮಣಕಾರಿ ಕ್ರಿಕೆಟ್ ಆಡಲಿದೆ ಎಂದು ರಾಹುಲ್ ಹೇಳಿದ್ದರು.ಆದರೆ ಇದುವರೆಗೂ ಟೀಂ ಇಂಡಿಯಾದಿಂದ ಯಾವುದೇ ವಿಶೇಷ ಆಕ್ರಮಣಶೀಲತೆ ಕಂಡುಬಂದಿಲ್ಲ. ಟೀಂ ಇಂಡಿಯಾ ಆಕ್ರಮಣಕಾರಿ ಆಟವಾಡಲು ಪ್ರಯತ್ನಿಸಿದಾಗಲೆಲ್ಲಾ ಸೋಲು ಅನುಭವಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Sat, 24 December 22