
ಭಾರತ ಅಂಡರ್ 19 ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಇಂಗ್ಲೆಂಡ್ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸುದ್ದಿಯಾಗಿದ್ದ ವೈಭವ್ ಸೂರ್ಯವಂಶಿ ಮೈದಾನದಲ್ಲಿ ಅದ್ಭುತಗಳನ್ನು ಮಾಡುತ್ತಿರುವುದು ಮಾತ್ರವಲ್ಲದೆ, ತಮ್ಮ ಪ್ರತಿಭೆಯ ಮೂಲಕ ಮೈದಾನದ ಹೊರಗೆಯೂ ಸುದ್ದಿಯಾಗುತ್ತಿದ್ದಾರೆ. ಐಪಿಎಲ್ಗೂ ಮುನ್ನ ನಡೆದಿದ್ದ ಮೆಗಾ ಹರಾಜಿನಲ್ಲಿ 1 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿ ದಾಖಲೆ ಬರೆದಿದ್ದ ವೈಭವ್ ಮೇಲೆ ಇದೀಗ ಹಣದ ಮಳೆಯಾಗುತ್ತಿದೆ. ಆ ಪ್ರಕಾರ ಕಳೆದ ಒಂದು ವರ್ಷದಲ್ಲಿ ವೈಭವ್ ಅವರ ಆದಾಯದಲ್ಲಿ 40 ಪಟ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
ವೈಭವ್ ಸೂರ್ಯವಂಶಿ ಅವರ ನಿವ್ವಳ ಮೌಲ್ಯ 2024 ರಲ್ಲಿ 5 ಲಕ್ಷ ರೂ.ಗಳಾಗಿದ್ದು, ಇದು 2025 ರ ಐಪಿಎಲ್ ನಂತರ ಸುಮಾರು 2 ಕೋಟಿ ರೂ.ಗಳಿಗೆ ತಲುಪಿದೆ. ಇದರರ್ಥ ವೈಭವ್ ಸೂರ್ಯವಂಶಿ ಅವರ ಆದಾಯ ಒಂದು ವರ್ಷದಲ್ಲಿ 40 ಪಟ್ಟು ಹೆಚ್ಚಾಗಿದೆ. ವೈಭವ್ ಪಂದ್ಯ ಶುಲ್ಕ ಮತ್ತು ಜಾಹೀರಾತುಗಳಿಂದಲೂ ಹಣ ಸಂಪಾಧಿಸುತ್ತಿದ್ದಾರೆ. ಅವರ ಪ್ರಮುಖ ಆದಾಯದ ಮೂಲಗಳು ಐಪಿಎಲ್, ದೇಶೀಯ ಪಂದ್ಯ ಶುಲ್ಕ ಮತ್ತು ಜಾಹೀರಾತುಗಳಾಗಿದೆ. ಪ್ರಸ್ತುತ ಬಿಹಾರ ಅಂಡರ್ -19 ತಂಡದ ಪರ ರಣಜಿ ಟ್ರೋಫಿ ಮತ್ತು ವಿನೂ ಮಂಕಡ್ ಟ್ರೋಫಿಯಲ್ಲಿ ಆಡಿರುವ ವೈಭವ್ 35 ಎಸೆತಗಳಲ್ಲಿ ಶತಕ ಬಾರಿಸಿದಕ್ಕಾಗಿ ಬಿಹಾರದ ಮುಖ್ಯಮಂತ್ರಿ ರಾಜ್ಯ ಸರ್ಕಾರದ ಪರವಾಗಿ 10 ಲಕ್ಷ ರೂ.ಗಳ ಬಹುಮಾನವನ್ನು ಸಹ ಘೋಷಿಸಿದ್ದರು.
‘ಪೃಥ್ವಿ ಶಾ ರೀತಿ ಹಾಳಾಗಬೇಡಿ’; ವೈಭವ್ ಸೂರ್ಯವಂಶಿಗೆ ಎಚ್ಚರಿಕೆ
ವೈಭವ್ ಸೂರ್ಯವಂಶಿ ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ 7 ಪಂದ್ಯಗಳಲ್ಲಿ 36 ಸರಾಸರಿಯಲ್ಲಿ 252 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಅರ್ಧಶತಕವೂ ಸೇರಿತ್ತು. 206.50 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದ ವೈಭವ್ ಅವರ ಅತ್ಯುತ್ತಮ ಸ್ಕೋರ್ 101 ರನ್ ಆಗಿದೆ. ಐಪಿಎಲ್ 2025 ರಲ್ಲಿ ಅವರು ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿದರೆ, ರಾಜಸ್ಥಾನ್ ರಾಯಲ್ಸ್ ತಂಡವು ಖಂಡಿತವಾಗಿಯೂ ಅವರನ್ನು ಐಪಿಎಲ್ 2026ರಲ್ಲಿ ತಂಡದಲ್ಲಿ ಉಳಿಸಿಕೊಳ್ಳುವುದು ಖಚಿತ ಎನ್ನಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:47 pm, Thu, 17 July 25