ಜೀವರಕ್ಷಕ ವ್ಯವಸ್ಥೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್​ ಆಟಗಾರ ಕ್ರಿಸ್​ ಕೈರ್ನ್ಸ್​

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 10, 2021 | 5:20 PM

ಭ್ರಷ್ಟಾಚಾರದ ಆರೋಪಗಳು ಆರ್ಥಿಕವಾಗಿಯೂ ಕೈರ್ನ್ಸ್​ ಅವರನ್ನು ನುಜ್ಜುಗುಜ್ಜಾಗಿಸಿತ್ತು. ಒಂದು ಹಂತದಲ್ಲಿ ಅವರು ಆಕ್​ಲೆಂಡ್​ ಕೌನ್ಸಿಲ್​ನಲ್ಲಿ ಟ್ರಕ್​ ಚಾಲಕರಾಗಿ ಮತ್ತು ಬಸ್​ ತಂಗುದಾಣಗಳ ಸ್ವಚ್ಛತೆ ಮಾಡುವ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಜೀವರಕ್ಷಕ ವ್ಯವಸ್ಥೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್​ ಆಟಗಾರ ಕ್ರಿಸ್​ ಕೈರ್ನ್ಸ್​
ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕ್ರಿಸ್ ಕೈರ್ನ್ಸ್​
Follow us on

ಸಿಡ್ನಿ: ನ್ಯೂಜೆಲೆಂಡ್​ನ ಮಾಜಿ ಆಲ್​ರೌಂಡರ್​ ಕ್ರಿಸ್ ಕೈರ್ನ್ಸ್​ ಆಸ್ಟ್ರೇಲಿಯಾದ ಕೆನ್​ಬೆರಾ ಆಸ್ಪತ್ರೆಯಲ್ಲಿ ಜೀವರಕ್ಷಕ ವ್ಯವಸ್ಥೆಯಲ್ಲಿ ದಿನದೂಡುತ್ತಿದ್ದಾರೆ. ಅನಾರೋಗ್ಯದಿಂದಾಗಿ ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದ ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಶೀಘ್ರ ಸಿಡ್ನಿಯ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ನ್ಯೂಜಿಲೆಂಡ್​ ಮಾಧ್ಯಮಗಳು ಹೇಳಿವೆ. ಕೈರ್ನ್ಸ್​ ಅವರ ರಕ್ತನಾಳದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮುಖ್ಯಅಪಧಮನಿಯಲ್ಲಿ ರಕ್ತಸ್ರಾವವಾಗುತ್ತಿದೆ.

ಹಲವು ಶಸ್ತ್ರಚಿಕಿತ್ಸೆಗಳ ನಂತರವೂ ಕೈರ್ನ್ಸ್​ ಅವರ ದೇಹವು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ಕಾಲಮಾನದ ಅತ್ಯುತ್ತಮ ಕ್ರಿಕೆಟ್ ಆಟಗಾರ ಎನಿಸಿಕೊಂಡಿದ್ದ ಕೈರ್ನ್ಸ್​ 62 ಟೆಸ್ಟ್​, ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. 1989ರಿಂದ 2006ರ ಅವಧಿಯಲ್ಲಿ ಅವರು ಕ್ರಿಕೆಟ್ ಆಡುತ್ತಿದ್ದರು. ಕೈರ್ನ್ಸ್​ ಅವರ ತಂದೆ ಲ್ಯಾನ್ಸ್​ ಕೈರ್ನ್ಸ್​ ಸಹ ನ್ಯೂಜಿಲೆಂಡ್​ ತಂಡದ ಪರವಾಗಿ ಕ್ರಿಕೆಟ್ ಆಡುತ್ತಿದ್ದರು.

51 ವರ್ಷದ ಕೈರ್ನ್ಸ್​ ಮೇಲೆ ಮ್ಯಾಚ್ ಫಿಕ್ಸಿಂಗ್ ಹಗರಣದ ಆರೋಪಗಳು ಕೇಳಿಬಂದಿದ್ದವು. 2008ರಲ್ಲಿ ಇಂಡಿಯನ್ ಕ್ರಿಕೆಟ್​ ಲೀಗ್​ ಸಹಯೋಗದಲ್ಲಿ ಆಡುತ್ತಿದ್ದಾಗ ಹಲವು ಆರೋಪಗಳನ್ನು ಎದುರಿಸಿದ್ದರು. ತಾವು ನಿರಪರಾಧಿ ಎಂದು ಸಾಬೀತುಪಡಿಸಲು ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ವಿರುದ್ಧ 2012ರಲ್ಲಿ ಲಂಡನ್​ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆಯನ್ನು ಕೈರ್ನ್ಸ್​ ಜಯಿಸಿದ್ದರು.

ನಂತರದ ದಿನಗಳಲ್ಲಿ ಸಹ ಕ್ರಿಕೆಟ್ ಆಟಗಾರರಾದ ಲ್ಯೂ ವಿನ್​ಸೆಂಟ್ ಮತ್ತು ಬ್ರೆನ್​ಡನ್ ಮೆಕ್​ಲುಹನ್ ಅವರಿಂದಲೂ ಕೈರ್ನ್ಸ್​ ಮೋಸದ ಆಟದ ಆರೋಪ ಎದುರಿಸಬೇಕಾಯಿತು. 2015ರ ಲಂಡನ್ ನ್ಯಾಯಾಲಯದ ವಿಚಾರಣೆಯಲ್ಲಿ ಸುಳ್ಳು ಸಾಕ್ಷ್ಯ ಮತ್ತು ನ್ಯಾಯಾಂಗದ ಹಾದಿತಪ್ಪಿಸಿದ ಆರೋಪ ದೃಢಪಟ್ಟಿತ್ತು.

ಭ್ರಷ್ಟಾಚಾರದ ಆರೋಪಗಳು ಆರ್ಥಿಕವಾಗಿಯೂ ಕೈರ್ನ್ಸ್​ ಅವರನ್ನು ನುಜ್ಜುಗುಜ್ಜಾಗಿಸಿತ್ತು. ಒಂದು ಹಂತದಲ್ಲಿ ಅವರು ಆಕ್​ಲೆಂಡ್​ ಕೌನ್ಸಿಲ್​ನಲ್ಲಿ ಟ್ರಕ್​ ಚಾಲಕರಾಗಿ ಮತ್ತು ಬಸ್​ ತಂಗುದಾಣಗಳ ಸ್ವಚ್ಛತೆ ಮಾಡುವ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕಾನೂನು ಹೋರಾಟಗಳನ್ನು ನಿರ್ವಹಿಸಲು ಅಪಾರ ಪ್ರಮಾಣ ಹಣ ವ್ಯಯಿಸಬೇಕಾಯಿತು.

(Veteran New Zealand Cricketer Chris Cairns on life support in Australia)

ಇದನ್ನೂ ಓದಿ: T20 World Cup: ಟಿ-20 ವಿಶ್ವಕಪ್​ಗೆ ನ್ಯೂಜಿಲೆಂಡ್ ತಂಡ ಪ್ರಕಟ

ಇದನ್ನೂ ಓದಿ: Olympics: ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಸೇರ್ಪಡೆ ಸಾಧ್ಯತೆ: ನಾವು ರೆಡಿ ಎಂದ ಟೀಮ್ ಇಂಡಿಯಾ