India vs Sri Lanka 2nd Odi: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಉತ್ತಮ ಪ್ರದರ್ಶನ ನೀಡಿದೆ. ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಟೀಮ್ ಇಂಡಿಯಾಗೆ ಮೊಹಮ್ಮದ್ ಸಿರಾಜ್ ಆರಂಭದಲ್ಲೇ ಯಶಸ್ಸು ತಂದುಕೊಟ್ಟಿದ್ದರು. 6ನೇ ಓವರ್ನಲ್ಲಿ ಅವಿಷ್ಕ ಫರ್ನಾಂಡೊರನ್ನು ಕ್ಲೀನ್ ಬೌಲ್ಡ್ ಮಾಡಿದ ಸಿರಾಜ್ ಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ನುವಾನಿಡು ಫರ್ನಾಂಡೊ ಹಾಗೂ ಕುಸಾಲ್ ಮೆಂಡಿಸ್ ಅರ್ಧಶತಕದ ಜೊತೆಯಾಟವಾಡಿದರು. ಪರಿಣಾಮ ಟೀಮ್ ಇಂಡಿಯಾ ಬೌಲರ್ಗಳು ವಿಕೆಟ್ ಪಡೆಯಲು ಹರಸಾಹಸಪಡಬೇಕಾಯಿತು.
ಇತ್ತ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಫೀಲ್ಡಿಂಗ್ ಮಾಡಿದ್ದ ಟೀಮ್ ಇಂಡಿಯಾ ಆಟಗಾರರು ಆರಂಭದಲ್ಲೇ ತುಸು ಬಳಲಿದ್ದರು. ಅದರಲ್ಲೂ ಬೌಲಿಂಗ್ ಹಾಗೂ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಹೆಚ್ಚಿನ ಬಳಲಿಕೆ ಒಳಗಾಗಿದ್ದರು. ಹೀಗಾಗಿಯೇ ಪಾಂಡ್ಯ ಡಗೌಟ್ನಲ್ಲಿದ್ದ ಸಹ ಆಟಗಾರರಿಗೆ ನೀರು ತರುವಂತೆ ಸೂಚನೆ ನೀಡಿದ್ದರು.
ಆದರೆ ಈ ಪಂದ್ಯದಲ್ಲಿ ವಾಟರ್ ಬಾಯ್ಗಳಾಗಿ ಕಾಣಿಸಿಕೊಂಡಿದ್ದ ಯುಜ್ವೇಂದ್ರ ಚಹಲ್ ಆಗಲಿ, ಅರ್ಷದೀಪ್ ಆಗಲಿ ನೀರು ತಂದು ಕೊಟ್ಟಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಹಾರ್ದಿಕ್ ಪಾಂಡ್ಯ, ಸಹ ಆಟಗಾರರನ್ನು ಮೈದಾನದಲ್ಲೇ ಬೈದ ಘಟನೆ ನಡೆಯಿತು.
ಕೊನೆಯ ಓವರ್ ವೇಳೆಯೇ ನೀರು ಬೇಕೆಂದು ತಿಳಿಸಿದ್ದೀನಿ…ಅಲ್ಲೇನು @#%@# ಹೊಡಿತಿದ್ದೀರಾ ಎಂದು ವಾಟರ್ ಬಾಯ್ಗಳಾಗಿದ್ದ ಸಹ ಆಟಗಾರರನ್ನು ಬೈದರು. ಇತ್ತ ಹಾರ್ದಿಕ್ ಪಾಂಡ್ಯರ ಈ ಆಕ್ರೋಶಭರಿತ ಬೈಗುಳ ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿತ್ತು. ಇದೀಗ ಇದರ ವಿಡಿಯೋ ವೈರಲ್ ಆಗಿದ್ದು, ಪಾಂಡ್ಯ ನಡೆಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Hardik Pandya said “paani manga tha last over gaa*d marwa rahe ho udhar” ???? btw to whom he said these beautiful words ??#HardikPandya#INDvsSL #HardikPandya #viratkholi pic.twitter.com/4NDLR2H8lg
— ?????????? ??? (@KapilendraDas3) January 12, 2023
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 29 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಜೊತೆಯಾದ ಕುಸಾಲ್ ಮೆಂಡಿಸ್ ಹಾಗೂ ನುವಾನಿಡು 73 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ದಾಳಿಗಿಳಿದ ಕುಲ್ದೀಪ್ ಯಾದವ್ ಕುಸಾಲ್ ಮೆಂಡಿಸ್ (34) ರನ್ನು ಎಲ್ಬಿ ಬಲೆಗೆ ಬೀಳಿಸಿದರು. ಇದರ ಬೆನ್ನಲ್ಲೇ ಅಕ್ಷರ್ ಪಟೇಲ್ ಧನಂಜಯ್ ಡಿಸಿಲ್ವಾರನ್ನು ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಮಾಡಿದರು.
It’s really pathetic, pathetic, and Shameful by Hardik Pandya, how can someone used this type of slurs for own teammate ?pic.twitter.com/0AiO3fnU7y
— V I S H A L (@ImVi47) January 12, 2023
ಆ ಬಳಿಕ ಬಂದ ಚರಿತ್ ಅಸಲಂಕಾ (15) ಹಾಗೂ ದಸುನ್ ಶಾನಕ (2) ಕೂಡ ಕುಲ್ದೀಪ್ ಸ್ಪಿನ್ ಮೋಡಿಗೆ ಬಲಿಯಾದರು. ಇನ್ನು ವನಿಂದು ಹಸರಂಗ (21) ರನ್ನು ಹಾಗೂ ಕರುಣರತ್ನೆ (17) ಉಮ್ರಾನ್ ಮಲಿಕ್ ಔಟ್ ಮಾಡಿದರೆ, ದುನಿತ್ ವೆಲ್ಲಲಗೆ (32) ಗೆ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಅಂತಿಮವಾಗಿ ಕಣಕ್ಕಿಳಿದ ಲಹಿರು ಕುಮಾರರನ್ನು ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸಿರಾಜ್ ಶ್ರೀಲಂಕಾ ತಂಡವನ್ನು 39.4 ಓವರ್ಗಳಲ್ಲಿ 215 ರನ್ಗಳಿಗೆ ಆಲೌಟ್ ಮಾಡಿದರು.
ಟೀಮ್ ಇಂಡಿಯಾ ಪರ ಸಿರಾಜ್ 5.4 ಓವರ್ಗಳಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದರೆ, 10 ಓವರ್ಗಳಲ್ಲಿ 51 ರನ್ ನೀಡಿ ಕುಲ್ದೀಪ್ 3 ವಿಕೆಟ್ ಕಬಳಿಸಿದರು. ಇನ್ನು ಉಮ್ರಾನ್ ಮಲಿಕ್ 7 ಓವರ್ಗಳಲ್ಲಿ 48 ರನ್ ನೀಡಿ 2 ವಿಕೆಟ್ ಪಡೆದರು.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಅವಿಷ್ಕಾ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಕುಸಲ್ ಮೆಂಡಿಸ್ , ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಲಹಿರು ಕುಮಾರ, ಕಸುನ್ ರಜಿತ