ಕ್ರಿಕೆಟ್ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಅಂದರೆ ಕ್ಯಾಚ್ಗಳನ್ನು ಹಿಡಿದ್ರೆ ಮ್ಯಾಚ್ ಗೆಲ್ಲಬಹುದು ಎಂದರ್ಥ. ಈ ಮಾತನ್ನು ನಿಜ ಎಂದು ಸಾಬೀತುಪಡಿಸಿದ ಅನೇಕ ನಿದರ್ಶನಗಳು ಕೂಡ ನಮ್ಮ ಮುಂದೆ ಇದೆ. ಒಂದೇ ಒಂದು ಕ್ಯಾಚ್ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಾಗಿದೆ. ಈ ಅದ್ಭುತ ಕ್ಯಾಚ್ನಿಂದ ಪಂದ್ಯದ ಫಲಿತಾಂಶವೇ ಬದಲಾದ ಚರಿತ್ರೆ ಕೂಡ ಇದೆ. ಹಾಗೆಯೇ ಕ್ಯಾಚ್ಗಳನ್ನು ಕೈಚೆಲ್ಲಿ ಪಂದ್ಯ ಸೋತ ಅನೇಕ ಮ್ಯಾಚ್ಗಳನ್ನೂ ಕೂಡ ನೀವು ನೋಡಿರಬಹುದು. ಹೀಗಾಗಿ ಕ್ಯಾಚ್ ಮೂಲಕ ಸಿಗುವ ಅವಕಾಶವನ್ನು ಯಾವತ್ತಿಗೂ ಕೈಚೆಲ್ಲಬಾರದು ಎಂಬುದು ಕ್ರಿಕೆಟ್ ಅಂಗಳದ ತಾರ್ಕಿಕ ನಿಯಮ. ಇದನ್ನೂ ಈಗ ಯಾಕೆ ಹೇಳುತ್ತಿದ್ದೇವೆ ಎಂದರೆ ಯುರೋಪಿಯನ್ ಕ್ರಿಕೆಟ್ ಲೀಗ್ನಲ್ಲಿ ಹಿಡಿದಿರುವ ಅಧ್ಭುತ ಕ್ಯಾಚ್. ಅದು ಕೂಡ ಫೈನಲ್ ಪಂದ್ಯದಲ್ಲಿ.
ಯುರೋಪಿಯನ್ ಟಿ10 ಕ್ರಿಕೆಟ್ ಲೀಗ್ನ ಫೈನಲ್ ಪಂದ್ಯದಲ್ಲಿ ಪಂಜಾಬ್ ಲಯನ್ಸ್ ನಿಕೋಸಿಯಾ-ಪಾಕ್ ಐ ಕೇರ್ ಬಡಲೋನಾ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಪಂಜಾಬ್ ತಂಡದ ಸಿಕಂದರ್ ಅಲಿ ಸುಶೀಲ್ ಕುಮಾರ್ ಬೌಲಿಂಗ್‌ನಲ್ಲಿ ಭರ್ಜರಿ ಹೊಡೆತ ಬಾರಿಸಿದ್ದರು. ಅತ್ತ ಚೆಂಡು ಗಾಳಿಯಲ್ಲಿ ಬೌಂಡರಿಯತ್ತ ಸಾಗುತ್ತಿದ್ದಂತೆ ಇಬ್ಬರು ಫೀಲ್ಡರ್ಗಳು ಕ್ಯಾಚ್ ಹಿಡಿಯಲು ಓಡಿ ಬಂದರು. ಅಷ್ಟೇ ಅಲ್ಲದೆ ಇಬ್ಬರೂ ಡಿಕ್ಕಿಯಾಗಿ ಅಪ್ಪುಗೆಯೊಂದಿಗೆ ನೆಲಕ್ಕುರುಳಿದರು. ಇತ್ತ ಇಬ್ಬರು ಫೀಲ್ಡರ್ಗಳು ತಬ್ಬಿಕೊಂಡು ನೆಲಕ್ಕುರುಳಿದ ಪರಿಣಾಮ ಎಲ್ಲರೂ ಕ್ಯಾಚ್ ಡ್ರಾಪ್ ಆಗಿದೆ ಎಂದೇ ಭಾವಿಸಿದ್ದರು. ಆದರೆ ಇದೇ ವೇಳೆ ಒಬ್ಬ ಫೀಲ್ಡರ್ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗಿರುವುದನ್ನು ಚೆಂಡನ್ನು ತೋರಿಸುವ ಮೂಲಕ ಸ್ಪಷ್ಟಪಡಿಸಿದರು. ಇದನ್ನು ನೋಡಿದ ಕಮೆಂಟೇಟರ್ ಕೂಡ ನಿಬ್ಬೆಗಾಗಾಗಿ ಅದ್ಭುತ ಕ್ಯಾಚ್ ಅನ್ನು ಹಾಡಿಹೊಗಳಿದ್ದಾರೆ. ಇದೀಗ ಈ ಅಪ್ಪುಗೆಯ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ಐ ಕೇರ್ ಬಡಲೋನಾ ತಂಡವು 10 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಲಯನ್ಸ್ ನಿಕೋಸಿಯಾ ತಂಡವು ಮೊದಲ 3 ಓವರ್‌ಗಳಲ್ಲಿ ಕೇವಲ 18 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಆ ಬಳಿಕ ಪಂದ್ಯಕ್ಕೆ ಅಡಚಣೆ ಉಂಟಾದ ಪರಿಣಾಮ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಾಕ್ ಐ ಕೇರ್ ಬಡಲೋನಾ ತಂಡ 14 ರನ್ಗಳಿಂದ ಜಯ ಸಾಧಿಸಿತು.
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
(VIDEO: What a Catch in European Cricket League, Two player hug each other and take a catch in Cricket)
Published On - 4:39 pm, Tue, 15 March 22