Vijay Hazare Trophy: ಹರ್ಯಾಣ ವಿರುದ್ಧ ಕರ್ನಾಟಕ ತಂಡಕ್ಕೆ ಹೀನಾಯ ಸೋಲು..!

| Updated By: ಝಾಹಿರ್ ಯೂಸುಫ್

Updated on: Dec 04, 2023 | 5:56 PM

Vijay Hazare Trophy: ಈ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರ್ನಾಟಕ ತಂಡದ ಬೌಲರ್​ ವಿಜಯಕುಮಾರ್ ವೈಶಾಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 61 ಎಸೆತಗಳನ್ನು ಎದುರಿಸಿದ ವೈಶಾಕ್ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 54 ರನ್​ಗಳ ಕೊಡುಗೆ ನೀಡಿದರು.

Vijay Hazare Trophy: ಹರ್ಯಾಣ ವಿರುದ್ಧ ಕರ್ನಾಟಕ ತಂಡಕ್ಕೆ ಹೀನಾಯ ಸೋಲು..!
Haryana vs Karnataka
Image Credit source: PC- Vijay Soneji _ The Hindu
Follow us on

ಗುಜರಾತ್​ನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆದ ವಿಜಯ ಹಜಾರೆ ಟೂರ್ನಿಯ ಗ್ರೂಪ್ ಸಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಹರ್ಯಾಣ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡಕ್ಕೆ ನಿರೀಕ್ಷಿತ ಆರಂಭ ದೊರಕಿರಲಿಲ್ಲ. ಆರಂಭಿಕ ಆಟಗಾರ ಆಟಗಾರ ಮಯಾಂಕ್ ಅಗರ್ವಾಲ್ (0) ಶೂನ್ಯಕ್ಕೆ ಔಟಾದರೆ, ರವಿಕುಮಾರ್ ಸಮರ್ಥ್ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಬಿಆರ್​ ಶರತ್ (15), ನಿಕಿಕ್ ಜೋಸ್ (9) ಹಾಗೂ ಮನೀಷ್ ಪಾಂಡೆ (24) ಬೇಗನೆ ನಿರ್ಗಮಿಸಿದರು. ಇನ್ನು ಅಭಿನವ್ ಮನೋಹರ್ 3 ರನ್​ಗಳಿಸಿದರೆ, ಮನೋಜ್ ಭಂಡಾಗೆ 8 ರನ್​ಗಳಿಸಿ ವಿಕೆಟ್ ಕೈಚೆಲ್ಲಿದರು.

ಇದಾಗ್ಯೂ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಜಯಕುಮಾರ್ ವೈಶಾಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 61 ಎಸೆತಗಳನ್ನು ಎದುರಿಸಿದ ವೈಶಾಕ್ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 54 ರನ್​ಗಳ ಕೊಡುಗೆ ನೀಡಿದರು. ಈ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು 43.5 ಓವರ್​ಗಳಲ್ಲಿ 143 ರನ್​ಗಳಿಸಿ ಆಲೌಟ್ ಆಯಿತು.

ಹರ್ಯಾಣ ಪರ ಸುಮಿತ್ ಕುಮಾರ್ 3 ವಿಕೆಟ್ ಪಡೆದರೆ, ಯುಜ್ವೇಂದ್ರ ಚಹಾಲ್ ಹಾಗೂ ನಿಶಾಂತ್ ಸಿಂಧು ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು 144 ರನ್​​ಗಳ ಸುಲಭ ಗುರಿ ಬೆನ್ನತ್ತಿದ ಹರ್ಯಾಣ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 35 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು.

ಈ ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ನಿಶಾಂತ್ ಸಿಂಧು (43) ಹಾಗೂ ರೋಹಿತ್ ಪ್ರಮೋದ್ ಶರ್ಮಾ (63) ತಂಡಕ್ಕೆ ಆಸರೆಯಾದರು. ಅಲ್ಲದೆ 31.1 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಹರ್ಯಾಣ ತಂಡವು ಗೆಲುವಿನ ದಡ ಸೇರಿತು. ಈ ಮೂಲಕ ಹರ್ಯಾಣ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಹರ್ಯಾಣ ಪ್ಲೇಯಿಂಗ್ ಇಲೆವೆನ್: ಅಂಕಿತ್ ಕುಮಾರ್ , ಯುವರಾಜ್ ಸಿಂಗ್ , ಹಿಮಾಂಶು ರಾಣಾ , ಅಶೋಕ್ ಮೆನಾರಿಯಾ (ನಾಯಕ) , ನಿಶಾಂತ್ ಸಿಂಧು , ರೋಹಿತ್ ಪರ್ಮೋದ್ ಶರ್ಮಾ ( ವಿಕೆಟ್ ಕೀಪರ್ ) , ರಾಹುಲ್ ತೆವಾಟಿಯಾ , ಸುಮಿತ್ ಕುಮಾರ್ , ಅನ್ಶುಲ್ ಕಾಂಬೋಜ್ , ಹರ್ಷಲ್ ಪಟೇಲ್ , ಯುಜ್ವೇಂದ್ರ ಚಾಹಲ್.

ಇದನ್ನೂ ಓದಿ: ವಿಶೇಷ ದಾಖಲೆ ಬರೆದ ರುತುರಾಜ್ ಗಾಯಕ್ವಾಡ್

ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಮನೀಷ್ ಪಾಂಡೆ , ಅಭಿನವ್ ಮನೋಹರ್ , ಶರತ್ ಬಿ ಆರ್ ( ವಿಕೆಟ್ ಕೀಪರ್ ) , ಮನೋಜ್ ಭಾಂಡಗೆ , ಕೃಷ್ಣಪ್ಪ ಗೌತಮ್ , ಜಗದೀಶ ಸುಚಿತ್ , ವಿಜಯ್ಕುಮಾರ್ ವೈಶಾಕ್ , ವಾಸುಕಿ ಕೌಶಿಕ್.

 

Published On - 5:55 pm, Mon, 4 December 23