ಲಖನೌ ಸೂಪರ್ ಜೇಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಐಪಿಎಲ್ 2022 ಎಲಿಮಿನೇಟರ್ (IPL 2022 Eliminator) ಪಂದ್ಯ ವೀಕ್ಷಿಸಲು ಕ್ರಿಕೆಟ್ ದಿಗ್ಗಜರು ಈಡನ್ ಗಾರ್ಡನ್ಸ್ನಲ್ಲಿ ಹಾಜರಿದ್ದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕೂಡ ಈ ಹೈಸ್ಕೋರ್ ಪಂದ್ಯವನ್ನು ಕಣ್ತುಂಬಿಕೊಂಡರು. ಆರ್ಸಿಬಿ ಹಾಗೂ ಎಲ್ಎಸ್ಜಿ ನಡುವಣ ರೋಚಕ ಕಾದಾಟದಲ್ಲಿ ಫಾಫ್ ಡುಪ್ಲೆಸಿಸ್ ಪಡೆ 14 ರನ್‌ಗಳ ಜಯ ಸಾಧಿಸಿ ಕ್ವಾಲಿಫೈಯರ್-2 ಗೆ ಲಗ್ಗೆಯಿಟ್ಟಿದೆ. ಆರ್ಸಿಬಿ ಬ್ಯಾಟರ್ಗಳು ಈ ಮೈದಾನದಲ್ಲಿ ರನ್ ಮಳೆಯನ್ನೇ ಸುರಿಸಿದರು. ರಜತ್ ಪಟಿದಾರ್ ಸ್ಫೋಟಕ ಶತಕ ಸಿಡಿಸಿದರೆ ದಿನೇಶ್ ಕಾರ್ತಿಕ್ ಫಿನಿಶಿಂಗ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಬೆಂಗಳೂರು ತಂಡದ ಕಡೆಯಿಂದ 21 ಫೋರ್ ಹಾಗೂ 7 ಸಿಕ್ಸರ್ಗಳು ಮೂಡಿಬಂದವು. ಆದರೆ, ಇವೆಲ್ಲದರ ಮಧ್ಯೆ ಸೌರವ್ ಗಂಗೂಲಿಯನ್ನು ದಂಗು ಬಡಿಸಿದ್ದು ವಿರಾಟ್ ಕೊಹ್ಲಿ (Virat Kohli) ಅವರು ಸಿಡಿಸಿದ ಫೋರ್.
ಹೌದು, ಎಲ್ಎಸ್ಜಿ ಪರ ಇನ್ನಿಂಗ್ಸ್ನ ಎರಡನೇ ಓವರ್ ಬೌಲಿಂಗ್ ಮಾಡಲು ದುಶ್ಮಂತ ಚಮೀರಾ ಅವರ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ಫೋರ್ ಸಿಡಿಸಿದರು. ನೇರವಾಗಿ ಕಾಲ ಬುಡಕ್ಕೆ ಬಂದಿದ್ದ ಚೆಂಡನ್ನು ಕೊಹ್ಲಿ ತಮ್ಮ ಟೆಕ್ನಿಕ್ ಉಪಯೋಗಿಸಿ ಮಿಡ್ ಆನ್ ಕಡೆ ಫ್ಲಿಕ್ ಮಾಡಿಬಿಟ್ಟರು. ಚೆಂಡು ಮಿಡ್ ಆನ್ ಕಡೆಗೆ ಸಾಗಿ ಬೌಂಡರಿ ಗೆರೆ ತಲುಪಿತು. ಕೊಹ್ಲಿ ಅವರ ಈ ಅದ್ಭುತ ಶಾಟ್ ಕಂಡು ಸ್ಟೇಡಿಯಂನಲ್ಲಿ ಕೂತಿದ್ದ ಸೌರವ್ ಗಂಗೂಲಿ ಮನಸೋತರು. ವಾವ್ ಎಂಬಂತೆ ರಿಯಾಕ್ಷನ್ ಕೊಟ್ಟರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
— Guess Karo (@KuchNahiUkhada) May 25, 2022
Reaction of Sourav Ganguly, When Virat Kohli played this shot❤️#ViratKohli • @imVkohli pic.twitter.com/7bkEDFIykn
— Viratians™ (@vira_tians) May 25, 2022
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಆರಂಭದಲ್ಲೇ ಆಘಾತ ಅನುಭವಿಸಿತು. ಮೊದಲ ಓವರ್‌ನಲ್ಲಿಯೇ ಫಾಫ್ ಡು ಪ್ಲೆಸಿಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಂತರ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಜೊತೆ ಉತ್ತಮ ಜೊತೆಯಾಟವಾಡುವ ಸೂಚನೆ ನೀಡಿದರು. ಆದರೆ, ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 25 ರನ್ಗೆ ವಿಕೆಟ್ ಒಪ್ಪಿಸಿದರು. ಮ್ಯಾಕ್ಸ್‌ವೆಲ್ ಕೇವಲ 9 ರನ್ ಗಳಿಸಿ ಔಟ್ ಆದರು. ಮಹಿಪಾಲ್ ಲುಮ್ರೂರ್ ಕೂಡ 14 ರನ್ಗೆ ಬ್ಯಾಟ್ ಕೆಳಗಿಟ್ಟರು. ನಂತರ ನಡೆದಿದ್ದು ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಆಟ.
Rajat Patidar: ನಿನ್ನೆಯ ಒಂದೇ ಪಂದ್ಯದಿಂದ ರಜತ್ ಪಟಿದಾರ್ಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?: ಶಾಕ್ ಆಗ್ತೀರಾ
ಈ ಜೋಡಿ ಮುರಿಯದ ಐದನೇ ವಿಕೆಟ್‌ಗೆ 43 ಎಸೆತಗಳಲ್ಲಿ 92 ರನ್‌ಗಳ ಕಾಣಿಕೆ ನೀಡಿದರು. ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಎಲ್ಲ ಬೌಲರ್‌ಗಳು ದುಬಾರಿಯಾದರು. ಪಟಿದಾರ್ ಅಜೇಯ 112 ರನ್ ಗಳಿಸಿದರೆ, ಕಾರ್ತಿಕ್ 23 ಎಸೆತಗಳಲ್ಲಿ 5 ಫೋರ್, 1 ಸಿಕ್ಸರ್ನೊಂದಿಗೆ ಅಜೇಯ 37 ರನ್ ಸಿಡಿಸಿದರು. ಆರ್ಸಿಬಿ 20 ಓವರ್ಗೆ 4 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು.
208 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಲಖನೌ ಕೂಡ ಆರಂಭದಲ್ಲಿಯೇ ಕ್ವಿಂಟನ್ ಡಿ ಕಾಕ್, ಮನನ್ ವೋಹ್ರಾ ವಿಕೆಟ್ ಕಳೆದುಕೊಂಡಿತು. ಬಳಿಕ ದೀಪಕ್ ಹೂಡಾ ಮತ್ತು ಕೆಎಲ್ ರಾಹುಲ್ ಉತ್ತಮ ಜೊತೆಯಾಟವಾಡಿದರು. ಆದರೆ, ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ. ರಾಹುಲ್ 58 ಎಸೆತಗಳಿಂದ 3 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 79 ರನ್ ಗಳಿಸಿದರೆ ದೀಪಕ್ ಹೂಡಾ 45 ರನ್ ಹೊಡೆದರು. ಲಖನೌ 6 ವಿಕೆಟ್‌ಗೆ 193 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:10 pm, Thu, 26 May 22