South Africa vs India: ಸ್ಟಾರ್ ಆಟಗಾರರ ದಂಡೇ ಇದ್ದರೂ ಸೋಲುತ್ತಿದೆ ಭಾರತ: ಎಡವುತ್ತಿರುವುದು ಎಲ್ಲಿ?

India vs South Africa 1st ODI: ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ 31 ರನ್​ಗಳ ಭರ್ಜರಿ ಜಯ ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಉಳಿದಿರುವುದು ಎರಡು ಪಂದ್ಯ ಮಾತ್ರ. ಆಫ್ರಿಕಾಕ್ಕೆ ಕೇವಲ ಒಂದು ಪಂದ್ಯ ಗೆದ್ದರೆ ಸರಣಿಯನ್ನೂ ವಶಪಡಿಸಿಕೊಳ್ಳಲಿದೆ. ಭಾರತ ಎರಡೂ ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿದೆ.

South Africa vs India: ಸ್ಟಾರ್ ಆಟಗಾರರ ದಂಡೇ ಇದ್ದರೂ ಸೋಲುತ್ತಿದೆ ಭಾರತ: ಎಡವುತ್ತಿರುವುದು ಎಲ್ಲಿ?
IND vs SA 1st ODI
Follow us
| Updated By: Vinay Bhat

Updated on: Jan 20, 2022 | 7:32 AM

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲು ಕಂಡ ಭಾರತ (India vs South Africa) ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲಿದೆ ಎಂದೇ ನಂಬಲಾಗಿತ್ತು. ಯಾಕಂದ್ರೆ ಸ್ಟಾರ್ ಆಟಗಾರರ ದಂಡೇ ಇರುವ ಟೀಮ್ ಇಂಡಿಯಾದಲ್ಲಿ ಬಹುತೇಕರು ಫಾರ್ಮ್​ನಲ್ಲಿದ್ದರು. ಆದರೆ, ಮೊದಲ ಏಕದಿನ ಪಂದ್ಯದಲ್ಲಿ ಆಗಿದ್ದೇ ಬೇರೆ. ಕೆಎಲ್ ರಾಹುಲ್ ಅವರ ಚೊಚ್ಚಲ ನಾಯಕತ್ವದಲ್ಲಿ ಭಾರತ ಟಾಸ್ ಸೋತಿತು, ಪಂದ್ಯ ಕೂಡ ಸೋತಿತು. ರಸಿ ವಾನ್ ಡರ್ ಡುಸೆನ್ ಮತ್ತು ನಾಯಕ ಟೆಂಬ ಬವುಮಾ ಅವರ ಅಮೋಘ ಶತಕದಾಟವನ್ನು ತಡೆಯಲು ಬೌಲರ್​ಗಳು ವಿಫಲವಾದರೆ, ಬ್ಯಾಟಿಂಗ್​ನಲ್ಲಿ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ (Virat Kohli) ಬಿಟ್ಟರೆ ಉಳಿದವರು ಕೈಕೊಟ್ಟರು. ಹೀಗಾಗಿ ಆಫ್ರಿಕಾ 31 ರನ್​ಗಳ ಭರ್ಜರಿ ಜಯ ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಉಳಿದಿರುವುದು ಎರಡು ಪಂದ್ಯ ಮಾತ್ರ. ಆಫ್ರಿಕಾಕ್ಕೆ ಕೇವಲ ಒಂದು ಪಂದ್ಯ ಗೆದ್ದರೆ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳಲಿದೆ. ಭಾರತ ಎರಡೂ ಪಂದ್ಯವನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ.

ಭಾರತ ಈ ದೊಡ್ಡ ಮೊತ್ತವನ್ನು ಚೇಸಿಂಗ್ ಮಾಡಬಹುದು ಎಂದೇ ನಂಬಲಾಗಿತ್ತು. ಆದರೆ, ಧವನ್ ನಿರ್ಗಮನದ ಬಳಿಕ ಟೀಮ್ ಇಂಡಿಯಾ ನಿರಂತರವಾಗಿ ವಿಕೆಟ್​ಗಳನ್ನ ಕಳೆದುಕೊಳ್ಳುತ್ತಾ ಹೋಯಿತು. ಧವನ್ 84 ಬಾಲ್​ನಲ್ಲಿ 79 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 63 ಬಾಲ್​ನಲ್ಲಿ 51 ರನ್ ಗಳಿಸಿದರು. ಶಾರ್ದೂಲ್ ಠಾಕೂರ್ ಕೂಡ ಅರ್ಧಶತಕ ಗಳಿಸಿ ತಾವು ಉತ್ತಮ ಆಲ್​ರೌಂಡರ್ ಆಗಿ ರೂಪುಗೊಂಡಿರುವುದನ್ನು ಸಾಬೀತು ಮಾಡಿದರು. ಈ ಮೂವರನ್ನ ಬಿಟ್ಟರೆ ಉಳಿದವರಿಂದ ಅಂಥ ಆಟ ಬರಲಿಲ್ಲ. ಪದಾರ್ಪಣೆ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್​ನಲ್ಲಿ ಕಮಾಲ್ ಮಾಡಲಿಲ್ಲ. ಬೌಲಿಂಗ್​ಗೆ ಅವಕಾಶವೇ ಸಿಗಲಿಲ್ಲ. ನಾಯಕ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್​ ಕೈಕೊಟ್ಟರು.

ಟಾಸ್‌ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಕೊಂಚ ಎಡವಿದರೂ ನಾಯಕ ಟೆಂಬ ಬವುಮಾ ಮತ್ತು ಐದನೇ ಕ್ರಮಾಂಕದ ರಸಿ ವಾನ್ ಡರ್ ಡುಸೆನ್ ಅವರ ಅಮೋಘ ಶತಕಗಳ ಬಲದಿಂದ ಸವಾಲಿನ ಮೊತ್ತ ಕಲೆ ಹಾಕಿತು. ಬವುಮಾ ಮತ್ತು ಡುಸೆನ್‌ ಭಾರತದ ವಿರುದ್ಧ ಎರಡನೇ ವಿಕೆಟ್‌ಗೆ ದಾಖಲೆಯ 204 ರನ್‌ಗಳನ್ನು ಸೇರಿಸಿದರು. ಟೆಸ್ಟ್‌ಗೆ ವಿದಾಯ ಹೇಳಿದ ನಂತರ ಮೊದಲ ಏಕದಿನ ಪಂದ್ಯ ಆಡಿದ ಕ್ವಿಂಟನ್ ಡಿ ಕಾಕ್ ಅವರು ಬವುಮಾ ಜೊತೆಗೂಡಿ ಇನಿಂಗ್ಸ್ ಕಟ್ಟಲು ಶ್ರಮಿಸಿದರು. ಆದರೆ ಫಲ ಸಿಗಲಿಲ್ಲ.18 ಓವರ್ ಆಗುವಷ್ಟರಲ್ಲಿ ತಂಡ ಮೂರು ವಿಕೆಟ್ ಕಳೆದುಕೊಂಡಿತು. ಆಗ ಸ್ಕೋರ್‌ ಕಾರ್ಡ್‌ನಲ್ಲಿದ್ದ ಮೊತ್ತ 68 ಮಾತ್ರ. ಈ ಹಂತದಲ್ಲಿ ದಕ್ಷಿಣ ಆಫ್ರಿಕಾಕ್ಕೆ 200 ರನ್ ಗಳಿಸುವುದು ಕಷ್ಟ ಎನಿಸಿತ್ತು. ಆದರೆ ಬವುಮಾ ಮತ್ತು ಡುಸೆನ್‌ ಪಂದ್ಯದ ಗತಿಯನ್ನೇ ಬದಲಿಸಿದರು. ಸ್ವೀಪ್ ಮತ್ತು ರಿವರ್ಸ್ ಸ್ವೀಪ್‌ಗಳೊಂದಿಗೆ ಸ್ಪಿನ್ನರ್‌ಗಳನ್ನು ಎದುರಿಸಿದ ಡುಸೆನ್ ವೇಗಿಗಳ ಎದುರು ಭರ್ಜರಿ ಹೊಡೆತಗಳೊಂದಿಗೆ ಮಿಂಚಿದರು.

ಡುಸೆ ಕೇವಲ 96 ಬಾಲ್​ನಲ್ಲಿ ಅಜೇಯ 129 ರನ್ ಗಳಿಸಿದರು. ನಾಯಕ ಟೆಂಬ ಬವುಮಾ 143 ಬಾಲ್​ನಲ್ಲಿ 110 ರನ್ ಗಳಿಸಿದರು. ಆಫ್ರಿಕಾ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಬಾರಿಸಿತು. ಭಾರತ ಪರ ಬುಮ್ರಾ 2 ಮತ್ತು ಅಶ್ವಿನ್ 1 ವಿಕೆಟ್ ಪಡೆದರು.

297 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೆ.ಎಲ್‌.ರಾಹುಲ್ ಬಳಗ 8 ವಿಕೆಟ್ ಕಳೆದುಕೊಂಡು 265 ರನ್ ಗಳಿಸಿತು. ಈ ಮೂಲಕ 31 ರನ್‌ಗಳ ಸೋಲೊಪ್ಪಿಕೊಂಡಿತು. ಧವನ್ ಜೊತೆ ಮೊದಲ ವಿಕೆಟ್‌ಗೆ 46 ರನ್‌ಗಳನ್ನು ಸೇರಿಸಿ ರಾಹುಲ್ ಔಟಾದರು. ನಂತರ ಧವನ್ ಮತ್ತು ಕೊಹ್ಲಿ 92 ರನ್‌ಗಳನ್ನು ಸೇರಿಸಿದರು. ಇಬ್ಬರೂ ಅರ್ಧಶತಕಗಳನ್ನು ಗಳಿಸಿದರು. ಈ ಜೊತೆಯಾಟ ಮುರಿದ ನಂತರ ಸತತವಾಗಿ ವಿಕೆಟ್‌ಗಳು ಉರುಳಿದವು. ಎಂಟನೇ ಕ್ರಮಾಂಕದ ಶಾರ್ದೂಲ್ ಠಾಕೂರ್ ಅರ್ಧಶತಕ ಗಳಿಸಿದರೂ ಅಷ್ಟರಲ್ಲಿ ಕಾಲ ಮಿಂಚಿತ್ತು. ಧವನ್‌ ಸರ್ವಾಧಿಕ 79 ರನ್‌ ಬಾರಿಸಿದರು. 84 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಒಳಗೊಂಡಿತ್ತು. ಕೊಹ್ಲಿ 63 ಎಸೆತ ನಿಭಾಯಿಸಿ 51 ರನ್‌ ಮಾಡಿದರು (3 ಬೌಂಡರಿ). ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಸಿಡಿದು ನಿಲ್ಲುವಾಗ ಪಂದ್ಯ ಆಗಲೇ ಭಾರತದ ಕೈ ಜಾರಿತ್ತು.

ಎರಡು ಏಕದಿನ ಪಂದ್ಯಗಳು ಬಾಕಿಉಳಿದಿದ್ದು ಜನವರಿ 21 ಮತ್ತು 23ರಂದು ಪಾರ್ಲ್ ಮತ್ತು ಕೇಪ್​ಟೌನ್​ನಲ್ಲಿ ನಡೆಯಲಿವೆ.

U19 WC: ಟೀಂ ಇಂಡಿಯಾ ನಾಯಕ ಯಶ್ ಧುಲ್, ಉಪನಾಯಕ ಸೇರಿದಂತೆ 6 ಆಟಗಾರರಿಗೆ ಕೊರೊನಾ!

ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್