ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿಯನ್ನು ಬಿಸಿಸಿಐ ರಿಲೀಸ್ ಮಾಡಿದೆ. ಮುಖ್ಯ ಕೋಚ್ ಆಗಿರೋ ಗೌತಮ್ ಗಂಭೀರ್ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಟಿ20ಗೆ ಹಾಗೂ ಏಕದಿನಕ್ಕೆ ಬೇರೆ ಬೇರೆ ತಂಡವನ್ನೇ ಘೋಷಣೆ ಮಾಡಿಕೊಳ್ಳಲಾಗಿದೆ. ಏಕದಿನಕ್ಕೆ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿದ್ದು, ವಿರಾಟ್ ಕೊಹ್ಲಿ ಅವರು ಕೂಡ ತಂಡದಲ್ಲಿದ್ದಾರೆ. ಗೌತಮ್ ಹಾಗೂ ವಿರಾಟ್ ಮಧ್ಯೆ ಈ ಮೊದಲು ಹಲವು ಕ್ಲ್ಯಾಶ್ ಆಗಿತ್ತು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇತ್ತು. ಆದರೆ, ಇದನ್ನು ಇಬ್ಬರೂ ಮರೆಯಲು ನಿರ್ಧರಿಸಿದ್ದಾರಂತೆ.
ವಿರಾಟ್ ಕೊಹ್ಲಿ ಅವರು ಈಗಾಗಲೇ ಬಿಸಿಸಿಐನ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಈ ಮೊದಲು ಗಂಭೀರ್ ಜೊತೆಗೆ ನಡೆದ ಕಿರಿಕ್ಗಳನ್ನು ಮರೆತು ಮುಂದೆ ಸಾಗಿರುವುದಾಗಿ ಹೇಳಿದ್ದಾರೆ. ಈ ಕಿರಿಕ್ಗಳಿಂದ ಆಟದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಹೇಳಿದ್ದಾರಂತೆ.
ಮನಸ್ತಾಪಗಳು ಇದ್ದಾಗ ಅವುಗಳು ಆಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಒಂದು ಟೀಂ ಆಗಿ ಆಡೋಕೆ ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಬಿಸಿಸಿಐ ಅಧಿಕಾರಿಗಳಿಗೆ ಭಯ ಇತ್ತು. ಈಗ ವಿರಾಟ್ ಅವರ ಆಶ್ವಾಸನೆಯಿಂದ ಬಿಸಿಸಿಐ ಅಧಿಕಾರಿಗಳು ಖುಷಿಯಾಗಿದ್ದಾರೆ. ಗಂಭೀರ್ ಕೂಡ ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿಲ್ಲ.
ಈ ಬಾರಿಯ ಐಪಿಎಲ್ ಸಂದರ್ಭದಲ್ಲಿ ಗೌತಮ್ ಗಂಭೀರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ನ ಮೆಂಟರ್ ಆಗಿದ್ದರು. ಆರ್ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಹಾಗೂ ಕೆಕೆಆರ್ ಎರಡು ಬಾರಿ ಮುಖಾಮುಖಿ ಆಗಿತ್ತು. ಆಗ ಕೊಹ್ಲಿ ಹಾಗೂ ಗೌತಮ್ ಕಿತ್ತಾಡಿಕೊಳ್ಳಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ವಿರಾಟ್ ಹಾಗೂ ಗೌತಮ್ ನಗು ನಗುತ್ತಲೇ ಮಾತನಾಡಿದ್ದರು.
ಇದನ್ನೂ ಓದಿ: ಮೊದಲ ಬಾರಿಗೆ ಮಗನೊಂದಿಗೆ ಕಾಣಿಸಿಕೊಂಡ ವಿರಾಟ್ ಕೊಹ್ಲಿ; ವೈರಲ್ ವಿಡಿಯೋ ನೋಡಿ
ವಿರಾಟ್ ಅವರು ಎಷ್ಟೇ ದ್ವೇಷ ಇಟ್ಟುಕೊಂಡರೂ ಕ್ಷಮಿಸುವ ಗುಣವನ್ನು ಹೊಂದಿದ್ದಾರೆ. ಮೈದಾನದಲ್ಲಿ ಅವರನ್ನು ರೇಗಿಸಿದ ಅನೇಕರನ್ನು ಮನ್ನಿಸಿದ್ದಾರೆ. ಆ ಬಳಿಕ ಅವರ ಜೊತೆ ನಗು ನಗುತ್ತಲೇ ಮಾತನಾಡಿದ್ದು ಇದೆ. ಈಗ ಗೌತಮ್ ಜೊತೆ ಸೇರಿ ದೇಶಕ್ಕಾಗಿ ಆಟ ಆಡುವ ಉದ್ದೇಶವನ್ನು ವಿರಾಟ್ ಹೊಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.