Virat Kohli: ಮೊದಲ ಬಾರಿಗೆ ಮಗನೊಂದಿಗೆ ಕಾಣಿಸಿಕೊಂಡ ವಿರಾಟ್ ಕೊಹ್ಲಿ; ವೈರಲ್ ವಿಡಿಯೋ ನೋಡಿ
Virat Kohli: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿರಾಟ್ ತಮ್ಮ ಮಗ ಅಕಾಯ್ ಜೊತೆ ಹೂವಿನ ಅಂಗಡಿಯೊಂದರ ಬಳಿ ನಿಂತಿದ್ದಾರೆ. ಅವರ ಪಕ್ಕದಲ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ. ವಿರಾಟ್ ತನ್ನ ಮಗನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಇದೇ ಮೊದಲು.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 2024 ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡಿದ ಬಳಿಕ ಇದೀಗ ಲಂಡನ್‌ನಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಮಾಧ್ಯಮಗಳಿಂದ ದೂರಾಗಿ ಸಾಮಾನ್ಯರಂತೆ ಬದುಕು ಕಳೆಯುವುದೆಂದರೆ ಕೊಹ್ಲಿ ದಂಪತಿಗಳಿಗೆ ಬಲು ಇಷ್ಟ. ಹೀಗಾಗಿ ಈ ಇಬ್ಬರು ತಮ್ಮ ಮಕ್ಕಳೊಂದಿಗೆ ಲಂಡನ್ನಲ್ಲಿದ್ದಾರೆ. ಆದರೆ ವಿರಾಟ್‌ರಂತಹ ಸೂಪರ್‌ಸ್ಟಾರ್ ಮೀಡಿಯಾಗಳಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಕೊಹ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಅವರ ಅಭಿಮಾನಿಗಳು ಕೊಹ್ಲಿ ಕುಟುಂಬವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಇದೀಗ ಅಂತಹದ್ದೇ ಕೊಹ್ಲಿ ಕುಟುಂಬದ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಕೊಹ್ಲಿ ತಮ್ಮ ಮಗ ಅಕಾಯ್ ಜೊತೆ ಕಾಣಿಸಿಕೊಂಡಿದ್ದಾರೆ.
ಮಗನೊಂದಿಗೆ ಮೊದಲ ವಿಡಿಯೋ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿರಾಟ್ ತಮ್ಮ ಮಗ ಅಕಾಯ್ ಜೊತೆ ಹೂವಿನ ಅಂಗಡಿಯೊಂದರ ಬಳಿ ನಿಂತಿದ್ದಾರೆ. ಅವರ ಪಕ್ಕದಲ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ. ವಿರಾಟ್ ತನ್ನ ಮಗನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಇದೇ ಮೊದಲು. ಅಕಾಯ್ 15 ಫೆಬ್ರವರಿ 2024 ರಂದು ಲಂಡನ್‌ನಲ್ಲಿ ಜನಿಸಿದರು. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ರಜೆ ತೆಗೆದುಕೊಂಡಿದ್ದ ಕೊಹ್ಲಿ ಆ ಸಮಯದಲ್ಲಿ ಕುಟುಂಬದೊಂದಿಗೆ ಲಂಡನ್‌ನಲ್ಲಿದ್ದರು.
Virat Kohli with Akaay in London. ❤️pic.twitter.com/bbqZetrExZ
— Mufaddal Vohra (@mufaddal_vohra) July 18, 2024
ಕೀರ್ತನಾ ಕಾರ್ಯಕ್ರಮದಲ್ಲಿ ಭಾಗಿ
ಕೆಲ ದಿನಗಳ ಹಿಂದೆ ಲಂಡನ್‌ನ ಇಸ್ಕಾನ್ ಟೆಂಪಲ್‌ನ ಕೀರ್ತನಾ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಕಾಣಿಸಿಕೊಂಡಿದ್ದರು. ವೈರಲ್ ಆಗಿರುವ ಕಾರ್ಯಕ್ರಮದ ವೀಡಿಯೊದಲ್ಲಿ, ಇಬ್ಬರೂ ಭಕ್ತಿಯಲ್ಲಿ ಮುಳುಗಿರುವುದು ಕಾಣಬಹುದಾಗಿದೆ. ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗಿರುವ ಕೊಹ್ಲಿ ಯಾವಾಗ ತಂಡ ಕೂಡಿಕೊಳ್ಳಲಿದ್ದಾರೆ ಎಂಬುದು ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದ ಬಳಿಕವಷ್ಟೇ ತಿಳಿಯಲಿದೆ.
View this post on Instagram
ಈ ನಡುವೆ ಕೊಹ್ಲಿ ಲಭ್ಯತೆಯ ಬಗ್ಗೆ ಮಾಧ್ಯಮಗಳಲ್ಲಿ ಎರಡು ಸುದ್ದಿಗಳು ಚರ್ಚೆಯಾಗುತ್ತಿವೆ. ಮೊದಲನೆಯದು ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ರಜೆ ತೆಗೆದುಕೊಳ್ಳಲು ಬಯಸಿದ್ದಾರೆ ಎಂಬುದು. ಎರಡನೆಯದಾಗಿ, ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್, ಕೊಹ್ಲಿ ಏಕದಿನ ಸರಣಿಯನ್ನು ಆಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂಬುದು. ಹೀಗಾಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟವಾದ ಬಳಿಕವಷ್ಟೇ ಕೊಹ್ಲಿ ಏಕದಿನ ಸರಣಿ ಆಡುತ್ತಾರಾ ಅಥವಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ನೇರವಾಗಿ ತಂಡಕ್ಕೆ ವಾಪಸಾಗುತ್ತಾರಾ ಎಂಬುದು ತಿಳಿಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Thu, 18 July 24