Asia Cup 2024: ಭಾರತ- ಪಾಕ್ ಪಂದ್ಯ ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?
Asia Cup 2024: ಹಾಲಿ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟ್ ತಂಡ ಶುಕ್ರವಾರ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಸಿದ್ಧತೆಗೆ ಈ ಪಂದ್ಯಾವಳಿ ಭಾರತ ವನಿತಾ ಪಡೆಗೆ ಅತ್ಯಂತ ಪ್ರಮುಖವಾಗಿದೆ.
ಹಾಲಿ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟ್ ತಂಡ ಶುಕ್ರವಾರ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಸಿದ್ಧತೆಗೆ ಈ ಪಂದ್ಯಾವಳಿ ಭಾರತ ವನಿತಾ ಪಡೆಗೆ ಅತ್ಯಂತ ಪ್ರಮುಖವಾಗಿದೆ. ಹರ್ಮನ್‌ಪ್ರೀತ್ ನಾಯಕತ್ವದ ಭಾರತ ತಂಡ ಏಷ್ಯಾಕಪ್‌ನಲ್ಲಿ ಪಾರುಪತ್ಯ ಸಾಧಿಸಿದ್ದು, ಇದುವರೆಗೆ ತಂಡ ನಾಲ್ಕು ಟಿ20 ಪ್ರಶಸ್ತಿಗಳಲ್ಲಿ ಮೂರು ಮತ್ತು ಏಕದಿನ ಸ್ವರೂಪದಲ್ಲಿ ಎಲ್ಲಾ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಆಡಿರುವ 20 ಪಂದ್ಯಗಳ ಪೈಕಿ 17ರಲ್ಲಿ ಗೆಲುವು ಸಾಧಿಸಿದೆ. ಇನ್ನು ಈ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ ವಿರುದ್ಧ 14 ಪಂದ್ಯಗಳಲ್ಲಿ 11 ಗೆಲುವು ದಾಖಲಿಸಿದ್ದು, ನಾಳೆ ನಡೆಯಲ್ಲಿರುವ ಪಂದ್ಯದಲ್ಲಿ ಹರ್ಮನ್ ಪಡೆ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುವ ಇರಾದೆಯಲ್ಲಿದೆ. ನಾಳೆ ನಡೆಯಲ್ಲಿರುವ ಉಭಯ ತಂಡಗಳ ಮಹತ್ವದ ಮುಖಾಮುಖಿಯ ಬಗ್ಗೆ ಸಂಪೂರ್ಣ ವಿವರ ಹೀಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಷ್ಯಾಕಪ್ ಪಂದ್ಯ ಯಾವಾಗ ನಡೆಯಲ್ಲಿದೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಷ್ಯಾಕಪ್ ಪಂದ್ಯ ಜುಲೈ 19 ರಂದು ನಡೆಯಲ್ಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಷ್ಯಾಕಪ್ ಪಂದ್ಯ ಎಲ್ಲಿ ನಡೆಯಲ್ಲಿದೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಷ್ಯಾಕಪ್ ಪಂದ್ಯ ದಂಬುಲಾದ ರಂಗಿರಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಷ್ಯಾಕಪ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಮಹಿಳಾ ಏಷ್ಯಾಕಪ್ 2024 ರ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಹೀಗಿರುವಾಗ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.
ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಷ್ಯಾಕಪ್ ಪಂದ್ಯವನ್ನು ಎಲ್ಲಿ ಉಚಿತವಾಗಿ ವೀಕ್ಷಿಸಬಹುದು?
ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಈ ಪಂದ್ಯವನ್ನು ನೀವು ಉಚಿತವಾಗಿ ವೀಕ್ಷಿಸಲು ಬಯಸಿದರೆ. ನೀವು ನಿಮ್ಮ ಫೋನ್‌ನಲ್ಲಿ ಹಾಟ್‌ಸ್ಟಾರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಉಚಿತವಾಗಿ ವೀಕ್ಷಿಸಬಹುದು.
ಉಭಯ ತಂಡಗಳು
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಉಮಾ ಛೆಟ್ರಿ, ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಡಿ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಂಜೀವನ್ ಸಜ್ನಾ ಪಾಟೀಲ್.
ಪಾಕಿಸ್ತಾನ ತಂಡ: ನಿದಾ ದಾರ್ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಫಾತಿಮಾ ಸನಾ, ಗುಲ್ ಫಿರೋಜ್, ಇರಾಮ್ ಜಾವೇದ್, ಮುನಿಬಾ ಅಲಿ, ನಜಿಹಾ ಅಲ್ವಿ, ನಶ್ರಾ ಸಂಧು, ಒಮೈಮಾ ಸೊಹೈಲ್, ಸಾದಿಯಾ ಇಕ್ಬಾಲ್, ಸಿದ್ರಾ ಅಮೀನ್, ಸೈಯದಾ ಅರುಬ್ ಶಾ, ತಸ್ಮಿಯಾ ರುಬಾಬ್, ತೂಬಾ ಹಸನ್ .
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ