ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮಹಾ ಟೂರ್ನಿಯಲ್ಲಿ ಟೀಮ್ ಇಂಡಿಯಾ (Team India) ಟ್ರೋಫಿ ಎತ್ತಿ ಹಿಡಿಯಲಿದೆ ಎಂದೇ ನಂಬಲಾಗಿತ್ತು. ಅದರಂತೆ ಅಭ್ಯಾಸ ಪಂದ್ಯಗಳಲ್ಲಿ ಭಾರತೀಯ ಆಟಗಾರರು ಮೈಚಳಿ ಬಿಟ್ಟು ಆಟವಾಡಿದರು. ಆದರೆ, ರಿಯಲ್ ಗೇಮ್ ಶುರುವಾಗಿದ್ದೇ ತಡ ಸತತ ಎರಡು ಸೋಲುಗಳನ್ನು ಕಂಡು ಟೂರ್ನಿಯಿಂದಲೇ ಹೊರಬೀಳುವ ಸ್ಥಿತಿಗೆ ಬಂದು ತಲುಪಿದರು. ಆ ಬಳಿಕ ಇತರೆ ತಂಡಗಳ ಸೋಲು- ಗೆಲುವಿನ ಲೆಕ್ಕಚಾರ, ರನ್ರೇಟ್ ಎಲ್ಲವನ್ನು ಅಳೆದು ತೂಗಿದರೂ ಕೊಹ್ಲಿ (Virat Kohli) ಪಡೆಗೆ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಸಾಧ್ಯವಾಗದೆ ಆರನೇ ಆವೃತ್ತಿಯ ಟಿ20 ವಿಶ್ವಕಪ್ಗೆ ಗುಡ್ ಬೈ ಹೇಳಿತು. ಇದು ಭಾರತಕ್ಕೆ (Indian Cricket Team) ತುಂಬಾನೆ ಭಾವನಾತ್ಮಕ ವಿದಾಯ.
ಹೌದು, ಸೋಮವಾರ ನಮೀಬಿಯಾ ವಿರುದ್ಧ ಕೊನೇ ಪಂದ್ಯವನ್ನು ಆಡಿ ಗೆಲುವು ಸಾಧಿಸಿತಾದರೂ ಭಾರತೀಯ ಆಟಗಾರರ ಮನದಲ್ಲಿ ಸಂಭ್ರಮ ಮನೆಮಾಡಿರಲಿಲ್ಲ. ವಿರಾಟ್ ಕೊಹ್ಲಿ ನಾಯಕನಾಗಿ ಕೊನೆಯ ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿದರು. ಕಳೆದ ಆರು – ಏಳು ವರ್ಷಗಳಿಂದ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರವಿಶಾಸ್ತ್ರಿ ಅವಧಿ ಮುಕ್ತಾಯಗೊಂಡಿತು. ಇದೇ ಮೊದಲ ಬಾರಿಗೆ ಮೆಂಟರ್ ಆಗಿ ಭಾರತ ತಂಡಕ್ಕೆ ಬಂದ ಎಂ ಎಸ್ ಧೋನಿಗೂ ಯಶಸ್ಸು ಸಿಗಲಿಲ್ಲ. ಇವೆಲ್ಲ ದುಃಖಗಳಿಂದ ಭಾರತ ಖಾಲಿ ಕೈಯಲ್ಲಿ ತವರಿಗೆ ಹಿಂತಿರಗಬೇಕಾಗಿ ಬಂತು.
ಪಂದ್ಯ ಮುಗಿದ ಬಳಿಕ ನಮೀಬಿಯಾ ವಿರುದ್ಧ ಗೆದ್ದ ತಕ್ಷಣ ಭಾರತೀಯ ಆಟಗಾರರು ಡ್ರೆಸ್ಸಿಂಗ್ ರೂಮ್ಗೆ ತೆರಳುವ ವೇಳೆ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ತಬ್ಬಿಕೊಂಡು ಭಾವುಕರಾದ ಘಟನೆ ಕೂಡ ನಡೆಯಿತು. ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲ ಭಾರತೀಯರು ಸೇರಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಕೊಹ್ಲಿ ಜೊತೆ ಮತ್ತು ಕೋಚ್ ಹುದ್ದೆಯಿಂದ ಕೆಳಿಗಿಳಿದ ರವಿಶಾಸ್ತ್ರಿ ಜೊತೆ ಮಾತುಗಳನ್ನು ಆಡಿ ಕೆಲ ಸಮಯ ಕಳೆದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ‘ಕಳೆದ ಆರು- ಏಳು ವರ್ಷಗಳಿಂದ ಸಾಕಷ್ಟು ಕೆಲಸ ಮತ್ತು ಒತ್ತಡದಿಂದ ಇದ್ದೆ. ಈಗ ಇದನ್ನು ಸರಿದೂಗಿಸುವ ಸಮಯ ಬಂದಿದೆ. ನಮ್ಮ ತಂಡದಲ್ಲಿರುವ ಆಟಗಾರರು ನನ್ನ ಕೆಲಸನ್ನು ತುಂಬಾನೆ ಸರಳ ಮಾಡಿದ್ದಾರೆ. ರವಿಶಾಸ್ತ್ರಿ ಮತ್ತು ಸಹಾಯಕ ಸಿಬ್ಬಂದಿಗಳಿಗೆ ನನ್ನ ಧನ್ಯವಾದ. ವರ್ಷದಿಂದ ವರ್ಷಕ್ಕೆ ಅವರು ಸಾಕಷ್ಟು ಶ್ರಮಿಸಿದ್ದಾರೆ. ಆಟಗಾರರಲ್ಲಿ ಉತ್ತಮ ಸಂಬಂಧ ಬೆಳೆಸಿದ್ದಾರೆ. ಆಟಗಾರರ ನಡುವೆ ಏನು ಬೇಕೋ ಅದನ್ನು ಅವರು ಮಾಡಿದ್ದಾರೆ’ ಎಂದು ಹೇಳಿದರು.
Together as one we set out to achieve our goal.Unfortunately we fell short and no one is more disappointed than us as a side.The support from all of you has been fantastic and we are grateful for it all.We will aim to come back stronger and put our best foot forward. Jai Hind??? pic.twitter.com/UMUQgInHrV
— Virat Kohli (@imVkohli) November 8, 2021
ಇನ್ನು ಕೋಚ್ ರವಿಶಾಸ್ತ್ರಿ ಮಾತನಾಡಿ, ‘ರಾಹುಲ್ ದ್ರಾವಿಡ್ ಅವರು ಭಾರತದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೇಷ್ಠ ತಂಡವೊಂದನ್ನು ಮುನ್ನಡೆಸಲಿದ್ದಾರೆ. ಅವರ ನಿಲುವು ಮತ್ತು ಅವರ ಅನುಭವದೊಂದಿಗೆ, ಅವರು ಮುಂದಿನ ದಿನಗಳಲ್ಲಿ ಈ ತಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು. ಇನ್ನೂ 3-4 ವರ್ಷಗಳ ಕಾಲ ಆಡುಲು ಬಹಳಷ್ಟು ಆಟಗಾರರಿದ್ದಾರೆ, ಇದು ಬಹಳ ಮುಖ್ಯವಾಗಿದೆ. ಇದು ರಾತ್ರೋರಾತ್ರಿ ಪರಿವರ್ತನೆಯಾಗುತ್ತಿರುವ ತಂಡವಲ್ಲ. ಹಾಗಾಗಿ ಈ ವಿಷಯ ತಂಡದ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ’ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
Virat Kohli: ನಮೀಬಿಯಾ ವಿರುದ್ಧ ಗೆದ್ದ ಬಳಿಕ ವಿರಾಟ್ ಕೊಹ್ಲಿ ಆಡಿದ ಒಂದೊಂದು ಮಾತು ನೀವೇ ಕೇಳಿ
Rohit Sharma: ಕ್ಯಾಪ್ಟನ್ ಪಟ್ಟಕ್ಕೇರುವ ಮುನ್ನ ರೋಹಿತ್ ಶರ್ಮಾ ಖಾತೆಗೆ ಸೇರಿತು ಹೊಸ ದಾಖಲೆ: ಏನದು?
(Virat kohli hugs Coach Ravi Shastri and emotional after the India match against Namibia in T20 World Cup)