Virat Kohli: ಇದಕ್ಕೆ ಕಿಂಗ್ ಕೊಹ್ಲಿಯನ್ನು ಚೇಸ್ ಮಾಸ್ಟರ್ ಅನ್ನೋದು..!
T20 World Cup 2022: ಪಾಕಿಸ್ತಾನ ವಿರುದ್ಧದ ಈ ಇನ್ನಿಂಗ್ಸ್‌ನ ನಂತರ , ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಟಿ20 ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
Virat Kohli
Follow us on
T20 World Cup 2022: ಬರೋಬ್ಬರಿ 43 ಎಸೆತಗಳಲ್ಲಿ ಅರ್ಧಶತಕ…ಆದರೆ ಅಂತಿಮವಾಗಿ 53 ಎಸೆತಗಳಲ್ಲಿ 82 ರನ್. ಇದು ಪಾಕಿಸ್ತಾನ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ (Virat Kohli) ಬ್ಯಾಟಿಂಗ್ ವೈಖರಿಯ ಸಂಕ್ಷಿಪ್ತ ರೂಪ. ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ ಅಂತಿಮ ಹಂತದಲ್ಲಿ ರೌದ್ರನರ್ತನ ತೋರಿದ್ದರು. ಈ ಅಜೇಯ ಅಬ್ಬರದ ಅಂತಿಮ ಫಲಿತಾಂಶ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು. ಈ ಮೂಲಕ ಮತ್ತೊಮ್ಮೆ ಕಿಂಗ್ ಕೊಹ್ಲಿ ತನ್ನನ್ನೇಕೆ ಚೇಸ್ ಮಾಸ್ಟರ್ ಎಂದು ಕರೆಯುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಏಕೆಂದರೆ….
– ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ 10 ಇನಿಂಗ್ಸ್ ಆಡಿದ್ದಾರೆ. ಅದರಲ್ಲಿ ಅವರು 8 ಬಾರಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್ಮನ್ ಆಗಿ ಹಿಂತಿರುಗಿದ್ದರು.
– ಇನ್ನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಚೇಸಿಂಗ್ ವಿಷಯದಲ್ಲಿ ವಿರಾಟ್ ಕೊಹ್ಲಿ 167.50 ಸರಾಸರಿ ಹೊಂದಿದ್ದಾರೆ.
– ವಿರಾಟ್ ಕೊಹ್ಲಿ ಪಾಕಿಸ್ತಾನ್ ವಿರುದ್ಧದ 6 ಪಂದ್ಯಗಳಲ್ಲಿ ರನ್ ಚೇಸ್ ಮಾಡಿದ್ದಾರೆ. ವಿಶೇಷ ಎಂದರೆ ಈ ಎಲ್ಲಾ ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದಿದೆ. ಹಾಗೆಯೇ ಎಲ್ಲಾ ಬಾರಿ ಕೂಡ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದು ಕಿಂಗ್ ಕೊಹ್ಲಿ.
– ಟಿ20 ವಿಶ್ವಕಪ್‌ನಲ್ಲಿ ತಂಡವೊಂದರ ವಿರುದ್ಧ ಗರಿಷ್ಠ ಸ್ಕೋರ್ ಮಾಡಿದ ದಾಖಲೆಯನ್ನೂ ಕೊಹ್ಲಿ ಮಾಡಿದ್ದಾರೆ. ಅವರು ಪಾಕಿಸ್ತಾನದ ವಿರುದ್ಧ ಐದು ಬಾರಿ ಟಾಪ್ ಸ್ಕೋರರ್ ಹೊರಹೊಮ್ಮಿದ್ದಾರೆ.
– ಚೇಸಿಂಗ್ ವೇಳೆ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೊಹ್ಲಿ ಅಜೇಯರಾಗಿ ಉಳಿದಿದ್ದು ಇದು 18ನೇ ಬಾರಿ. ಈ 18 ಬಾರಿಯೂ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿರುವುದು ವಿಶೇಷ. ಅಂದರೆ ಕಿಂಗ್ ಕೊಹ್ಲಿ ಅಜೇಯರಾಗಿ ಉಳಿದರೆ ಭಾರತ ತಂಡಕ್ಕೆ ಗೆಲುವು ಗ್ಯಾರಂಟಿ.
– ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಐದು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರ ಇದು ನಾಲ್ಕನೇ ಅರ್ಧಶತಕವಾಗಿದೆ. 2014ರ ಟಿ20 ವಿಶ್ವಕಪ್‌ನಲ್ಲಿ ಮಾತ್ರ ಪಾಕಿಸ್ತಾನ ವಿರುದ್ಧ ಕೊಹ್ಲಿ 50ರ ಗಡಿ ದಾಟಿರಲಿಲ್ಲ. ಇನ್ನು 2012, 2016, 2021 ಮತ್ತು ಈಗ 2022 ರಲ್ಲಿ ಪಾಕಿಸ್ತಾನದ ವಿರುದ್ಧ ಅರ್ಧಶತಕಗಳನ್ನು ಗಳಿಸಿ ಮಿಂಚಿದ್ದಾರೆ.
– ಟಿ20 ವಿಶ್ವಕಪ್‌ನಲ್ಲಿ, ಕೊಹ್ಲಿ ಪಾಕಿಸ್ತಾನದ ವಿರುದ್ಧ ಐದು ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ನಾಲ್ಕು ಬಾರಿ ಅಜೇಯರಾಗಿ ಉಳಿದಿದ್ದರು. ಅಲ್ಲದೆ ಈ ನಾಲ್ಕು ಪಂದ್ಯಗಳನ್ನೂ ಸಹ ಟೀಮ್ ಇಂಡಿಯಾವೇ ಗೆದ್ದಿದೆ.
– ಟಿ20 ವಿಶ್ವಕಪ್‌ನ ಐದು ಇನ್ನಿಂಗ್ಸ್‌ಗಳಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿ ಒಟ್ಟು 308 ರನ್ ಗಳಿಸಿದ್ದಾರೆ. ಈ ವೇಳೆ ನಾಲ್ಕು ಅರ್ಧ ಶತಕ, ಒಂಬತ್ತು ಸಿಕ್ಸರ್ ಮತ್ತು 30 ಬೌಂಡರಿಗಳನ್ನು ಬಾರಿಸಿದ್ದಾರೆ.
– ಪಾಕಿಸ್ತಾನ ವಿರುದ್ಧದ ಈ ಇನ್ನಿಂಗ್ಸ್‌ನ ನಂತರ , ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಟಿ20 ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (3741) ಅವರನ್ನು ಹಿಂದಿಕ್ಕಿ ಕೊಹ್ಲಿ ಇದೀಗ 3794 ರನ್ಗಳಿಸುವ ಮೂಲಕ ನಂಬರ್ 1 ಸ್ಥಾನಕ್ಕೇರಿದ್ದಾರೆ.