VIDEO: ಭಾರತಕ್ಕೆ ಗೆಲುವು ತಂದುಕೊಟ್ಟು ಕಣ್ಣೀರಿಟ್ಟ ಕೊಹ್ಲಿ..!
Virat Kohli: ಈ ರೋಚಕ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಸಂಭ್ರಮಿಸಿದರೂ ಆ ಬಳಿಕ ಭಾವುಕರಾದರು. ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ಖುಷಿಯಲ್ಲೇ ಕಣ್ಣೀರಾದರು.
T20 World Cup 2022: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಬದ್ಧವೈರಿ ಪಾಕಿಸ್ತಾನ್ (India vs Pakistan) ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ರೋಚಕ ಗೆಲುವು ದಾಖಲಿಸಿತು. ಈ ಗೆಲುವಿನ ಹೀರೋ ವಿರಾಟ್ ಕೊಹ್ಲಿ (Virat Kohli). ಏಕೆಂದರೆ ಕೇವಲ 31 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾವನ್ನು ಅಜೇಯರಾಗಿ ಉಳಿದು ಕೊಹ್ಲಿ ಗುರಿ ಮುಟ್ಟಿಸಿದ್ದರು. ಪಾಕಿಸ್ತಾನ್ ನೀಡಿದ 160 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 31 ರನ್ಗಳಿಗೆ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾಗ್ಯೂ ಸ್ಥೈರ್ಯ ಕಳೆದುಕೊಳ್ಳದ ಕೊಹ್ಲಿ ಏಕಾಂಗಿಯಾಗಿ ಹೋರಾಟ ಮುಂದುವರೆಸಿದರು.
ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ (40) ಜೊತೆಗೂಡಿ 113 ರನ್ಗಳ ಜೊತೆಯಾಟವಾಡಿದರು. ಆದರೆ ಅಂತಿಮ ಹಂತದವರೆಗೂ ಪಾಂಡ್ಯಗೆ ಬಿರುಸಿನ ಬ್ಯಾಟಿಂಗ್ ನಡೆಸಲು ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ ನಿರ್ಣಾಯಕ ಓವರ್ಗಳ ವೇಳೆ ಅಬ್ಬರಿಸಲಾರಂಭಿಸಿದ ವಿರಾಟ್ ಕೊಹ್ಲಿ ಇಡೀ ಪಂದ್ಯ ಚಿತ್ರಣ ಬದಲಿಸಿದರು. ಅದರಂತೆ ಕೊನೆಯ ಓವರ್ನಲ್ಲಿ 16 ರನ್ಗಳ ಟಾರ್ಗೆಟ್ ಪಡೆದ ಭಾರತಕ್ಕೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಗೆಲುವಿನ ಆಸೆಯನ್ನು ಕೊಹ್ಲಿ ಮತ್ತಷ್ಟು ಹೆಚ್ಚಿಸಿದರು. ಅಲ್ಲದೆ ಕೊನೆಯ ಓವರ್ನಲ್ಲಿ ಬೌಲರ್ನ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದ ಕೊಹ್ಲಿ ಗೆಲುವನ್ನು ಖಚಿತಪಡಿಸಿದರು. ಅಂತಿಮ ಎಸೆತದಲ್ಲಿ ಅಶ್ವಿನ್ 1 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿತು.
ಈ ರೋಚಕ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಸಂಭ್ರಮಿಸಿದರೂ ಆ ಬಳಿಕ ಭಾವುಕರಾದರು. ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ಖುಷಿಯಲ್ಲೇ ಕಣ್ಣೀರಾದರು. ಇತ್ತ ಕಿಂಗ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ಕೂಡ ಮೈದಾನಕ್ಕೆ ಓಡಿ ಬಂದು ಕೊಹ್ಲಿ ಭಾವುಕತೆಯಲ್ಲಿ ಪಾಲುದಾರರಾದರು.
That celebration and those happy tears says it all ♥️ King Kohli ?#ViratKohli pic.twitter.com/klO6HjPvdn
— Anu| Hugivsashit 😉 (@dazzlers_ss) October 23, 2022
ಇದೀಗ ಕ್ರಿಕೆಟ್ ಅಂಗಳದ ಆಕ್ರಮಣಕಾರಿ ಆಟಗಾರನೆಂದೇ ಖ್ಯಾತರಾಗಿರುವ ಕಿಂಗ್ ಕೊಹ್ಲಿಯ ಕಣ್ಣೀರಿನ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
He was in tears, we have never seen him in tears. The man who is the reason of 130 crore people’s emotions and cheerfulness. what a legend he is ❤️ #INDvPAK #ViratKohli? #GOAT? pic.twitter.com/I68GTRP0pm
— Sahil Sharma (@sharma17sahil) October 23, 2022
ನಾನು ವಿರಾಟ್ ಕೊಹ್ಲಿಯನ್ನು ತುಂಬಾ ವರ್ಷಗಳಿಂದ ನೋಡಿದ್ದೇನೆ. ಆದರೆ ಯಾವತ್ತೂ ಅವರ ಕಣ್ಣಲ್ಲಿ ಕಣ್ಣೀರು ನೋಡಿರಲಿಲ್ಲ. ಇವತ್ತು ನೋಡಿದೆ. ಇದು ಅವಿಸ್ಮರಣೀಯವಾಗಿತ್ತು ಎಂದು ಖ್ಯಾತ ಕ್ರಿಕೆಟ್ ಕಾಮೆಂಟೇಟರ್ ಹರ್ಷ ಬೋಗ್ಲೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಏಕಾಂಗಿ ಹೋರಾಟದ ಮೂಲಕ ಕಿಂಗ್ ಕೊಹ್ಲಿ ಇಡೀ ಭಾರತೀಯರ ಖುಷಿಗೆ ಕಾರಣರಾಗಿದ್ದಾರೆ. ಅದೇ ಖುಷಿಯಲ್ಲಿ ಅತ್ತ ಕೊಹ್ಲಿ ಆನಂದಬಾಷ್ಪ ಸುರಿಸಿದರೆ, ಇತ್ತ ಅಭಿಮಾನಿಗಳು ಪಟಾಕಿಗಳ ಸುರಿಮಳೆ ಸುರಿಸಿರುವುದು ವಿಶೇಷ.