ಮೊಹಾಲಿಯಲ್ಲಿ ಚಾಲನೆ ಸಿಕ್ಕಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತಾದರೂ ನಂತರ ಚೇತರಿಸಿಕೊಳ್ಳುತ್ತಿದೆ. ರೋಹಿತ್ ಶರ್ಮಾ ಚೊಚ್ಚಲ ಟೆಸ್ಟ್ ನಾಯಕನಾಗಿ ಬ್ಯಾಟಿಂಗ್ನಲ್ಲಿ ವಿಫಲವಾದರು. 28 ಎಸೆತಗಳಲ್ಲಿ 29 ರನ್ ಗಳಿಸಿ ಹಿಟ್ಮ್ಯಾನ್ ಪೆವಿಲಿಯನ್ ಸೇರಿಕೊಂಡರು. ಈ ಟೆಸ್ಟ್ ಪಂದ್ಯ ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಮಹತ್ವದ್ದು. ಯಾಕಂದ್ರೆ ಇದು ಕೊಹ್ಲಿಯ 100ನೇ ಟೆಸ್ಟ್ ಪಂದ್ಯ. ಈ ಮೂಲಕ ವಿಶ್ವದಲ್ಲಿ 100 ಟೆಸ್ಟ್ ಪಂದ್ಯ ಆಡಿದ ಕೆಲವೇ ಕೆಲವು ದಿಗ್ಗಜ ಆಟಗಾರರ ಸಾಲಿಗೆ ವಿರಾಟ್ ಕೂಡ ಇದೀಗ ಸೇರ್ಪಡೆಯಾಗಿದ್ದಾರೆ. ಶತಕದ ಟೆಸ್ಟ್ ಪಂದ್ಯವಾಡುತ್ತಿರುವ ಕೊಹ್ಲಿಗೆ ಪಂದ್ಯ ಆರಂಭಕ್ಕೂ ಮುನ್ನ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕೈಯಿಂದ ಬಿಸಿಸಿಐ ವಿಶೇಷ ಸನ್ಮಾನ ಏರ್ಪಡಿಸಿತ್ತು. ಮೊಹಾಲಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದ ಎಲ್ಲ ಆಟಗಾರರು ಮತ್ತು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ (Anushka Sharma) ಕೂಡ ಉಪಸ್ಥಿತರಿದ್ದರು.
ಕೊಹ್ಲಿಗೆ ಕೋಚ್ ರಾಹುಲ್ ದ್ರಾವಿಡ್ ಕೈಯಿಂದ ವಿಶೇಷ 100ನೇ ಟೆಸ್ಟ್ ಕ್ಯಾಪ್ ಅನ್ನು ಗೌರವ ಪೂರ್ವಕವಾಗಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಕೊಹ್ಲಿ ಪಕ್ಕದಲ್ಲೇ ಅನುಷ್ಕಾ ಕೂಡ ಇದ್ದರು. ಕ್ಯಾಪ್ ನೀಡಿದ ಬಳಿಕ ಕೊಹ್ಲಿ ಅವರು ಅನುಷ್ಕಾ ಬಳಿ ತೆರಳಿ ಹಗ್ ಮಾಡಿ ಮುತ್ತಿಟ್ಟರು. ಕಠಿಣದ ಸಂದರ್ಭವಿರಲಿ ಅಥವಾ ಖುಷಿಯ ವಿಚಾರ ಇರಲಿ ಸದಾ ಕೊಹ್ಲಿ ಜೊತೆಗೇ ಇರುವ ಅನುಷ್ಕಾ ಕೂಡ ಕೊಹ್ಲಿಯನ್ನು ಹಗ್ ಮಾಡಿ ಶುಭಕೋರಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
What a moment to commemorate his 100th Test appearance in whites ??
Words of appreciation from the Head Coach Rahul Dravid and words of gratitude from @imVkohli??#VK100 | #INDvSL | @Paytm pic.twitter.com/zfX0ZIirdz
— BCCI (@BCCI) March 4, 2022
Beautiful picture ?
Virat Kohli’s 100th Test Match Special day ?? #ViratKohli #GOAT? #AnushkaSharma pic.twitter.com/MWHoQoeIog— Cricpremi (@cricpremi) March 4, 2022
ನನ್ನ ಬಾಲ್ಯದ ಹೀರೋ ದ್ರಾವಿಡ್ :
ದ್ರಾವಿಡ್ ಅವರಿಂದ ವಿಶೇಷ ಕ್ಯಾಪ್ ಸ್ವೀಕರಿಸಿ ಮಾತನಾಡಿದ ಕೊಹ್ಲಿ, “ಇದು ನನ್ನ ವಿಶೇಷ ಕ್ಷಣ. ನನ್ನ ಪತ್ನಿ, ಸಹೋದರ, ಕೋಚ್ ಮತ್ತು ಇಡೀ ಕುಟುಂಬವೇ ಇಲ್ಲಿದೆ. ಎಲ್ಲರಿಗೂ ಇದು ಹೆಮ್ಮೆಯ ಕ್ಷಣ. ಇದು ತಂಡವಾಗಿ ಆಡಿದ್ದಕ್ಕೆ ಸಿಕ್ಕ ಪ್ರತಿಫಲ. ನಾನು ಬಿಸಿಸಿಐಗೆ ಧನ್ಯವಾದ ಹೇಳಬೇಕು. ರಾಹುಲ್ ಭಾಯ್, ನೀವು ನನ್ನ ಬಾಲ್ಯದ ಹೀರೋ. ನಿಮ್ಮ ಜೊತೆ ಅಂಡರ್ 19 ಕ್ರಿಕೆಟ್ ವೇಳೆ ತೆಗೆಸಿಕೊಂಡ ಫೋಟೋ ಈಗಲೂ ನನ್ನ ಬಳಿಯಿದೆ. ನಿಮ್ಮ ಕೈಯಿಂದಲೇ ಈವತ್ತು ಈ ಗೌರವ ಸಿಕ್ಕಿದ್ದು ನನ್ನ ಪಾಲಿಗೆ ವಿಶೇಷ. ಈ ಉಡುಗೊರೆ ಸ್ವೀಕರಿಸಲು ಅವರಿಗಿಂತ ವಿಶೇಷ ವ್ಯಕ್ತಿಯಿಂದ ಮತ್ತೊಬ್ಬರಿಲ್ಲ,” ಎಂದು ಹೇಳಿದರು.
ಕೋಚ್ ರಾಹುಲ್ ದ್ರಾವಿಡ್ ಕೂಡ ಕೊಹ್ಲಿಗೆ ವಿಶೇಷ ಕ್ಯಾಪ್ ನೀಡುವ ಸಂದರ್ಭದಲ್ಲಿ ಕೊಹ್ಲಿ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. “ಇದು ವಿರಾಟ್ಗೆ ಸಿಕ್ಕಂತಹ ಅತ್ಯಂತ ಅರ್ಹ ಗೌರವ. ಇದನ್ನು ಅರ್ಹತೆಯಿಂದಲೇ ಸಂಪಾದಿಸಿದ್ದೀರಿ. ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಹೇಳಿದಂತೆಯೇ ಈ ಸಂಭ್ರಮವನ್ನು ದ್ವಿಗುಣಗೊಳಿಸೋಣ”, ಎಂದು ದ್ರಾವಿಡ್ ಹೇಳಿದರು.
ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೊದಲನೇ ದಿನದ ಭೋಜನ ವಿರಾಮದ ಹೊತ್ತಿಗೆ 26 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದೆ. ಹನುಮ ವಿಹಾರಿ 30 ರನ್ ಗಳಿಸಿ ಮತ್ತು ವಿರಾಟ್ ಕೊಹ್ಲಿ 15 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಆರಂಭಿಕರಾಗಿ ಕಣಕ್ಕೆ ಇಳಿದ ನಾಯಕ ರೋಹಿತ್ ಶರ್ಮಾ(29) ಹಾಗೂ ಮಯಾಂಕ್ ಅಗರ್ವಾಲ್(33) ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 52ರನ್ ಗಳಿಸಿತ್ತು. ಆ ಮೂಲಕ ತಂಡಕ್ಕೆ ಉತ್ತಮ ಆರಂಭ ಕೊಟ್ಟಿತ್ತು. ಆದರೆ ಲಹಿರು ಕುಮಾರ ಎಸೆತದಲ್ಲಿ ರೋಹಿತ್ ಪುಲ್‌ಶಾಟ್‌ಗೆ ಕೈಹಾಕಿ ಔಟಾದರೆ, ಅಗರ್ವಾಲ್ ಲಸಿತ್ ಎಂಬುಲ್ದೇನಿಯ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದರು.
Virat Kohli 100th Tets: ಕೊಹ್ಲಿಗೆ ವಿಶೇಷವಾದ 100ನೇ ಟೆಸ್ಟ್ ಕ್ಯಾಪ್ ನೀಡುವಾಗ ದ್ರಾವಿಡ್ ಏನು ಹೇಳಿದರು ಕೇಳಿ
Devdutt Padikkal: ಆರ್ಸಿಬಿ ಕೈಬಿಟ್ಟಿದ್ದೆ ತಡ ಅಬ್ಬರಿಸಿದ ಪಡಿಕ್ಕಲ್: ದ್ವಿಶತಕದತ್ತ ದೇವದತ್ ಕಣ್ಣು