IPL 2022: ನಡುರಸ್ತೆಯಲ್ಲೇ ಬಸ್ ನಿಲ್ಲಿಸಿದ ಧೋನಿ! ವಾಹನ ಸವಾರರು ಹೈರಾಣ, ಟ್ರಾಫಿಕ್ ಪೊಲೀಸ್ ಗರಂ; ವಿಡಿಯೋ
MS Dhoni: ನಡುರಸ್ತೆಯಲ್ಲಿ ಏಕಾಏಕಿ ಬ್ರೇಕ್ ಹಾಕಿದ ಧೋನಿ ರಿವರ್ಸ್ ಗೇರ್ ಹಾಕಿ ಬಸ್ ಹಿಂದಕ್ಕೆ ಹೋಗುವಂತೆ ಮಾಡಿದ್ದಾರೆ. ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಂ ಆಗಿದ್ದು, ಬಸ್ ಹಿಂದಕ್ಕೆ ಚಲಿಸುತ್ತಿದ್ದಂತೆ ಬಸ್ ಹಿಂದೆ ನಿಂತಿದ್ದ ವಾಹನಗಳೆಲ್ಲ ಹಿಂದಕ್ಕೆ ಚಲಿಸಲಾರಂಭಿಸಿವೆ.
ಐಪಿಎಲ್ (IPL 2022) ಹರಾಜಿನಲ್ಲಿ ಆಟಗಾರರ ಮೇಲೆ ಲಕ್ಷಾಂತರ ರೂ. ಹಣದ ಮಳೆ ಸುರಿಯಲಾಯಿತು. ಇದೀಗ ಶೀಘ್ರದಲ್ಲೇ ಆ ಆಟಗಾರರು ಮೈದಾನದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ. ಈಗ 10 ತಂಡಗಳು ಐಪಿಎಲ್ (IPL 2022 Promo) 15 ನೇ ಸೀಸನ್‌ಗೆ ಪ್ರವೇಶಿಸಲಿವೆ, ಇದು ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಈ ಬಾರಿಯ ಲೀಗ್ ನಿಜಕ್ಕೂ ಅದ್ಭುತವಾಗಿರಲಿದೆ ಏಕೆಂದರೆ ಮುಂಬೈ, ಪುಣೆಯ ಸ್ಟೇಡಿಯಂಗಳಲ್ಲಿ ಐಪಿಎಲ್ ನಡೆಯಲಿದ್ದು, ಪ್ರೇಕ್ಷಕರ ಪ್ರವೇಶಕ್ಕೂ ಅನುಮತಿ ನೀಡಲಾಗಿದೆ. ಐಪಿಎಲ್ ಹೊಸ ಸೀಸನ್ಗೂ ಮುನ್ನ ಟೂರ್ನಿಯ ಪ್ರೋಮೋ ಕೂಡ ಬಿಡುಗಡೆಯಾಗಿದ್ದು, ಎಂದಿನಂತೆ ಇದರಲ್ಲಿ ಧೋನಿ ಅದ್ಭುತ ಲುಕ್ ಕಾಣಿಸಿಕೊಂಡಿದೆ. ಈ ಬಾರಿ ಧೋನಿ ಬಸ್ ಡ್ರೈವರ್ ಆಗಿದ್ದು, ಎಂದಿನಂತೆ ಈ ಬಾರಿಯೂ ಐಪಿಎಲ್‌ನ ಪ್ರೋಮೋ ಅದ್ಭುತವಾಗಿದೆ.
ಐಪಿಎಲ್ 2022 ರ ಪ್ರೋಮೋದಲ್ಲಿ ಧೋನಿ ಬಸ್ ಓಡಿಸುತ್ತಿರುವುದನ್ನು ಕಾಣಬಹುದು. ನಡುರಸ್ತೆಯಲ್ಲಿ ಏಕಾಏಕಿ ಬ್ರೇಕ್ ಹಾಕಿದ ಧೋನಿ ರಿವರ್ಸ್ ಗೇರ್ ಹಾಕಿ ಬಸ್ ಹಿಂದಕ್ಕೆ ಹೋಗುವಂತೆ ಮಾಡಿದ್ದಾರೆ. ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಂ ಆಗಿದ್ದು, ಬಸ್ ಹಿಂದಕ್ಕೆ ಚಲಿಸುತ್ತಿದ್ದಂತೆ ಬಸ್ ಹಿಂದೆ ನಿಂತಿದ್ದ ವಾಹನಗಳೆಲ್ಲ ಹಿಂದಕ್ಕೆ ಚಲಿಸಲಾರಂಭಿಸಿವೆ. ನಂತರ ಧೋನಿ ಮಧ್ಯ ರಸ್ತೆಯಲ್ಲಿ ಬಸ್ ನಿಲ್ಲಿಸಿ ಡ್ರೈವಿಂಗ್ ಸೀಟಿನಿಂದ ಕೆಳಗಿಳಿದು ಬಸ್ಸಿನ ಮೆಟ್ಟಿಲುಗಳ ಮೇಲೆ ಕುಳಿತುಕೊಂಡಿದ್ದಾರೆ. ವಾಸ್ತವವಾಗಿ ಧೋನಿ ಐಪಿಎಲ್‌ನ ಸೂಪರ್ ಓವರ್ ವೀಕ್ಷಿಸಲು ಇದೆಲ್ಲವನ್ನೂ ಮಾಡುತ್ತಾರೆ. ನಡುರಸ್ತೆಯಲ್ಲಿ ಬಸ್ ನಿಂತಿರುವುದನ್ನು ನೋಡಿದ ಟ್ರಾಫಿಕ್ ಪೊಲೀಸ್ ಅಧಿಕಾರಿ ಧೋನಿ ಬಳಿ ಬಂದು ಇದಕ್ಕೆ ಕಾರಣ ಕೇಳುತ್ತಾರೆ. ಆಗ ಇದಕ್ಕೆ ಉತ್ತರಿಸಿದ ಧೋನಿ, ಸೂಪರ್ ಓವರ್ ನಡೆಯುತ್ತಿದ ಅದನ್ನು ನೋಡಲು ಹೀಗೆ ಮಾಡಿದೆ ಎಂಬ ಅರ್ಥದಲ್ಲಿ ಧೋನಿ ಉತ್ತರಿಸಿದ್ದಾರೆ.
When it’s the #TATAIPL, fans can go to any extent to catch the action – kyunki #YehAbNormalHai!
What are you expecting from the new season?@StarSportsIndia | @disneyplus pic.twitter.com/WPMZrbQ9sd
— IndianPremierLeague (@IPL) March 4, 2022
ಐಪಿಎಲ್ 2022ರ ವಿಶೇಷತೆ ಏನು? ಈ ಬಾರಿ ಐಪಿಎಲ್ ಅನ್ನು ವಿಭಿನ್ನ ಸ್ವರೂಪದಲ್ಲಿ ಆಡಲಾಗುವುದು. 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೊದಲ ಗುಂಪಿನಲ್ಲಿವೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡನೇ ಗುಂಪಿನಲ್ಲಿವೆ.
ಹೊಸ ಸ್ವರೂಪದ ಪ್ರಕಾರ, ಲೀಗ್ ಹಂತದಲ್ಲಿ, ಐಪಿಎಲ್ ತಂಡವು 5 ಎದುರಾಳಿಗಳ ವಿರುದ್ಧ ತಲಾ 2 ಪಂದ್ಯಗಳನ್ನು ಮತ್ತು 4 ತಂಡಗಳ ವಿರುದ್ಧ ತಲಾ 1 ಪಂದ್ಯಗಳನ್ನು ಆಡುತ್ತದೆ. ಪ್ರತಿ ತಂಡವು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನು ಆಡುತ್ತದೆ. ಅದರ ನಂತರ ಪ್ಲೇ ಆಫ್‌ಗೆ ತಂಡಗಳನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ:IPL 2022: CSK ಆಟಗಾರರ ಜೊತೆ ಸೂರತ್ಗೆ ಪ್ರಯಾಣ ಬೆಳೆಸಿದ ಧೋನಿ! ಏನೀದು ಮಹೀ ಮಾಸ್ಟರ್ ಪ್ಲ್ಯಾನ್?