IPL 2022: CSK ಆಟಗಾರರ ಜೊತೆ ಸೂರತ್ಗೆ ಪ್ರಯಾಣ ಬೆಳೆಸಿದ ಧೋನಿ! ಏನೀದು ಮಹೀ ಮಾಸ್ಟರ್ ಪ್ಲ್ಯಾನ್?
IPL 2022: ಪ್ರತಿ ಐಪಿಎಲ್ ಸೀಸನ್ಗೂ ಚೆನ್ನೈ ಸೂಪರ್ ಕಿಂಗ್ಸ್, ಚೆನ್ನೈನಲ್ಲೇ ಪ್ರಾಕ್ಟೀಸ್ ಮಾಡುತ್ತಿತ್ತು. ಆದ್ರೀಗ ಇದೆ ಮೊದಲ ಬಾರಿಗೆ ಧೋನಿ ಟೀಂ ಸೂರತ್ಗೆ ಪ್ರಯಾಣ ಬೆಳಸಲಿದೆ. ಸೂರತ್ನಲ್ಲಿ ಮಹೇಂದ್ರನ ಬಳಗ ಈ ಬಾರಿಯ ಐಪಿಎಲ್ಗೆ ತಾಲೀಮು ನಡೆಸಲಿದೆ.
2020 ರ ಐಪಿಎಲ್ (IPL 2022)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮೊದಲ ಬಾರಿಗೆ ಲೀಗ್‌ನಿಂದಲೇ ನಿರ್ಗಮಿಸಿತ್ತು. ಅಲ್ಲಿಗೆ ಐಪಿಎಲ್ನಲ್ಲಿ ಧೋನಿ (MS Dhoni) ಖೇಲ್ ಖತಂ ಅಂತಾ ದಿಗ್ಗಜ ಕ್ರಿಕೆಟಿಗರೇ ಭವಿಷ್ಯ ನುಡಿದಿದ್ರು. ಆದ್ರೆ 2021 ರಲ್ಲಿ ಧೋನಿ ಮತ್ತೊಮ್ಮೆ ಚರಿತ್ರೆ ಮರು ಸೃಷ್ಟಿಸಿದ್ರು. ಈ ಬಾರಿಯ ಐಪಿಎಲ್ನಲ್ಲೂ ಧೋನಿ ಚರಿತ್ರೆ ಸೃಷ್ಟಿಸಲು ಸಜ್ಜಾಗಿದ್ದಾರೆ. ಮತ್ತೊಮ್ಮೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿ ಮುಂಬೈ ದಾಖಲೆ ಸರಿಗಟ್ಟಲು ತಲೈವಾ ಸರ್ವ ಸನ್ನದ್ಧರಾಗಿದ್ದಾರೆ. ಐಪಿಎಲ್ ಆರಂಭಕ್ಕೆ ಇನ್ನೊಂದು ತಿಂಗಳು ಇರುವಾಗಲೇ, ಚಾಂಪಿಯನ್ ಪಟ್ಟ ಅಲಂಕರಿಸುವ ರೂಟ್ ಮ್ಯಾಪ್ ಅನ್ನ ಧೋನಿ ಸಿದ್ದಪಡಿಸಿದ್ದಾರೆ. ಇದೇ ಕಾರಣಕ್ಕೆ ಧೋನಿ ಚೆನ್ನೈನಿಂದ ಸೂರತ್ಗೆ ಪ್ರಯಾಣ ಬೆಳಸಲಿದ್ದಾರೆ.
CSK ಆಟಗಾರರ ಜೊತೆ ಸೂರತ್ಗೆ ಪ್ರಯಾಣ ಬೆಳೆಸಿದ ಧೋನಿ!
ಪ್ರತಿ ಐಪಿಎಲ್ ಸೀಸನ್ಗೂ ಚೆನ್ನೈ ಸೂಪರ್ ಕಿಂಗ್ಸ್, ಚೆನ್ನೈನಲ್ಲೇ ಪ್ರಾಕ್ಟೀಸ್ ಮಾಡುತ್ತಿತ್ತು. ಆದ್ರೀಗ ಇದೆ ಮೊದಲ ಬಾರಿಗೆ ಧೋನಿ ಟೀಂ ಸೂರತ್ಗೆ ಪ್ರಯಾಣ ಬೆಳಸಲಿದೆ. ಸೂರತ್ನಲ್ಲಿ ಮಹೇಂದ್ರನ ಬಳಗ ಈ ಬಾರಿಯ ಐಪಿಎಲ್ಗೆ ತಾಲೀಮು ನಡೆಸಲಿದೆ. ಧೋನಿಯ ಈ ನಡೆಯ ಹಿಂದೆ ಚಾಂಪಿಯನ್ ಪಟ್ಟ ಅಲಂಕರಿಸುವ ಮಾಸ್ಟರ್ ಪ್ಲ್ಯಾನ್ ಅಡಗಿದೆ.
ಸೂರತ್ನಲ್ಲಿ ಪ್ರಾಕ್ಟೀಸ್.. ಏನೀದು ಧೋನಿ ಮಾಸ್ಟರ್ ಪ್ಲ್ಯಾನ್?
ಇನ್ನೇನು ಕೆಲವೇ ದಿನಗಳಲ್ಲಿ ಅಭ್ಯಾಸವನ್ನು ಆರಂಭಿಸಲಿರುವ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಸೂರತ್ ನಗರದ ಲಾಲ್‌ಭಾಯ್ ಕಂಟ್ರ್ಯಾಕ್ಟರ್ ಮೈದಾನ ತಲುಪಲಿದ್ದಾರೆ. ಚೆಪಾಕ್ ಮೈದಾನ ಬಿಟ್ಟು CSK ಟೀಮ್ ಈ ಕ್ರೀಡಾಂಗಣಕ್ಕೆ ಬರಲು ಮಹತ್ತರವಾದ ಕಾರಣವಿದೆ. ಮುಂಬೈ ಮೈದಾನದಲ್ಲಿ ಬಳಸಿರುವ ಮಣ್ಣನ್ನೇ ಈ ಕ್ರೀಡಾಂಗಣದ ಪಿಚ್ ತಯಾರಿಸಲು ಬಳಸಲಾಗಿದೆ. ಈ ವಿಷಯ ಗೊತ್ತಾಗ್ತಿದ್ದಂತೆ ಧೋನಿ ಈ ಬಾರಿಯ ಅಭ್ಯಾಸವನ್ನು ಸೂರತ್ನಲ್ಲಿ ನಡೆಸಲು ತೀರ್ಮಾನಿಸಿದ್ದಾರೆ. ಇಲ್ಲಿ ಅಭ್ಯಾಸ ನಡೆಸಿದ್ರೆ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂಬ ಮುಂದಾಲೋಚನೆಯಿಂದ ಧೋನಿ ಈ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದಾರೆ.
ಇನ್ನು ಬಿಸಿಸಿಐ ಈ ಬಾರಿಯ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಮುಂಬೈ ಮತ್ತು ಪುಣೆಯಲ್ಲಿ ನಡೆಸಲಿದೆ. ಇದು ಮುಂಬೈ ಇಂಡಿಯನ್ಸ್ ತಂಡಕ್ಕೆ ಅಡ್ವಾಂಟೇಜ್ ಆಗಲಿದೆ ಎಂದು, ಉಳಿದೆಲ್ಲಾ ಫ್ರಾಂಚೈಸಿಗಳು ಅಸಮಾಧಾನ ವ್ಯಕ್ತಪಡಿಸಿದ್ವು. ಇದೇ ಕಾರಣಕ್ಕೆ ಧೋನಿ, ಮುಂಬೈ ಮಣ್ಣಿನಿಂದ ಸಿದ್ದಪಡಿಸಿರುವ ಸೂರತ್ನಲ್ಲಿ ಧೋನಿ ಚೆನ್ನೈ ತಂಡದ ಆಟಗಾರರೊಂದಿಗೆ ಪ್ರಾಕ್ಟೀಸ್ ಮಾಡಲಿದ್ದಾರೆ.
ಸೂರತ್ ಜಿಲ್ಲಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ನೈನೇಶ್ ದೇಸಾಯಿ ಕೂಡ ಈ ಸುದ್ದಿಯನ್ನ ಸ್ಪಷ್ಟಪಡಿಸಿದ್ದಾರೆ. ಧೋನಿ, ಡ್ವೇನ್ ಬ್ರಾವೊ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಚೆನ್ನೈ ಆಟಗಾರರು ಇಲ್ಲಿ ಅಭ್ಯಾಸ ನಡೆಸಲಿದ್ದಾರೆ. ಮುಂಬೈ ಕ್ರೀಡಾಂಗಣಗಳಲ್ಲಿ ಬಳಸಲಾಗಿರುವ ಮಣ್ಣನ್ನೇ ಇಲ್ಲಿಯೂ ಬಳಸಿರುವುದರಿಂದ ಚೆನ್ನೈ ಫ್ರಾಂಚೈಸಿ ಈ ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಂಡಿದೆ ಎಂದಿದ್ದಾರೆ.
ಐಪಿಎಲ್ಗೂ ಮುನ್ನ ಬಸ್ ಡ್ರೈವರ್.. ಧೋನಿ ಹೊಸ ಅವತಾರ
ಹೀಗೆ ಚೆನ್ನೈ ಬದಲು ಸೂರತ್ನಲ್ಲಿ ಅಭ್ಯಾಸ ನಡೆಸಲು ನಿರ್ಧರಿಸುವ ಮೂಲಕ, ಸದ್ದು ಮಾಡಿರುವ ಧೋನಿ, ಇದೀಗ ಐಪಿಎಲ್ ಟೀಸರ್ ಪ್ರೋಮೋದಲ್ಲೂ ಸದ್ದು ಮಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಬಿಡುಗಡೆ ಮಾಡಿರುವ ಟೀಸರ್‌ನ ಪ್ರೋಮೋವೊಂದರಲ್ಲಿ ಉದ್ದುದ್ದಾ ಮೀಸೆ ಬಿಟ್ಟುಕೊಂಡು ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. 5 ಸೆಕೆಂಡಿನ ಈ ಪ್ರೋಮೋವನ್ನು ಸ್ಟಾರ್ ಸ್ಪೋರ್ಟ್ ನೆಟ್‌ವರ್ಕ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಧೋನಿಯ ವಿಭಿನ್ನ ಲುಕ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:IND vs SL: ಮೊಹಾಲಿ ಟೆಸ್ಟ್ ಕೊಹ್ಲಿಗಷ್ಟೇ ವಿಶೇಷವಲ್ಲ! ಶ್ರೀಲಂಕಾಗೂ ಅವಿಸ್ಮರಣೀಯ ಪಂದ್ಯವಾಗಲಿದೆ